More

    2023ರಲ್ಲಿ ಎಲ್ಲ ವಲಯಗಳಲ್ಲಿ ಉತ್ತಮ ಸಂಬಳ: ಅತಿಹೆಚ್ಚು ಡಿಮ್ಯಾಂಡ್​ ಇರುವ ಉದ್ಯೋಗಗಳು ಯಾವವು?

    ಮುಂಬೈ: ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್- AI) ತಜ್ಞರು, ಕ್ಲೌಡ್ ಇಂಜಿನಿಯರ್‌ಗಳು ಮತ್ತು ಮಾರ್ಕೆಟಿಂಗ್ ಗುರುಗಳನ್ನು ಹಿಂದಿಕ್ಕಿ ಈ ಉದ್ಯೋಗಿಗಳು, ವೃತ್ತಿಪರರು 2023ರಲ್ಲಿ ಅತಿ ಹೆಚ್ಚು ಸರಾಸರಿ ವೇತನವನ್ನು ಪಡೆದರು.

    ಯಾವ ರೀತಿ ಸೇವೆ ಮತ್ತು ಉದ್ಯೋಗಗಳಿಗೆ ಕಂಪನಿಗಳು ಯಾವ ಪ್ರಮಾಣದಲ್ಲಿ ಹಣವನ್ನು ಪಾವತಿಸಿವೆ ಎಂಬುದನ್ನು ಆಧರಿಸಿ ನೇಮಕಾತಿ ಕಂಪನಿಯಾದ ರಾಂಡ್‌ಸ್ಟಾಡ್ ಇಂಡಿಯಾ ವರದಿಯು ಇಂತಹ ವಿವರಗಳನ್ನು ಬಹಿರಂಗಪಡಿಸಿದೆ.

    ವೃತ್ತಿಪರ ಸೇವೆಗಳು ಹಿರಿಯ ಅನುಭವಿಗಳ ಮಟ್ಟದಲ್ಲಿ (15 ವರ್ಷಗಳ ಅನುಭವದ) ಅತಿಹೆಚ್ಚು ಪಾವತಿಸುವ ಉದ್ಯಮವಾಗಿ ಹೊರಹೊಮ್ಮಿವೆ, ಅಂದರೆ, ಕಂಪನಿಗಳು ಅಥವಾ ಉದ್ಯಮ ಸಂಸ್ಥೆಗಳು ವೃತ್ತಿಪರ ಸೇವೆಗಳನ್ನು ಪಡೆದುಕೊಳ್ಳಲು ಹೆಚ್ಚಿನ ಹಣವನ್ನು ಪಾವತಿಸಿವೆ. ವೃತ್ತಿಪರ ಸೇವೆಗಳಾಗಿ ಕಂಪನಿಗಳು ಪಾವತಿಸುವ ಸರಾಸರಿ ವೆಚ್ಚವು ವರ್ಷಕ್ಕೆ 39 ಲಕ್ಷ ರೂಪಾಯಿಗಳಿಗಿಂತ ಸ್ವಲ್ಪ ಹೆಚ್ಚು. ಇದರ ನಂತರದಲ್ಲಿ ಇಂಟರ್​ನೆಟ್​ ಮತ್ತು ಇ-ಕಾಮರ್ಸ್ ವಲಯಗಳು (ರೂ. 38 ಲಕ್ಷ ) ಮತ್ತು ಐಟಿ ಸಂಬಂಧಿತ ಸೇವೆಗಳಿಗೆ (ರೂ. 33 ಲಕ್ಷ) ಹಣವನ್ನು ಕಂಪನಿಗಳು ಪಾವತಿಸುತ್ತವೆ.

    2023 ರ ವರ್ಷವು ಭಾರತದ ಉದ್ಯೋಗ ಕ್ಷೇತ್ರದಲ್ಲಿ ಗೇಮ್​ ಚೇಂಜರ್​ ಅಗಿದೆ. ಏಕೆಂದರೆ ಉದ್ಯೋಗ ಮಾರುಕಟ್ಟೆಯು ವಿವಿಧ ಸ್ಥೂಲ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಅಲೆಗಳ ಪ್ರಭಾವಗಳ ಮೂಲಕ ಸಾಗಿ ಬಂದಿದೆ. ಅಲ್ಲದೆ, ಇದು ಹಿಂದಿನ ವರ್ಷದಿಂದ ಗತಿಯನ್ನು ಉಳಿಸಿಕೊಂಡಿದೆ ಎಂದು ವರದಿ ಹೇಳಿದೆ.

    ಭಾರತದಾದ್ಯಂತ ಬಹುಪಾಲು ಕ್ಷೇತ್ರಗಳಲ್ಲಿ ಕಂಪನಿಗಳು ಹೆಚ್ಚಿನ ನೇಮಕಾತಿಗಳನ್ನು ಮಾಡಿಕೊಂಡಿವೆ. ಇದಲ್ಲದೆ, ಸೇವೆಗೆ ಪಾವತಿಸುವಲ್ಲಿ ಸ್ಥಿರವಾದ ಬೆಳವಣಿಗೆಯನ್ನು ನಾವು ಗಮನಿಸಿದ್ದೇವೆ. ಇದು ಭಾರತೀಯ ಉದ್ಯೋಗ ಮಾರುಕಟ್ಟೆಯು ಹೇಗೆ ಕ್ರಮೇಣವಾಗಿ ಪ್ರತಿಭಾನ್ವಿತರಾಗಿ ಮಣೆ ಹಾಕುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದೂ ವರದಿ ಹೇಳಿದೆ.

    ರಾಂಡ್‌ಸ್ಟಾಡ್‌ನ ವಾರ್ಷಿಕ ವೇತನ ಪ್ರವೃತ್ತಿಗಳ ವರದಿಯ ಪ್ರಕಾರ, ಇಂಧನ ಮತ್ತು ಯುಟಿಲಿಟಿ, ಚಿಲ್ಲರೆ ವ್ಯಾಪಾರ, FMCG ಮತ್ತು FMCD (ವೇಗವಾಗಿ ಮಾರಾಟವಾಗುವ ಗ್ರಾಹಕ ವಸ್ತುಗಳು) ಈ ಉದ್ಯಮಗಳಲ್ಲಿ ಹಿರಿಯ ಉದ್ಯೋಗಿಗಳ ಮಟ್ಟದಲ್ಲಿ ಸರಾಸರಿ 31 ಲಕ್ಷ ರೂ. 30 ಲಕ್ಷ ರೂ. ವೇತನವನ್ನು ನೀಡಲಾಗಿದೆ.

    ತೆರಿಗೆ, ವ್ಯಾಪಾರ ಸಲಹೆ, ಅಪಾಯದ ಸಲಹೆ, ಒಪ್ಪಂದ ಸಲಹೆ, ತಂತ್ರಜ್ಞಾನ ಸೇವೆಗಳು ಮತ್ತು ಪರಿಸರ, ಸಾಮಾಜಿಕ ಮತ್ತು ಕಾರ್ಪೊರೇಟ್ ಆಡಳಿತ (ESG) ಸೇವೆಗಳಂತಹ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ವೃತ್ತಿಪರರಿಗೆ ಸಾಕಷ್ಟು ಬೇಡಿಕೆ ಇದ್ದು, ಈ ವಲಯಗಳಲ್ಲಿ ಆಕರ್ಷಕ ಸಂಬಳವನ್ನು ನೀಡಲಾಗುತ್ತಿದೆ.

    ಉತ್ಪಾದನೆ, ಆರೋಗ್ಯ, ಚಿಲ್ಲರೆ ಮತ್ತು ಇ-ಕಾಮರ್ಸ್, ಟೆಲಿಕಾಂ ಮತ್ತು ಇಂಧನ, ಐಟಿ ವಲಯಗಳಲ್ಲಿ ವಿಶೇಷವಾಗಿ ವ್ಯಾಪಾರ ಮತ್ತು ತಂತ್ರಜ್ಞಾನದ ವಿಲೀನ ಕಾರ್ಯತಂತ್ರದ ಕಾರ್ಯಗಳಿಗೆ ಬೇಡಿಕೆ ಹೆಚ್ಚಿದೆ.

    ಚಿಲ್ಲರೆ ವ್ಯಾಪಾರ, FMCG ಮತ್ತು FMCD ಕೈಗಾರಿಕೆಗಳಲ್ಲಿ ಗ್ರಾಹಕರ ಅನುಭವವನ್ನು ಕೇಂದ್ರೀಕರಿಸುವುದರೊಂದಿಗೆ, ತಂತ್ರಜ್ಞಾನದ ಪರಿಣತಿ ಹೊಂದಿರುವ ಹಿರಿಯ ವೃತ್ತಿಪರರ ಅಗತ್ಯವು ಹೆಚ್ಚಾಗಿದೆ. ಇವರಿಗೆ ಸ್ಪರ್ಧಾತ್ಮಕ ವೇತನ ನೀಡಲಾಗುತ್ತಿದೆ.

    ಇನ್ನು ಮಧ್ಯಮ ಮಟ್ಟದಲ್ಲಿ, ಇಂಟರ್​ನೆಟ್​ ಮತ್ತು ಇ-ಕಾಮರ್ಸ್ ಹೆಚ್ಚಿನ ಸಂಬಳವನ್ನು ಪಾವತಿಸಲಾಗುತ್ತಿದೆ(ಅಂದಾಜು ರೂ. 23 ಲಕ್ಷ), ನಂತರದಲ್ಲಿ ವೃತ್ತಿಪರ ಸೇವೆಗಳಾದ (ಸುಮಾರು ರೂ. 21 ಲಕ್ಷ). ಜಾಹೀರಾತು, ಮಾರುಕಟ್ಟೆ ಸಂಶೋಧನೆ ಮತ್ತು ಸಾರ್ವಜನಿಕ ಸಂಪರ್ಕ ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳಾಗಿವೆ. ಕಿರಿಯ ಉದ್ಯೋಗಿಗಳ ಮಟ್ಟದಲ್ಲಿ ಈ ಉದ್ಯೋಗಗಳು (ರೂ. 17 ಲಕ್ಷ) ಅಗ್ರಸ್ಥಾನದಲ್ಲಿವೆ.

    ಮಧ್ಯಮ ಮತ್ತು ಹಿರಿಯ ಉದ್ಯೋಗಿಗಳಿಗೆ ಕ್ರಮವಾಗಿ ರೂ 19.3 ಲಕ್ಷ ಮತ್ತು ರೂ 36.6 ಲಕ್ಷದ ಸರಾಸರಿ CTC (ಕಾಸ್ಟ್​ ಟು ಕಂಪನಿ- ವಾರ್ಷಿಕ ಸಂಬಳ) ಯೊಂದಿಗೆ ಮುಂಬೈ ಎರಡನೇ ರ್ಯಾಂಕ್​ ಪಡೆದುಕೊಂಡರೆ, 2021 ರಿಂದ ಇದೇ ಮೊದಲ ಬಾರಿಗೆ ಹಿರಿಯ ಮಟ್ಟದ ಉದ್ಯೋಗಿಗಳ ವೇತನದ ವಿಷಯದಲ್ಲಿ ಬೆಂಗಳೂರು ಮುಂಬೈಯನ್ನು ಹಿಂದಿಕ್ಕಿದೆ.

    ಇನ್ನು 2022ಕ್ಕೆ ಹೋಲಿಸಿದರೆ ಎಲ್ಲ ಕ್ಷೇತ್ರಗಳಲ್ಲಿ ಸಂಬಳ ಹೆಚ್ಚಳ ಕಂಡಿದೆ. 2022 ಕ್ಕೆ ಹೋಲಿಸಿದರೆ ಸಮಂಜಸವಾದ ಏರಿಕೆ ಇದಾಗಿದೆ. 2024 ಕ್ಕೆ ಸಾಗುವಾಗ, ನಾವು ಉದ್ಯೋಗ ಮಾರುಕಟ್ಟೆಯ ಕಡೆಗೆ ಆಶಾವಾದ ಮತ್ತು ಪ್ರಾಯೋಗಿಕ ದೃಷ್ಟಿಕೋನವನ್ನು ಹೊಂದಿದ್ದೇವೆ. ಸಂಬಳ ಬೆಳವಣಿಗೆ ಕಾಣುವುದನ್ನು ನಿರೀಕ್ಷಿಸುತ್ತೇವೆ” ಎಂದು ವರದಿ ಹೇಳಿದೆ.

    ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಬಹುತೇಕ ದುಪ್ಪಟ್ಟು: ಇದಕ್ಕೆ ಕಾರಣಗಳೇನು?

    ಮತ್ತೆ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ಬಿಎಸ್​ಇ, ನಿಫ್ಟಿ ಸೂಚ್ಯಂಕಗಳು: ಮಿಡ್​-ಸ್ಮಾಲ್​ ಕ್ಯಾಪ್​ ಸೆನ್ಸೆಕ್ಸ್​ಗಳು ಏರಿದ್ದೆಷ್ಟು?

    ಕೇವಲ 9 ತಿಂಗಳಲ್ಲಿ ರೂ. 5 ಕೋಟಿ ಹೂಡಿಕೆ ಮಾಡಿ ರೂ. 31.5 ಕೋಟಿ ಗಳಿಕೆ: ಸಚಿನ್​ ತೆಂಡೂಲ್ಕರ್​ ಯಾವ ಕಂಪನಿ ಷೇರುಗಳಲ್ಲಿ ಹಣ ತೊಡಗಿಸಿದ್ದರು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts