More

    ಡಿಎಆರ್​​ಪಿಜಿಗೆ ಕೇಂದ್ರ ನೀಡಿದ ಹೊಸ ರಕ್ಷಣಾ ಮಾರ್ಗಸೂಚಿಯಲ್ಲಿ ಏನೇನಿವೆ.?

    ನವದೆಹಲಿ: ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆಯಲ್ಲಿನ (ಡಿಎಆರ್‌ಪಿಜಿ) ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೇಂದ್ರ ಸರ್ಕಾರ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ ಏನು ಉದ್ಯೋಗ ಕೊಡುತ್ತೀರಿ? ರಾಜ್ಯಗಳಿಗೆ ವಿವರ ಕೇಳಿದ ಸುಪ್ರೀಂ ಕೋರ್ಟ್

    ಈ ಸುತ್ತೋಲೆಯಲ್ಲಿ, ರೋಗಲಕ್ಷಣವಿಲ್ಲದ ಸಿಬ್ಬಂದಿ ಮಾತ್ರ ಕಚೇರಿಗೆ ಬರುವಂತೆ ಹಾಗೂ ಲಘು ಶೀತ, ಜ್ವರ ಕೆಮ್ಮು ಇರುವವರೆಲ್ಲರೂ ಮನೆಯಲ್ಲೇ ಇರಬೇಕು ಎಂದು ತಿಳಿಸಲಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿರುವ ಸಿಬ್ಬಂದಿ ಕಡ್ಡಾಯವಾಗಿ ಮನೆಯಿಂದಲೇ ಕೆಲಸ ಮಾಡಬೇಕು. ಒಂದು ದಿನಕ್ಕೆ ಡಿಎಆರ್​ಪಿಯ ಕನಿಷ್ಠ 20 ಅಧಿಕಾರಿಗಳು ಮತ್ತು ಸಿಬ್ಬಂದಿ ಸದಸ್ಯರು ಮಾತ್ರ ಕಚೇರಿಗೆ ಹಾಜರಾಗಬೇಕು. ಅದಕ್ಕೆ ಅನುಗುಣವಾಗಿ ಡ್ಯೂಟಿ ಚಾರ್ಟ್ ಮಾಡಲು ಆಡಳಿತ ಇಲಾಖೆಗೆ ಜೂನ್ 5ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ಕರೊನಾ ರೋಗಿಗಳಿಗಿನ್ನು ಮನೆಯೇ ಆಸ್ಪತ್ರೆ; ಜೇಬಿಗೆ ತಕ್ಕಂಥ ಟ್ರೀಟ್​ಮೆಂಟ್​ ಪ್ಯಾಕೇಜ್​

    ಸುತ್ತೋಲೆಯಲ್ಲಿ ಡಿಎಆರ್‌ಪಿಜಿ ಉದ್ಯೋಗಿಗಳಿಗೆ ಸೂಚಿಸಲಾದ ಇತರ ಮಾನದಂಡಗಳೆಂದರೆ:
    • ಫೇಸ್ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಗಳನ್ನು ಕಚೇರಿಯ ಅವಧಿಯಲ್ಲಿ ಕಡ್ಡಾಯವಾಗಿ ಧರಿಸಬೇಕು.
    * ಬಳಸಿದ ಮಾಸ್ಕ್ ಮತ್ತು ಕೈಗವಸುಗಳನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ತೊಟ್ಟಿಯಲ್ಲಿ ಮಾತ್ರ ಹಾಕಬೇಕು.
    • ಮುಖಾಮುಖಿ ಸಭೆಗಳು / ಚರ್ಚೆಗಳು / ಸಂವಾದಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಈ ಉದ್ದೇಶಗಳಿಗಾಗಿ ಸಿಬ್ಬಂದಿ ಇಂಟರ್​​ಕಾಮ್, ಫೋನ್ ಬಳಸಬೇಕು ಅಥವಾ ವಿಡಿಯೋ -ಕಾನ್ಫರೆನ್ಸ್ ಮಾಡಬೇಕು.

    ಇದನ್ನೂ ಓದಿ: VIDEO: ಜನಾಂಗೀಯ ದ್ವೇಷದ ವಿರುದ್ಧ ಚುಂಬಿಸುತ್ತಾ ಪ್ರತಿಭಟನೆ ಮಾಡಿದ ನವದಂಪತಿ!

    * ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪ್ರತಿ ಅರ್ಧಗಂಟೆಗೊಮ್ಮೆ ಕೈ ತೊಳೆಯುವುದು ಅತ್ಯಗತ್ಯ. ಕಾರಿಡಾರ್‌ನ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಅಳವಡಿಸಬೇಕು.
    * ಆಗಾಗ ಮುಟ್ಟಬಹುದಾದ ಸ್ವಿಚ್‌, ಬಾಗಿಲು ಗುಬ್ಬಿಗಳು, ಎಲಿವೇಟರ್ ಗುಂಡಿಗಳು, ಕೈ ಹಳಿಗಳಂಥ ಸಾಧನಗಳನ್ನು ಪ್ರತಿ ಗಂಟೆಗೊಮ್ಮೆ ಸ್ವಚ್ಛಗೊಳಿಸಬೇಕು.

    ಇದನ್ನೂ ಓದಿ: ಪೆಟ್ಟಿಗೆಯಲ್ಲಿತ್ತು ಅಪರಿಚಿತ ಮಹಿಳೆ ಶವ : ಕೊಲೆ ಪ್ರಕರಣ ದಾಖಲು

    * ಕೀಬೋರ್ಡ್‌ಗಳು, ಮೌಸ್, ಫೋನ್, ಎಸಿ ರಿಮೋಟ್‌ಗಳು ಮುಂತಾದ ವೈಯಕ್ತಿಕ ಸಾಧನಗಳನ್ನು ಆಗಾಗ್ಗೆ ಎಥೆನಾಲ್ ಆಧಾರಿತ ಸೋಂಕುನಿವಾರಕವನ್ನು ಬಳಸಿ ಸ್ವಚ್ಛಗೊಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
    ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ.

    ಇದನ್ನೂ ಓದಿ: ಹಾಲಿ ಶೈಕ್ಷಣಿಕ ವರ್ಷ ಶೂನ್ಯ ಶೈಕ್ಷಣಿಕ ವರ್ಷ ಆಗಲಿ ಎನ್ನುತ್ತಿರುವ ಶಿಕ್ಷಕರು

    ಸಂಸತ್ತಿನ ಇಬ್ಬರು ಸಿಬ್ಬಂದಿಗೆ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯದ (ಎಂಇಎ) ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಸಿಬ್ಬಂದಿಗೂ ಕಳೆದ ತಿಂಗಳು ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿತ್ತು.
    ನವದೆಹಲಿಯ ಇತರ ಭಾಗಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುವ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿಯೂ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ.

    ಇದನ್ನೂ ಓದಿ: ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ: ಸಿಬಿಎಸ್ಸಿಗೆ ಬಗೆಹರಿಯದ ಗೊಂದಲ

    ದೇಶದಲ್ಲಿ ಪ್ರಸ್ತುತ 2,66,598 ಕೋವಿಡ್ -19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಮಂಗಳವಾರದ ವರೆಗೆ ಅಂದಾಜು 7466 ಜನ ಸಾವಿಗೀಡಾಗಿದ್ದಾರೆ.

    ಮುಂದುವರೆದಿದೆ ಆನ್​ಲೈನ್​ ತರಗತಿ ಅನಾಹುತ: ಸ್ಮಾರ್ಟ್​ಫೋನ್​ ಇಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts