More

    25 ಕೋಟಿ ಸಂಭಾವನೆ ಕೊಟ್ರೂ ಸಣ್ಣ ಪಾತ್ರ ಮಾಡಲ್ಲ ಎಂದ ನವಾಜುದ್ದೀನ್​ ಸಿದ್ದೀಕಿ..!

    ಮುಂಬೈ: ನಟ ನವಾಜುದ್ದೀನ್ ಸಿದ್ದಿಕಿ, ಸಣ್ಣ ಪಾತ್ರಗಳನ್ನು ನಿರ್ವಹಿಸುವುದರಿಂದ ಅದ್ಭುತ ನಟನಾಗಿ ಹೊರಹೊಮ್ಮಿದವರು. ಇವರು ಚಿತರೋದ್ಯಮದ ಹಿನ್ನೆಲೆಯಿಂದ ಬಂದವರಲ್ಲ. ಇವರು ಸಾಧಿಸಿದ್ದು ಎಲ್ಲವೂ ಅವರ ಪ್ರತಿಭೆಯ ಬಲದಿಂದ. ಈಗ ಇವರು ಯಾವುದೇ ಕಾರಣಕ್ಕೂ ಸಣ್ಣ ಪಾತ್ರಗಳನ್ನು ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

    ನವಾಜ್ ಅವರು ಸಣ್ಣ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು. ‘ನೀವು ನನಗೆ 25 ಕೋಟಿ ರೂಪಾಯಿ ಕೊಟ್ಟರೂ ನಾನು ಮತ್ತೆ ಸಣ್ಣ ಪಾತ್ರವನ್ನು ಮಾಡುವುದಿಲ್ಲ’ ಎಂದು ಅವರು ಹೇಳಿದ್ದಾರೆ. ‘ಹಣ ಮತ್ತು ಕೀರ್ತಿ’ ಶ್ರಮದ ಪ್ರತಿಫಲವಾಗಿದೆ. ಒಬ್ಬ ನಟ ಶ್ರಮ ಹಾಕಿದರೆ ಹಣ ಮತ್ತು ಕೀರ್ತಿ ಬರುತ್ತದೆ’ ಎಂದು ಹೇಳಿದ್ದಾರೆ.

    ಅನುರಾಗ್ ಕಶ್ಯಪ್ ಅವರ ಗ್ಯಾಂಗ್ಸ್ ಆಫ್ ವಾಸೇಪುರ್ – ಭಾಗ 2 ರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ನವಾಜ್ ಪ್ರಸಿದ್ಧರಾದರು. ಅವರು ರಮಣ್ ರಾಘವ್ 2.0, ಫೋಟೋಗ್ರಾಫ್, ಹರಂಖೋರ್, ಮಾಂಟೋ ಮತ್ತು ಸೀರಿಯಸ್ ಮೆನ್ ಮುಂತಾದ ಚಲನಚಿತ್ರಗಳಲ್ಲಿ ಅದ್ಭುತ ಅಭಿನಯವನ್ನು ನೀಡಿದ್ದಾರೆ. ನಟ ಅವರು ಬಜರಂಗಿ ಭಾಯಿಜಾನ್, ಕಿಕ್, ಬದ್ಲಾಪುರ್ ಮತ್ತು ರಯೀಸ್‌ನಂತಹ ಹಿಟ್ ಚಿತ್ರಗಳಲ್ಲೂ ಕಾಣಿಸಿಕೊಂಡು ಮುಖ್ಯವಾಹಿನಿಗೆ ಪ್ರವೇಶಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts