More

    ‘ಕೋಟಿಗೊಬ್ಬ 3’ ಚಿತ್ರದ ಹೊಸ ಪೋಸ್ಟರ್​ ರಿಲೀಸ್​

    ಸುದೀಪ್​ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದಿಂದ ಯಾವುದೇ ಅಪ್​ಡೇಟ್​ಗಳಿಲ್ಲ ಎಂದು ಅಭಿಮಾನಿಗಳು ಬೇಸರಿಸಿಕೊಳ್ಳುತ್ತಲೇ ಇದ್ದಾರೆ. ಏಕೆಂದರೆ, ಈ ಹಿಂದೆ ಒಂದು ಹಾಡು ಮತ್ತು ಟೀಸರ್​ ಬಿಟ್ಟರೆ, ಬೇರೇನೂ ಬಿಡುಗಡೆಯಾಗಿಲ್ಲ. ಬೇಸರದಲ್ಲಿದ್ದ ಅಭಿಮಾನಿಗಳಿಗೆ, ಸುದೀಪ್​ ಅವರ ಸಖತ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸ್ವಲ್ಪ ಸಮಾಧಾನ ಪಡಿಸಿಲಾಗಿದೆ.

    ಇದನ್ನೂ ಓದಿ: ಸದ್ಯದಲ್ಲೇ ‘ಚೌಕಾಬಾರ’ ಆಡಿ ಮುಗಿಸಲಿದ್ದಾರೆ ವಿಕ್ರಮ್​ ಸೂರಿ

    ಅಂದಹಾಗೆ, ಪೋಸ್ಟರ್​ ಬಿಡಗುಡೆಯಾಗಿದ್ದಕ್ಕೆ ಕಾರಣ, ನಿರ್ಮಾಪಕರ ಹುಟ್ಟುಹಬ್ಬ. ಇಂದು ‘ಕೋಟಿಗೊಬ್ಬ 3’ ಚಿತ್ರದ ನಿರ್ಮಾಪಕ ಎಂ.ಬಿ. ಬಾಬು ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆ ಶುಭಕೋರಿ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಸ್ವತಃ ಸುದೀಪ್​ ತಮ್ಮ ಟ್ವಿಟರ್​ ಹ್ಯಾಂಡಲ್​ ಮೂಲಕ ಈ ಪೋಸ್ಟರ್​ ಬಿಡುಗಡೆ ಮಾಡಿ, ಬಾಬುಗೆ ಶುಭ ಹಾರೈಸಿದ್ದಾರೆ.

    ಸುದೀಪ್​ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಚಿತ್ರೀಕರಣ ಈ ವರ್ಷದ ಆರಂಭದಲ್ಲೇ ಮುಗಿದಿತ್ತು. ಏಪ್ರಿಲ್​-ಮೇ ಹೊತ್ತಿಗೆ ಚಿತ್ರ ಬಿಡಗುಡೆಯಾಗುತ್ತದೆ ಎಂದು ಸಹ ಹೇಳಲಾಗಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರದ ಕೆಲಸಗಳೆಲ್ಲಾ ನಿಂತವು. ಈಗ ಲಾಕ್​ಡೌನ್​ ತೆರವಾಗಿ, ಚಿತ್ರ ಚಟುವಟಿಕೆಗಳು ಶುರುವಾಗಿದೆ. ಈ ಮಧ್ಯೆ, ‘ಕೋಟಿಗೊಬ್ಬ 3’ ಯಾವಾಗ ಬಿಡುಗಡೆಯಾಗುತ್ತದೆ ಎಂದು ಸುದೀಪ್​ ಅವರ ಅಭಿಮಾನಿಗಳು ಪ್ರಶ್ನಿಸಿದ್ದರು.

    ಈ ಕುರಿತು ಟ್ವೀಟ್​ ಮಾಡಿರುವ ಸುದೀಪ್​, ‘ಬಹಳಷ್ಟು ಜನ ‘ಕೋಟಿಗೊಬ್ಬ 3′ ಕುರಿತು ಏನಾದರೂ ಅಪ್​ಡೇಟ್​ ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್​ ಪ್ರೊಡಕ್ಷನ್​ ಸಹ ಬಹುತೇಕ ಮುಗಿದಿದೆ. ಈ ಮಧ್ಯೆ ಲಾಕ್​ಡೌನ್​ ಆಗಿರುವುದರಿಂದ, ಪೋಸ್ಟ್​ ಪ್ರೊಡಕ್ಷನ್​ ಕೆಲಸ ಬಾಕಿ ಉಳಿದಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಚಿತ್ರ ಬಿಡುಗಡೆ ಮಾಡುತ್ತೇವೆ’ ಎಂದು ಸುದೀಪ್​ ಹೇಳಿಕೊಂಡಿದ್ದರು.

    ಇದನ್ನೂ ಓದಿ: ಪಂಜಾಬ್​ ಲಿಕ್ಕರ್​ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸೋನು ಸೂದ್ ಅಭಯ

    ‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್​, ಅಫ್ತಾಬ್​ ಶಿವದಾಸಾನಿ, ರವಿಶಂಕರ್​ ಮುಂತಾದವರು ನಟಿಸಿದ್ದಾರೆ. ಶಿವಕಾರ್ತಿಕ್​ ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಇನ್ನು ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಬಿಡುಗಡೆಯಾದ ಒಂದು ಹಾಡು ಜನಪ್ರಿಯವಾಗಿದೆ.

    ಬಾಲಿವುಡ್​ ಕಾಮಕಾಂಡದಲ್ಲಿ ಘಟಾನುಘಟಿಗಳು!; ಕೆಜಿಎಫ್​ ನಟಿ ಮೌನಿ ರಾಯ್​, ಊರ್ವಶಿ ರೌಟೇಲಾ ಭಾಗಿ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts