More

    ಅಪಹರಣಕ್ಕೆ ಒಳಗಾಗಿದ್ದ ಸಿಆರ್​ಪಿಎಫ್​ ಯೋಧನ ಫೋಟೋ ಬಿಡುಗಡೆ ಮಾಡಿದ ನಕ್ಸಲ್​ರು

    ರಾಯ್​ಪುರ್​: ಕಳೆದ ಭಾನುವಾರ ಚತ್ತೀಸ್​ಗಢದ ಬಿಜಾಪುರ-ಸುಕ್ಮಾ ಅರಣ್ಯ ವಲಯದಲ್ಲಿ ನಡೆದಿದ್ದ ಭೀಕರ ನಕ್ಸಲ್ ಹತ್ಯಾಕಾಂಡದಲ್ಲಿ ಸಿಆರ್​ಪಿಎಫ್ ಕೋಬ್ರಾ ಪಡೆಯ ಯೋಧನೊಬ್ಬ ಕಣ್ಮರೆಯಾಗಿದ್ದ. ಆತನನ್ನು ನಕ್ಸಲ್​ರು ಅಪಹರಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಇದೀಗ ಕಣ್ಮರೆಯಾಗಿದ್ದ ಯೋಧನ ಫೋಟೊವನ್ನು ನಕ್ಸಲ್​ರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

    ನಾಪತ್ತೆಯಾಗಿದ್ದ ರಾಕೇಶ್ವರ್ ಸಿಂಗ್​ ಮನಹಾಸ್ ನನ್ನು ನಕ್ಸಲ್​ರು ಅರಣ್ಯವೊಂದರಲ್ಲಿ ಒತ್ತೆಯಾಳನ್ನಾಗಿಟ್ಟುಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ. ನಿಷೇಧಿತ ನಕ್ಸಲ್ ಸಂಘಟನಯಾದ ದಂಡಕಾರಣ್ಯ ಸ್ಪೇಷಲ್ ಜೂನಲ್ ಕಮಿಟಿ ಈ ಚಿತ್ರವನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ರಾಕೇಶ್ವರ ಸಿಂಗ್ ಮನ್​ಹಾಸ್ ಅವರು ನಕ್ಸಲ್ ತಾತ್ಕಾಲಿಕ ಟೆಂಟ್ ಒಂದರಲ್ಲಿ ಕುಳಿತುಕೊಂಡಿರುವುದು ತೋರುತ್ತದೆ.

    ಇದನ್ನೂ ಓದಿ: ಗುಂಡಿನ ಕಿಕ್ಕೇರಿಸಿಕೊಳ್ಳಲು ಆನ್​ಲೈನ್​ ತಲಕಾಡಿ ಫಜೀತಿ ತಂದು ಕೊಂಡ ಮಹಿಳೆ!

    ಯೋಧನನ್ನು ಒತ್ತೆಯಾಳಾಗಿಟ್ಟುಕೊಂಡಿರುವ ನಕ್ಸಲ್​ರು ಬಂಧನಕ್ಕೊಳಗಾಗಿರುವ ತಮ್ಮವರನ್ನು ಬಿಡುಗಡೆ ಮಾಡಬೇಕು. ನಂತರವೇ ನಾವು ಯೋಧನನ್ನು ಬಿಡುಗಡೆ ಮಾಡಲಿದ್ದೇವೆ. ಅಲ್ಲಿಯವರೆಗೂ ಯೋಧ ನಮ್ಮ ಬಳಿ ಸುರಕ್ಷಿತವಾಗಿರುತ್ತಾನೆ ಎಂದು ದಂಡಕಾರಣ್ಯ ಸ್ಪೇಷಲ್ ಜೂನಲ್ ಕಮಿಟಿಯ ವಿಕಲ್ಪ್ ಎನ್ನುವ ನಾಯಕ ಹೇಳಿದ್ದಾನೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಕಳೆದ ಶನಿವಾರ ಕೋಬ್ರಾ ಪಡೆ ಹಾಗೂ ನಕ್ಸಲ್​ರ ನಡುವೆ ಬಿಜಾಪುರ-ಸುಕ್ಮಾ ಜಿಲ್ಲೆಯ ಗಡಿಯ ಅರಣ್ಯದಲ್ಲಿ ನಡೆದ ಭೀಕರ ಗುಂಡಿನ ಕಾಳಗದಲ್ಲಿ 22 ಯೋಧರು ಹುತಾತ್ಮರಾಗಿ 10 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ನಕ್ಸಲ್​ರು ನಡೆಸಿದ್ದ ಅತಿ ದೊಡ್ಡ ದಾಳಿ ಇದಾಗಿತ್ತು.

    ತಂಗಿಯ ಮೇಲೆ ಅಣ್ಣನಿಂದಲೇ ರೇಪ್: ನೋವು ಹೇಳಿಕೊಳ್ಳಲು ಅಜ್ಜಿ ಮನೆಗೆ ಹೋದವಳಿಗೆ ಮತ್ತೊಂದು ಶಾಕ್​!

    ಮಾಸ್ಕ್​ ಸರಿಯಾಗಿ ಧರಿಸದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ: ಅಪ್ಪನನ್ನು ಬಿಟ್ಬಿಡಿ ಎಂದು ಮಗ ಗೋಗರೆದ್ರು ಬಿಡದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts