More

    ಅಯೋಧ್ಯೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು

    ನವೆಂಬರ್​: ಡಿಸೆಂಬರ್ 30 ರಂದು ಉದ್ಘಾಟನೆಗೊಳ್ಳಲಿರುವ ಅಯೋಧ್ಯೆಯ ವಿಮಾನ ನಿಲ್ದಾಣವನ್ನು ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾಧಾಮ’ ಎಂದು ಮರುನಾಮಕರಣ ಮಾಡಲಾಗಿದೆ.

    ಈ ವಿಮಾನ ನಿಲ್ದಾಣವನ್ನು ಮೊದಲು ‘ಮರ್ಯಾದಾ ಪುರಷೋತ್ತಮ ಶ್ರೀ ರಾಮ ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಕರೆಯಲಾಗುತ್ತಿತ್ತು. ರಾಮಾಯಣ ಮಹಾಕಾವ್ಯದ ಕರ್ತೃವಾಗಿರುವ ಪೌರಾಣಿಕ ಕವಿ ವಾಲ್ಮೀಕಿ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಾಗಿದೆ.

    ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಕೆಲವು ದಿನಗಳ ಮೊದಲು ಹೊಸದಾಗಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಉದ್ಘಾಟಿಸಲಿದ್ದಾರೆ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭವು ಜನವರಿ 22, 2024 ರಂದು ನಡೆಯಲಿದೆ.

    ಉದ್ಘಾಟನೆಯ ದಿನದಂದು ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಮೊದಲ ವಿಮಾನಗಳು ಕಾರ್ಯನಿರ್ವಹಿಸಲಿವೆ. ಎರಡು ವಿಮಾನಯಾನ ಸಂಸ್ಥೆಗಳು ಈಗಾಗಲೇ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಿಂದ ಅಯೋಧ್ಯೆಗೆ ವಿಮಾನಗಳನ್ನು ಪ್ರಕಟಿಸಿದ್ದು, ಜನವರಿ 2024 ರಲ್ಲಿ ಪ್ರಾರಂಭವಾಗುತ್ತದೆ.

    ವಿಮಾನ ನಿಲ್ದಾಣದ ಮೊದಲ ಹಂತದ ನಿರ್ಮಾಣಕ್ಕೆ ಅಂದಾಜು 1,450 ಕೋಟಿ ರೂ. ವ್ಯಯಿಸಲಾಗಿದೆ. 6,500 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ಹೊಸ ಟರ್ಮಿನಲ್ ಕಟ್ಟಡವು 600 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ. ವಾರ್ಷಿಕವಾಗಿ 10 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

    ಎರಡನೇ ಹಂತದ ಅಭಿವೃದ್ಧಿಯಲ್ಲಿ 50,000 ಚದರ ಮೀಟರ್‌ನ ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಲಾಗುವುದು, 3,000 ಪ್ರಯಾಣಿಕರು ಮತ್ತು ವಾರ್ಷಿಕ 60 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಭವಿಷ್ಯದಲ್ಲಿ ಇದು ಹೊಂದಲಿದೆ ಎಂದು ಮೂಲಗಳು ತಿಳಿಸಿವೆ.

    2023ರಲ್ಲಿ ಎಲ್ಲ ವಲಯಗಳಲ್ಲಿ ಉತ್ತಮ ಸಂಬಳ: ಅತಿಹೆಚ್ಚು ಡಿಮ್ಯಾಂಡ್​ ಇರುವ ಉದ್ಯೋಗಗಳು ಯಾವವು?

    ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಬಹುತೇಕ ದುಪ್ಪಟ್ಟು: ಇದಕ್ಕೆ ಕಾರಣಗಳೇನು?

    ಮತ್ತೆ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ಬಿಎಸ್​ಇ, ನಿಫ್ಟಿ ಸೂಚ್ಯಂಕಗಳು: ಮಿಡ್​-ಸ್ಮಾಲ್​ ಕ್ಯಾಪ್​ ಸೆನ್ಸೆಕ್ಸ್​ಗಳು ಏರಿದ್ದೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts