More

    ಹೆಂಡತಿಯನ್ನು ಕೊಂದು ಮೃತದೇಹವನ್ನು ಎಂಟು ದಿನ ಮನೆಯಲ್ಲಿಟ್ಟದ್ದ ಗಂಡ ಸಿನಿಮೀಯ ರೀತಿಯಲ್ಲಿ ಅರೆಸ್ಟ್​!

    ಲಂಡನ್​: 28 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಇರಿದು ಕೊಂದು, ಆಕೆಯ ಶವವನ್ನು 200 ತುಂಡುಗಳನ್ನಾಗಿ ಕತ್ತರಿಸಿ ಅವುಗಳನ್ನು ಸ್ನೇಹಿತನೊಬ್ಬನ ಸಹಾಯದಿಂದ ನದಿಗೆ ಎಸೆದಿರುವ ಭೀಕರ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ.

    ಇದನ್ನೂ ಓದಿ: ಅಶ್ವಿನಿ ಪುನೀತ್​​ರಾಜ್​ಕುಮಾರ್​ ಬೆಂಬಲಕ್ಕೆ ನಿಂತ ನಟ ಜಗ್ಗೇಶ್; ನೇರವಾಗಿ ಇವರ ವಿರುದ್ಧ ಆಕ್ರೋಶ 

    28 ವರ್ಷದ ಆರೋಪಿ, ಲಿಂಕನ್ ನಗರದ ನಿವಾಸಿ ನಿಕೋಲಸ್ ಮೆಟ್ಸನ್ (28) ಹತ್ಯೆಗೈದ ಆರೋಪಿ. ನಿಕೋಲಸ್ ಮೆಟ್ಸನ್ ಎಂಬ ವ್ಯಕ್ತಿಯು ಪತ್ನಿ ಹಾಲಿ ಬ್ರಾಮ್ಲಿ (26) ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮೃತ ದೇಹದ ತುಂಡಗಳು ಎಂಟು ದಿನಗಳ ನಂತರ ಲಿಂಕನ್‌ಶೈರ್‌ನ ಬಾಸಿಂಗ್‌ಹ್ಯಾಮ್‌ನಲ್ಲಿರುವ ವಿಥಮ್ ನದಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಪ್ರಕರಣ ಎರಡನೇ ಆರೋಪಿ ವ್ಯಕ್ತಿ ಜೋಶುವಾ ಹ್ಯಾನ್‌ಕಾಕ್​ನನ್ನು (28) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಹವನ್ನು ತುಂಡು ತುಂಡಾಗಿ ಕತ್ತರಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ದಿನ ಕಳೆದಂತೆ ಸ್ನೇಹಿತನಿಗೆ 5 ಸಾವಿರ ರೂಪಾಯಿ ಕೊಟ್ಟು ಪತ್ನಿಯ ದೇಹದ ತುಂಡುಗಳನ್ನು ನದಿಗೆ ಎಸೆಯಲು ಹೇಳಿದ್ದಾನೆ.

    ಬಳಿಕ ಮಾರ್ಚ್​ 24 ರಂದು ಪೊಲೀಸರು ಆರೋಪಿಯ ಮನೆಗೆ ಹೋದಾಗ ಆತನು ತನ್ನ ಹೆಂಡತಿ ತನಗೆ ಕಾಟ ಕೊಡುತ್ತಿದ್ದಾಳೆ ಎಂದು ಆಕೆ ಕಚ್ಚಿದ ಕಲೆಯನ್ನು ತೋರಿಸಿದ್ದನಂತೆ. ಕೆಲವು ದಿನಗಳ ಹಿಂದೆ ಆಕೆ ತನ್ನ ಸ್ನೇಹಿತೆಯರ ಜತೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪೊಲೀಸರಿಗೆ ನಂಬಿಸಲು ಪ್ರಯತ್ನಿಸಿದ್ದಾನೆ.

    ಆದರೆ ಅನುಮಾನಗೊಂಡ ಪೊಲೀಸರು ಬಳಿಕ ಬಾತ್​ ಟಬ್​ನಲ್ಲಿ ರಕ್ತದ ಕಲೆಗಳನ್ನು ಕಾಣಿಸಿವೆ. ಜೊತೆಗೆ ಬ್ಲೀಚ್​ನ ವಾಸನೆ ಗಮನಿಸಿ ವ್ಯಕ್ತಿಯನ್ನು ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಜೊತೆಗೆ ಈ ಕೊಲೆ ಕೇಸ್​​ನಲ್ಲಿ ಭಾಗಿಯಾದ ನಿಕೋಲಸ್ ಮೆಟ್ಸನ್ ಸ್ನೇಹಿತ ಜೋಶುವಾ ಹ್ಯಾನ್‌ಕಾಕ್ (28) ಕೂಡ ಸೋಮವಾರ ಶಿಕ್ಷೆಯಾಗಲಿದೆ.

    ಗಜಪಡೆಯ ಕೀಳು ಮಟ್ಟದ ಪೋಸ್ಟ್‌ ವಿಚಾರಕ್ಕೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಆ್ಯಂಕರ್ ಅನುಶ್ರೀ! ಏನಿದೆ ಪೋಸ್ಟ್​ನಲ್ಲಿ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts