More

    ಜೂಜಾಟಕ್ಕೆ ಕುಮ್ಮಕ್ಕು: ಗಂಗೂಲಿ, ರೋಹಿತ್​, ಹಾರ್ದಿಕ್, ಆಮೀರ್​ ಖಾನ್ ವಿರುದ್ಧ ಪಿಐಎಲ್​ ಸಲ್ಲಿಕೆ

    ಪಟನಾ: ಭಾರತೀಯ ಕ್ರೀಡಾ ಲೋಕದ ಪ್ರಮುಖ ವ್ಯಕ್ತಿಗಳ ವಿರುದ್ಧ ಬಿಹಾರದ ಮುಜಾರ್​ಪುರ್​ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​)ಯನ್ನು ದಾಖಲಿಸಿದ್ದಾರೆ. ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಜೂಜಾಟಕ್ಕೆ ಪ್ರಚೋದನೆ ನೀಡುವ ಮೂಲಕ ಯುವ ಮನಸ್ಸುಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

    ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟಿಗರಾದ ರೋಹಿತ್ ಶರ್ಮ ಮತ್ತು ಹಾರ್ದಿಕ್ ಪಾಂಡ್ಯ ಮತ್ತು ನಟ ಆಮೀರ್ ಖಾನ್ ಅವರು ಇತರರ ಮೇಲೆ ಜೂಜಾಟವನ್ನು ಉತ್ತೇಜಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಸಂಬಂಧಿಸಿದ ವಿವಿಧ ಆನ್‌ಲೈನ್ ಆಟಗಳ ಮೂಲಕ ಈ ವ್ಯಕ್ತಿಗಳು ಜೂಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯುವಕರನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅರ್ಜಿದಾರರಾದ ತಮ್ಮನಾ ಹಶ್ಮಿ ಆರೋಪಿಸಿದ್ದಾರೆ.

    ಇದನ್ನೂ ಓದಿ: “ಅವರಿಗೆ ಒಳ್ಳೆ ಭವಿಷ್ಯ ಇದೆ” ಎಂದ ಸಿಎಂ, ಲಕ್ಷ್ಮಣ್ ಸವದಿ ರಾಜೀನಾಮೆ ಬಗ್ಗೆ ಹೇಳಿದ್ದೇನು?

    ಯುವಕರ ಮೇಲೆ ಪ್ರಭಾವ
    ಹಶ್ಮಿ ಅವರ ಪ್ರಕಾರ ಈ ಮೇಲಿನ ವ್ಯಕ್ತಿಗಳು ಯುವಕರನ್ನು ಜೂಜಾಟಕ್ಕೆ ಆಕರ್ಷಿಸುವ ಮೂಲಕ ಅವರ ವರ್ತಮಾನ ಮತ್ತು ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಇಂತಹ ಚಟುವಟಿಕೆಗಳು ಯುವಜನರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಇದು ಗಂಭೀರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.

    ಪಿಐಎಲ್​ ಪರಿಶೀಲನೆ
    ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದ್ದು, ಅದನ್ನು ಪರಿಶೀಲಿಸಿ ಹೆಚ್ಚಿನ ತನಿಖೆ ನಡೆಸುವ ನಿರೀಕ್ಷೆಯಿದೆ. ಈ ಪ್ರಕರಣವು ವ್ಯಾಪಕವಾದ ಆಸಕ್ತಿಯನ್ನು ಹುಟ್ಟುಹಾಕಿದೆ. ಭಾರತದಲ್ಲಿ ಯುವಜನರ ಮೇಲೆ ಜೂಜಿನ ಪ್ರಭಾವದ ಬಗ್ಗೆ ಅನೇಕ ಜನರು ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆ ಏಪ್ರಿಲ್​ 22ರಂದು ನಡೆಯಲಿದೆ. (ಏಜೆನ್ಸೀಸ್​)

    ಸೌಂದರ್ಯದ ಗಣಿ ಹನಿ ರೋಸ್​ಗೆ ಸಿನಿಮಾ ಅವಕಾಶಗಳು ಕಡಿಮೆ ಏಕೆ? ಇಲ್ಲಿದೆ ಅಚ್ಚರಿಯ ಕಾರಣ…

    ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಂದ; ಆರೋಪಿ ವಿರುದ್ಧ 30 ಪುಟಗಳ ಚಾರ್ಜ್ ಶೀಟ್!

    ಪಂಜಾಬ್‌ ಸೇನಾ ನೆಲೆ ಪ್ರವೇಶಕ್ಕೆ ಉಗ್ರರ ಯತ್ನ: ನಾಲ್ವರನ್ನು ಹೊಡೆದುರುಳಿಸಿದ ಸೇನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts