More

    ಕಾದಂಬರಿ ಆಧಾರಿತ ‘ನೆನಪು ಮರುಕಳಿಸಿದಾಗ’… ಕಾದಂಬರಿಕಾರನೇ ನಿರ್ಮಾಪಕ!

    ಆಗೊಮ್ಮೆ ಈಗೊಮ್ಮೆ ಕನ್ನಡ ಚಿತ್ರರಂಗದಲ್ಲೂ ಕಾದಂಬರಿ ಆಧಾರಿತ ಚಿತ್ರಗಳು ಸದ್ದು ಮಾಡುತ್ತಿರುತ್ತವೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ‘ನೆನಪು ಮರುಕಳಿಸಿದಾಗ’. ಶಿರಾ ಕರಾವರಹಳ್ಳಿಯ ಡಿ.ಎಸ್. ಕೃಷ್ಣಮೂರ್ತಿ ಅವರು ಈ ಕಾದಂಬರಿಯನ್ನು ಬರೆದಿದ್ದಾರೆ. ವಿಶೇಷ ಅಂದರೆ ಈಗ ಈ ಕಾದಂಬರಿಗೆ ತಾವೇ ಸಿನಿಮಾ ರೂಪಕ್ಕೆ ತರುತ್ತಿದ್ದು, ಅದನ್ನು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಮೂವೀಸ್ ಲಾಂಛನದಲ್ಲಿ ತಾವೇ ನಿರ್ಮಿಸುತ್ತಿದ್ದಾರೆ.

    ಇದನ್ನೂ ಓದಿ :ಕಿಚ್ಚನ ಕಾಫಿ-ಬನ್ಸ್; ಹೋಟೆಲ್ ಉದ್ಯಮದತ್ತ ಸುದೀಪ್ ಚಿತ್ತ..

    ಕಾದಂಬರಿ ಆಧಾರಿತ ‘ನೆನಪು ಮರುಕಳಿಸಿದಾಗ’... ಕಾದಂಬರಿಕಾರನೇ ನಿರ್ಮಾಪಕ!
    ಇತ್ತೀಚೆಗಷ್ಟೇ ಚಿತ್ರತಂಡ ಮಂಡ್ಯದಲ್ಲಿ ಎರಡು ಸುಂದರ ಹಾಡುಗಳ ಚಿತ್ರೀಕರಣ ಪೂರ್ಣಗೊಳಿಸಿ ವಾಪಸಾಗಿದೆ. ‘ಏಳು ಸ್ವರಗಳ ಸಂಗೀತ, ಏಳು ಹೆಜ್ಜೆಗಳ ಸಮ್ಮಿಲನ’ ಹಾಗೂ ‘ಮುಂಗಾರು ಭೂಮಿ ಮುದ್ದು ಮಾಡಿದೆ, ಎಲ್ಲೆಲ್ಲೂ ಈಗ ’ ಎಂದು ಸಾಗುವ ಎರಡು ಹಾಡುಗಳ ಚಿತ್ರೀಕರಣ ಮಾಡಲಾಗಿದೆ. ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆಯುವ ತ್ರಿಕೋನ ಪ್ರೇಮಕಥೆಯಾದ ಕಾರಣ ಯುವಜನರಿಗೆ ಚಿತ್ರ ಇಷ್ಟವಾಗಲಿದೆ ಎಂಬ ಭರವಸೆ ಚಿತ್ರತಂಡದ್ದು.

    ಇದನ್ನೂ ಓದಿ :ಕನ್ನಡ ಹಬ್ಬದ ಜತೆ ಅಪ್ಪು ಹಬ್ಬ; ಪುನೀತ್ ಸರ್ ನೆನಪು ಖುಷಿ ಮೂಡಿಸಬೇಕು..


    ‘ನೆನಪು ಮರುಕಳಿಸಿದಾಗ’ ಚಿತ್ರದಲ್ಲಿ ಬುಲೆಟ್ ವಿನೋದ್ ನಾಯಕನಾಗಿದ್ದು, ಅವರಿಗೆ ಸೋನಿ ಶೆಟ್ಟಿ ಹಾಗೂ ಸೌಂದರ್ಯ ನಾಯಕಿಯರಾಗಿದ್ದಾರೆ. ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಖನಾದ ಮೀಸೆ ಆಂಜನಪ್ಪ, ಚಿಕ್ಕ ಹೆಜ್ಜಾಜೆ ಮಹಾದೇವ್, ಮೈಸೂರು ಮಂಜುಳಾ, ನರಸಿಂಹಯ್ಯ, ಚಿತ್ರದುರ್ಗದ ಜಂಬುನಾಥ, ಗುಲ್ಬರ್ಗಾದ ಅಶೋಕ್ ಕಾಳೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ದೇವದಾಸ್ ಆಕ್ಷನ್ ಕಟ್ ಹೇಳುತ್ತಿದ್ದು, ಅಲೆನ್ ಕ್ಲಾರೆನ್ಸ್ ಕ್ರಾಸ್ತಾ ಸಂಗೀತ ನೀಡುತ್ತಿದ್ದಾರೆ. ಪವನ್ ಸಂಕಲನದ ಜವಾಬ್ದಾರಿ ಹೊತ್ತಿದ್ದು, ರಮೇಶ್ ಕೊಯಿರಾ ಛಾಯಾಗ್ರಹಣ, ಗಣೇಶ್ ಸಾಹಸ ನಿರ್ದೇಶನ ಮಾಡಲಿದ್ದಾರೆ. ಡಿ. ಎಸ್. ಕೃಷ್ಣಮೂರ್ತಿಯವರಿಗೆ ನವನ್, ತ್ಯಾಗರಾಜ್, ಲೋಕೇಶ್, ಕಾಂತರಾಜು ಹಾಗೂ ಶ್ರೀನಿವಾಸ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts