More

    ಸೌರವ್​ ಗಂಗೂಲಿ ಅವರನ್ನು ನಾಸೀರ್​ ಹುಸೇನ್​ ದ್ವೇಷಿಸುವುದು ಏಕೆ..?

    ಮುಂಬೈ: ಇಂಗ್ಲೆಂಡ್​ ತಂಡದ ಮಾಜಿ ನಾಯಕ ನಾಸೀರ್​ ಹುಸೇನ್​ಗೆ ಭಾರತ ತಂಡದ ಮಾಜಿ ಸೌರವ್​ ಗಂಗೂಲಿ ಕಂಡರೆ ಆಗಲ್ವಂತೆ. ನಾನು ಕ್ರಿಕೆಟ್​ನಲ್ಲಿ ದ್ವೇಷಿಸುವ ಆಟಗಾರ ಗಂಗೂಲಿ ಎನ್ನುತ್ತಾರೆ ನಾಸೀರ್​. ಗಂಗೂಲಿ ಭಾರತದ ನಾಯಕರಾಗಿದ್ದ ವೇಳೆ ನಾಸೀರ್​ ಇಂಗ್ಲೆಂಡ್​ ತಂಡದ ನಾಯಕರಾಗಿದ್ದರು. ಭಾರತ-ಇಂಗ್ಲೆಂಡ್​ ಪಂದ್ಯದ ವೇಳೆ ಗಂಗೂಲಿ ಟಾಸ್​ಗಾಗಿ ತಡವಾಗಿ ಬರುತ್ತಿದ್ದಕ್ಕೆ ನಾಸೀರ್​ ಹುಸೇನ್​ಗೆ ಇನ್ನು ಸಿಟ್ಟಿದೆಯಂತೆ. ಇದೀಗ ವೀಕ್ಷಕ ವಿವರಣೆ ಮೂಲಕ ಉತ್ತಮ ಕಾಮೆಂಟರಿ ಬಾಕ್ಸ್​ನಲ್ಲಿ ಉತ್ತಮ ಸ್ನೇಹಿತರಾಗಿದ್ದೇವೆ ಎನ್ನುತ್ತಾರೆ.

    ಇದನ್ನೂ ಓದಿ: ಕ್ರಿಕೆಟ್ ಪಂದ್ಯ ಆಡಿದ 51 ಆಟಗಾರರ ವಿರುದ್ಧ ಪೊಲೀಸ್ ಕೇಸ್!

    ಸೌರವ್​ ಗಂಗೂಲಿ ಅವರನ್ನು ನಾಸೀರ್​ ಹುಸೇನ್​ ದ್ವೇಷಿಸುವುದು ಏಕೆ..?ನಾಸೀರ್​ ಹುಸೇನ್​ ಜನಿಸಿದ್ದು ಚೆನ್ನೈನಲ್ಲಿ. ನಾನು ಭಾರತ ವಿರುದ್ಧ ಆಡುವಾಗ ಸೌರವ್​ ಗಂಗೂಲಿ ಅವರನ್ನು ಮಾತ್ರ ವಿರೋಧಿಸುತ್ತಿದ್ದೆ. ಇದಕ್ಕೆ ಕಾರಣ ಅವರು ತಡವಾಗಿ ಟಾಸ್​ಗೆ ಬರುತ್ತಿದ್ದಕ್ಕೆ ಎಂದು ಎರಡು ದಶಕದ ಹಿಂದಿನ ಘಟನೆಗಳನ್ನು ನಾಸೀರ್​ ಮೆಲುಕು ಹಾಕಿದ್ದಾರೆ. ಟಾಸ್​ ಹಾಕಲು ನಾನು ಬೇಗ ಹೋಗಿದ್ದರೆ, ಗಂಗೂಲಿ ತಡವಾಗಿ ಬರುತ್ತಿದ್ದರು. ಇದು ನನಗೆ ಸಿಟ್ಟು ತರಿಸುತ್ತಿದ್ದು ಎಂದಿದ್ದಾರೆ. ವೀಕ್ಷಕ ವಿವರಣೆಗಾರರಾಗಿ ಇಬ್ಬರು ಒಟ್ಟಿಗೆ ಕಾರ್ಯನಿರ್ವಹಿಸುತ್ತಿರುವಾಗ ಗೊತ್ತಾಯಿತು. ಅವರೆಷ್ಟು ಕೂಲ್​ ವ್ಯಕ್ತಿ ಎಂದು ಗೊತ್ತಾಯಿತು ಎಂದರು.

    ಇದನ್ನೂ ಓದಿ:VIDEO: ರೋಜರ್​ ಫೆಡರರ್​ರಿಂದ ಮುಂಗೈ ಹೊಡೆತದ ಬಗ್ಗೆ ಟಿಪ್ಸ್​ ಕೇಳಿದ ಸಚಿನ್​ ತೆಂಡುಲ್ಕರ್​

    ಏಕಕಾಲದಲ್ಲೇ ಇಬ್ಬರು ನಾಯಕರಾಗಿದ್ದರು. ಹುಸೇನ್​ 1999 ರಿಂದ 2003ರವರೆಗೆ 45 ಟೆಸ್ಟ್​ ಪಂದ್ಯಗಳಿಗೆ ಇಂಗ್ಲೆಂಡ್​ ಮುನ್ನಡೆಸಿದ್ದರೆ, 1997 ರಿಂದ 2003ರವರೆಗೆ 56 ಏಕದಿನ ಪಂದ್ಯ ಮುನ್ನಡೆಸಿದ್ದಾರೆ. ಮತ್ತೊಂದೆಡೆ, ಸೌರವ್​ ಗಂಗೂಲಿ, 2000 ರಿಂದ 2005ರವರೆಗೆ 49 ಟೆಸ್ಟ್​, 1999 ರಿಂದ 2005 ರವರೆಗೆ 146 ಏಕದಿನ ಪಂದ್ಯಗಳಿಗೆ ಭಾರತ ತಂಡ ಮುನ್ನಡೆಸಿದ್ದರು. 2002ರಲ್ಲಿ ಲಾರ್ಡ್ಸ್​ನಲ್ಲಿ ನಡೆದ ನ್ಯಾಟ್​ವೆಸ್ಟ್​ ಸಿರೀಸ್​ನಲ್ಲಿ ಭಾರತ ಇಂಗ್ಲೆಂಡ್​ ನೀಡಿದ್ದ 326 ರನ್​ ಮೊತ್ತ ಬೆನ್ನಟ್ಟಿತ್ತು. ಬಳಿಕ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲೂ ಭಾರತ 82 ರನ್​ಗಳಿಂದ ಇಂಗ್ಲೆಂಡ್​ ತಂಡವನ್ನು ಮಣಿಸಿತ್ತು.

    ​https://www.vijayavani.net/ms-dhonis-10th-wedding-anniversary-how-did-mahi-and-sakshi-really-meet-for-the-first-time/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts