More

    ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಬಹುತೇಕ ದುಪ್ಪಟ್ಟು: ಇದಕ್ಕೆ ಕಾರಣಗಳೇನು?

    ನವದೆಹಲಿ: ಮ್ಯೂಚುವಲ್ ಫಂಡ್ ಉದ್ಯಮಕ್ಕೆ ಕಳೆದ ನವೆಂಬರ್ ತಿಂಗಳಲ್ಲಿ 25,616 ಕೋಟಿ ರೂ.ಗಳಷ್ಟು ಹೂಡಿಕೆ ಹರಿದುಬಂದಿದೆ, ಒಂದು ವರ್ಷದ ಹಿಂದೆ ಅಂದರೆ, 2022ರ ನವೆಂಬರ್​ ತಿಂಗಳಿಗೆ ಹೋಲಿಸಿದರೆ ಇದು ಶೇಕಡಾ 93ರಷ್ಟು ಹೆಚ್ಚಳವಾಗಿದೆ. 2022ರ ನವೆಂಬರ್​ನಲ್ಲಿ 13,264 ಕೋಟಿ ರೂಪಾಯಿ ಹೂಡಿಕೆ ಮ್ಯೂಚುವಲ್ ಫಂಡ್​ಗಳಲ್ಲಿ ಮಾಡಲಾಗಿತ್ತು. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೂಡಿಕೆ ಪ್ರಮಾಣ ಬಹುತೇಕ ದುಪ್ಪಟ್ಟಾಗಿದೆ.

    ಈ ವರ್ಷದ ಆರಂಭದಿಂದ ನಿವ್ವಳ ಒಳಹರಿವಿನಲ್ಲಿ ಶೇಕಡಾ 125 ರಷ್ಟು ಏರಿಕೆಯನ್ನು ಕಂಡಿರುವ ಭಾರತೀಯ ಮ್ಯೂಚುವಲ್ ಫಂಡ್ ಉದ್ಯಮವು 2024 ರಲ್ಲಿ ತನ್ನ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ICRA ( Investment Information and Credit Rating Agency of India Limited) ವರದಿ ಹೇಳಿದೆ. ಭಾರತದ ಆರ್ಥಿಕತೆಯ ಬಲವಾದ ಸ್ಥೂಲ ಮೂಲಭೂತ ಅಂಶಗಳು ಮತ್ತು ಚೇತರಿಕೆ ಕಾರಣದಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಅದು ಹೇಳಿದೆ.

    2024 ಹೊಸ ವರ್ಷದಲ್ಲಿ ಕೂಡ ಈ ಉದ್ಯಮವು ಮುಂದುವರಿದ ಒಳಹರಿವುಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ, ಅಂದರೆ, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಹೆಚ್ಚಾಗಲಿದೆ. ಇದು ದೇಶದಲ್ಲಿನ ಬ್ಯಾಂಕ್​ ಬಡ್ಡಿ ದರದ ಚಲನೆಯನ್ನು ಅವಲಂಬಿಸಲಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಕಡಿಮೆ ಮಟ್ಟದಲ್ಲಿ ಇರಲಿವೆ ಎಂದು ICRA ಅನಾಲಿಟಿಕ್ಸ್‌ನ ಮಾರ್ಕೆಟ್ ಡೇಟಾ ಮುಖ್ಯಸ್ಥ ಅಶ್ವಿನಿ ಕುಮಾರ್ ಹೇಳಿದ್ದಾರೆ.

    ಷೇರಯ ಮಾರುಕಟ್ಟೆಯ ಭಾವನೆಗಳಿಗೆ ನೆರವಾಗುವ ಪ್ರಮುಖ ಅಂಶಗಳಾದ ಭಾರತದ ಆರ್ಥಿಕತೆಯ ಬಲವಾದ ಸ್ಥೂಲ ಮೂಲಭೂತ ಅಂಶಗಳು, ಹಣದುಬ್ಬರ ನಿಯಂತ್ರಣ, ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರ ಕಡಿತದ ಸಾಧ್ಯತೆಯೊಂದಿಗೆ ಸೇರಿಕೊಂಡಿವೆ ಎಂದೂ ಅವರು ಹೇಳಿದ್ದಾರೆ.

    ದೇಶೀಯ ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟಾರೆ ಹೂಡಿಕೆಯು ನವೆಂಬರ್ 2023 ರಲ್ಲಿ ರೂ. 50 ಲಕ್ಷ ಕೋಟಿಯ ಗಡಿಯನ್ನು ತಲುಪಿದೆ. ಅಲ್ಲದೆ, ಮುಂದಿನ ಕೆಲವು ವರ್ಷಗಳಲ್ಲಿ ರೂ. 100 ಲಕ್ಷ ಕೋಟಿಗಳನ್ನು ಸಾಧಿಸುವ ಗುರಿಯತ್ತ ಸಾಗಿದೆ. ಈ ನಿವ್ವಳ ಹೂಡಿಕೆ ಮೊತ್ತವು ನವೆಂಬರ್ 30, 2023 ಕ್ಕೆ ಅಂದಾಜು 49.05 ಲಕ್ಷ ಕೋಟಿ ರೂ.ಗಳಷ್ಟಿತ್ತು, ಜನವರಿ 31, 2023 ಕ್ಕೆ ಈ ಮೊತ್ತವು 39.62 ಲಕ್ಷ ಕೋಟಿ ರೂ. ಇತ್ತು.

    2023 ರಲ್ಲಿ ಮ್ಯೂಚುಯಲ್ ಫಂಡ್ ಲ್ಯಾಂಡ್‌ಸ್ಕೇಪ್ ಅನ್ನು ಬದಲಾಯಿಸುವ ಪ್ರಮುಖ ನಿಯಂತ್ರಕ ಬದಲಾವಣೆಗಳು ಯಾವುವು?

    SIP ಗಳಲ್ಲಿ (ವ್ಯವಸ್ಥಿತ ಹೂಡಿಕೆ ಯೋಜನೆ) ತಿಂಗಳಿಗೆ ಕನಿಷ್ಠ 250 ರೂ.ಗಳ ಹೂಡಿಕೆಗೆ ಅವಕಾಶ ನೀಡಿರುವುದು ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಅನುಕೂಲ ಮಾಡಿಕೊಟ್ಟಿದೆ. ಅಕ್ಟೋಬರ್ 2023 ರಲ್ಲಿ 7.30 ಕೋಟಿ ಖಾತೆಗಳಿಗೆ ಹೋಲಿಸಿದರೆ 2023 ರ ನವೆಂಬರ್‌ನಲ್ಲಿ ಖಾತೆಗಳ ಸಂಖ್ಯೆ ಸಾರ್ವಕಾಲಿಕ ಗರಿಷ್ಠ 7.44 ಕೋಟಿಗೆ ತಲುಪಿದೆ.

    ಈಕ್ವಿಟಿಗಳ ಯೋಜನೆಗಳಡಿ ನವೆಂಬರ್ 2023 ರವರೆಗೆ ಸ್ಮಾಲ್ ಕ್ಯಾಪ್ ಮ್ಯೂಚುವಲ್​ ಫಂಡ್‌ಗಳಲ್ಲಿ ರೂ 37,177.98 ಕೋಟಿಗಳ ಗರಿಷ್ಠ ಹೂಡಿಕೆ ಕಂಡುಬಂದಿದೆ. ಮಿಡ್-ಕ್ಯಾಪ್ ವಿಭಾಗದಲ್ಲೂ ಹೂಡಿಕೆ ಉತ್ತಮವಾಗಿದೆ. ಇದೇ ಬೆಳವಣಿಗೆಯು ಮುಂದುವರಿಯುವ ನಿರೀಕ್ಷೆಯಿದೆ.

    ಮತ್ತೆ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ಬಿಎಸ್​ಇ, ನಿಫ್ಟಿ ಸೂಚ್ಯಂಕಗಳು: ಮಿಡ್​-ಸ್ಮಾಲ್​ ಕ್ಯಾಪ್​ ಸೆನ್ಸೆಕ್ಸ್​ಗಳು ಏರಿದ್ದೆಷ್ಟು?

    ಕೇವಲ 9 ತಿಂಗಳಲ್ಲಿ ರೂ. 5 ಕೋಟಿ ಹೂಡಿಕೆ ಮಾಡಿ ರೂ. 31.5 ಕೋಟಿ ಗಳಿಕೆ: ಸಚಿನ್​ ತೆಂಡೂಲ್ಕರ್​ ಯಾವ ಕಂಪನಿ ಷೇರುಗಳಲ್ಲಿ ಹಣ ತೊಡಗಿಸಿದ್ದರು ಗೊತ್ತೆ?

    26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಸ್ತಾಂತರಿಸಲು ಭಾರತ ಆಗ್ರಹ: ಪಾಕ್​ನಲ್ಲಿ ಈತ ಏನು ಮಾಡುತ್ತಿದ್ದಾನೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts