More

  ರಾಷ್ಟ್ರೀಯ ಹಬ್ಬಗಳಿಂದ ರಾಷ್ಟ್ರಪ್ರೇಮ ವೃದ್ಧಿ

  ಚೌಳಹಿರಿಯೂರು: ವೀರ ಸೇನಾನಿಗಳ ತ್ಯಾಗ, ಬಲಿದಾನವನ್ನು ಸ್ಮರಿಸುವ ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳುವುದರಿಂದ ರಾಷ್ಟ್ರಪ್ರೇಮ ಹೆಚ್ಚುತ್ತದೆ ಎಂದು ಶಿಕ್ಷಕಿ ಎಚ್.ಎಸ್.ಚಂದ್ರಕಲಾ ತಿಳಿಸಿದರು.

  ಚೌಳಹಿರಿಯೂರು ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದ ಸಾಂಸ್ಕೃತಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆಮಾಡುವುದರಿಂದ ಸರ್ಕಾರ ಮತ್ತು ಸ್ಥಳೀಯ ಸರ್ಕಾರ ಗ್ರಾಪಂಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ. ಡಾ. ರಾಜೇಂದ್ರಪ್ರಸಾದ್, ಡಾ. ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮುಂತಾದ ಮಹನೀಯರ ನಿಸ್ವಾರ್ಥ ಸೇವೆ ಸ್ಮರಣೀಯ ಎಂದರು.
  ಗ್ರಾಪಂ ಮಾಜಿ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಲಿಖಿತ ಸಂವಿಧಾನ ರಚನೆ ಮಾಡಿ ಜಾರಿಗೆ ತಂದ ದಿನ ಜ.26. ಇಂತಹ ರಾಷ್ಟ್ರೀಯ ಹಬ್ಬಗಳನ್ನು ಗ್ರಾಮಸ್ಥರ ಸಲಹೆ, ಸಹಕಾರದಿಂದ ಸಾಂಗವಾಗಿ ಆಚರಿಸುತ್ತ ಬಂದಿದ್ದೇವೆ ಎಂದು ಹೇಳಿದರು.
  ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ನಾಡಗೀತೆ, ಕಾಲೇಜು ವಿದ್ಯಾರ್ಥಿನಿಯರು ರೈತ ಗೀತೆ, ಗ್ರಾಪಂ ಉಪಾಧ್ಯಕ್ಷ ತಿಮ್ಮಯ್ಯ ನಾಡಗೀತೆ ಹಾಡಿದರು.
  ಗ್ರಾಪಂ ಅಧ್ಯಕ್ಷೆ ಅನಿತಾ ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಸ್.ಮಲ್ಲೆಶಪ್ಪ, ಎಚ್.ಎಂ.ಅನಿಲ್, ಗ್ರಾಪಂ ಸದಸ್ಯರು , ಶಾಲಾ ಕಾಲೇಜುಗಳ ಮುಖ್ಯಸ್ಥರು, ಎಸ್‌ಡಿಎಂಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts