More

    ಮತ್ತೆ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ಬಿಎಸ್​ಇ, ನಿಫ್ಟಿ ಸೂಚ್ಯಂಕಗಳು: ಮಿಡ್​-ಸ್ಮಾಲ್​ ಕ್ಯಾಪ್​ ಸೆನ್ಸೆಕ್ಸ್​ಗಳು ಏರಿದ್ದೆಷ್ಟು?

    ಮುಂಬೈ: ಭಾರತೀಯ ಷೇರು ಸೂಚ್ಯಂಕಗಳು ಗುರುವಾರ ಮತ್ತೆ ಹೊಸ ಗರಿಷ್ಠ ಮಟ್ಟ ತಲುಪುವುದರೊಂದಿಗೆ ದಾಖಲೆ ಬರೆದವು, ಅಂತಾರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ಬೆಲೆಗಳ ಇಳಿಕೆ ಹಾಗೂ ಸಕಾರಾತ್ಮಕ ಜಾಗತಿಕ ಆರ್ಥಿಕ ಸೂಚನೆಯ ನಡುವೆ ಷೇರು ಮಾರುಕಟ್ಟೆಗೆ ಹೊಸ ವಿದೇಶಿ ನಿಧಿ ಹರಿಬಂದಿರುವುದು ಸೂಚ್ಯಂಕ ಹೆಚ್ಚಳಕ್ಕೆ ಕೊಡುಗೆ ನೀಡಿತು. ಇಂಧನ, ಲೋಹ ಮತ್ತು ಎಫ್‌ಎಂಸಿಜಿ ಷೇರುಗಳಲ್ಲಿ ಭಾರಿ ಖರೀದಿ ವಹಿವಾಟು ಕೂಡ ಸೂಚ್ಯಂಕ ಏರಿಕೆಗೆ ಕಾರಣವಾಯಿತು.

    ಸತತ ಐದನೇ ದಿನವೂ ಏರಿದ 30 ಷೇರುಗಳ ಎಸ್ ಆ್ಯಂಡ್​ ಪಿ ಬಿಎಸ್‌ಇ ಸೂಚ್ಯಂಕವು ಗುರುವಾರದಂದು 371.95 ಅಂಕ ಅಥವಾ 0.52 ಶೇಕಡಾ ಹೆಚ್ಚಳದೊಂದಿಗೆ 72,410.38 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನ ನಡುವೆ ಇದು 445.91 ಅಂಕ ಏರಿ ತನ್ನ ಜೀವಿತಾವಧಿಯ ಗರಿಷ್ಠ 72,484.34 ಮಟ್ಟವನ್ನು ತಲುಪಿತ್ತು.

    ನಿಫ್ಟಿ ಸೂಚ್ಯಂಕ ಕೂಡ 123.95 ಅಂಕ ಅಥವಾ ಶೇಕಡಾ 0.57 ರಷ್ಟು ಏರಿಕೆಯಾಗಿ 21,778.70 ರ ಹೊಸ ದಾಖಲೆ ಮಟ್ಟವನ್ನು ತಲುಪಿತು. ದಿನದ ವಹಿವಾಟಿನ ನಡುವೆ ಇದು 146.7 ಅಂಕ ಹೆಚ್ಚಳ ಕಂಡು ಜೀವಮಾನದ ಗರಿಷ್ಠ 21,801.45 ಮಟ್ಟವನ್ನು ತಲುಪಿತ್ತು.

    ಕೆಂಪು ಸಮುದ್ರದ ಸಮಸ್ಯೆ ಮತ್ತು ಎಫ್‌ಐಐ (ವಿದೇಶಿ ಸಾಂಸ್ಥಿಕ ಹೂಡಿಕೆದಾರರು) ಒಳಹರಿವಿನ ಹಿಮ್ಮುಖವನ್ನು ಮೆಟ್ಟಿ ನಿಂತು ಸೂಚ್ಯಂಕವು ಹೊಸ ಎತ್ತರ ಮುಟ್ಟಿತು. ಕಚ್ಚಾ ತೈಲ ಬೆಲೆಗಳು ಕುಸಿದು ಬ್ಯಾರೆಲ್​ಗೆ 80 ಡಾಲರ್​ಗಿಂತ ಕಡಿಮೆ ಮಟ್ಟ ತಲುಪಿದ್ದರಿಂದ ತೈಲ ಮತ್ತು ಇಂಧನ ಕಂಪನಿಗಳ ಷೇರುಗಳಲ್ಲಿ ವ್ಯಾಪಕವಾದ ಖರೀದಿ ನಡೆಯಿತು.

    “ಮುಂದಿನ ವರ್ಷ ಅಮೆರಿಕದ ಕೇಂದ್ರೀಯ ಬ್ಯಾಂಕ್​ ವ್ಯಾಪಕವಾಗಿ ಬಡ್ಡಿ ದರ ಕಡಿತ ಮಾಡುವ ನಿರೀಕ್ಷೆ ಇರುವುದರಿಂದ ಏಷ್ಯಾದ ಷೇರು ಮಾರುಕಟ್ಟೆಗಳು ಏರುಗತಿಯಲ್ಲಿ ಮುಂದುವರಿದಿವೆ” ಎಂದು ವಿಶ್ಲೇಷಕರು ಹೇಳಿದ್ದಾರೆ.

    ಎನ್‌ಟಿಪಿಸಿ, ಮಹೀಂದ್ರಾ ಆಂಡ್ ಮಹೀಂದ್ರಾ, ಪವರ್ ಗ್ರಿಡ್, ನೆಸ್ಲೆ, ಟಾಟಾ ಮೋಟಾರ್ಸ್, ಐಟಿಸಿ, ಭಾರ್ತಿ ಏರ್‌ಟೆಲ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್​ಗಳ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ಇದಕ್ಕೆ ವ್ಯತಿರಿಕ್ತವಾಗಿ, ಲಾರ್ಸೆನ್ ಮತ್ತು ಟೂಬ್ರೊ, ವಿಪ್ರೋ, ಜೆಎಸ್‌ಡಬ್ಲ್ಯೂ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಏಷ್ಯನ್ ಪೇಂಟ್ಸ್ ಷೇರುಗಳ ಬೆಲೆ ಕುಸಿತ ಅನುಭವಿಸಿದವು.

    ಏಷ್ಯನ್ ಮಾರುಕಟ್ಟೆಗಳ ಪೈಕಿ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಲಾಭದಲ್ಲಿ ಮುನ್ನಡೆದರೆ, ಟೋಕಿಯೊ ಹಿನ್ನಡೆ ಅನುಭವಿಸಿತು. ಐರೋಪ್ಯ ಮಾರುಕಟ್ಟೆಗಳಲ್ಲಿ ಸ್ವಲ್ಪ ಕಡಿಮೆ ವಹಿವಾಟು ನಡೆಯಿತು. ಅಮೆರಿಕದ ಮಾರುಕಟ್ಟೆಗಳು ಬುಧವಾರ ಒಂದಿಷ್ಟು ಲಾಭ ದಾಖಲಿಸಿದವು.

    ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 0.73 ರಷ್ಟು ಕುಸಿದು 79.07 ಡಾಲರ್​ಗೆ ತಲುಪಿದೆ.

    ಬುಧವಾರದಂದು ಬಿಎಸ್‌ಇ ಸೂಚ್ಯಂಕವು 701.63 ಅಂಕ ಅಥವಾ ಶೇಕಡಾ 0.98 ರಷ್ಟು ಏರಿಕೆಯಾಗಿ 72,038.43 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ನಿಫ್ಟಿ ಸೂಚ್ಯಂಕವು 213.40 ಅಂಕ ಅಥವಾ ಶೇಕಡಾ 1 ರಷ್ಟು ಏರಿಕೆಯಾಗಿ 21,654.75 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

    ಗುರುವಾರ ವಿವಿಧ ಸೂಚ್ಯಂಕಗಳು ಈ ರೀತಿ ಇವೆ:

    S&P BSE Sensex (30 ಬೃಹತ್​ ಕಂಪನಿಗಳ ಸೂಚ್ಯಂಕ): 72,410.38 (371.95 ಅಂಕ ಅಥವಾ ಶೇ. 0.52)
    NIFTY 50 (50 ಬೃಹತ್​ ಕಂಪನಿಗಳ ಸೂಚ್ಯಂಕ): 21,778.70 (123.95 ಅಂಕ ಅಥವಾ ಶೇಕಡಾ 0.57 ಏರಿಕೆ)
    ಬಿಎಸ್​ಇ ಮಿಡ್​ ಕ್ಯಾಪ್​ ಸೂಚ್ಯಂಕ: 36528.19 (241.30 ಅಂಕ ಅಥವಾ ಶೇ. 0.66 ಏರಿಕೆ)
    ನಿಫ್ಟಿ ಮಿಡ್​ ಕ್ಯಾಪ್​ 100 ಸೂಚ್ಯಂಕ: 45815.25 (256.30 ಅಂಕ ಅಥವಾ 0.56% ಏರಿಕೆ)
    ಬಿಎಸ್​ಇ ಸ್ಮಾಲ್​ ಕ್ಯಾಪ್ ಸೂಚ್ಯಂಕ: 42,382.30 (95.39 ಅಥವಾ ಶೇ. 0.23 ಏರಿಕೆ)
    ನಿಫ್ಟಿ ಸ್ಮಾಲ್​ ಕ್ಯಾಪ್ 100 ಸೂಚ್ಯಂಕ​: 15051.25 (117.90 ಅಂಕ ಅಥವಾ 0.79%)

    ಕೇವಲ 9 ತಿಂಗಳಲ್ಲಿ ರೂ. 5 ಕೋಟಿ ಹೂಡಿಕೆ ಮಾಡಿ ರೂ. 31.5 ಕೋಟಿ ಗಳಿಕೆ: ಸಚಿನ್​ ತೆಂಡೂಲ್ಕರ್​ ಯಾವ ಕಂಪನಿ ಷೇರುಗಳಲ್ಲಿ ಹಣ ತೊಡಗಿಸಿದ್ದರು ಗೊತ್ತೆ?

    26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಸ್ತಾಂತರಿಸಲು ಭಾರತ ಆಗ್ರಹ: ಪಾಕ್​ನಲ್ಲಿ ಈತ ಏನು ಮಾಡುತ್ತಿದ್ದಾನೆ?

    ಕತಾರ್​ನಲ್ಲಿ 8 ಮಂದಿ ಭಾರತೀಯರಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯಲ್ಲಿ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts