More

    ‘ಪ್ರಧಾನಿ ಮೋದಿ ರಾಹುಲ್​ ಗಾಂಧಿಯವರಿಗೆ ಮಾತ್ರ ಹೆದರುತ್ತಿದ್ದಾರೆ…ಹಾಗಾಗಿ ಅವರೇ ಅಧ್ಯಕ್ಷರಾಗಲಿ’

    ಗುವಾಹಟಿ: ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅವಧಿ ಆಗಸ್ಟ್​ 10ಕ್ಕೆ ಮುಗಿದಿದ್ದರೂ, ಬೇರೆ ನಾಯಕನನ್ನು ಇನ್ನೂ ಆಯ್ಕೆ ಮಾಡದ ಕಾರಣ ಅವರಿನ್ನೂ ಮುಂದುವರಿಯುತ್ತಿದ್ದಾರೆ. ಆದರೆ ಇಂದು ಸೋನಿಯಾ ಗಾಂಧಿಯವರು ಕಾಂಗ್ರೆಸ್​ ಮುಖಂಡರಿಗೆ ಪತ್ರ ಬರೆದಿದ್ದು, ಶೀಘ್ರವೇ ಪಕ್ಷಕ್ಕೆ ಹೊಸ ನಾಯಕನ್ನು ಆಯ್ಕೆ ಮಾಡಿ ಎಂದು ಹೇಳಿದ್ದಾರೆ.

    ಈ ಮಧ್ಯೆ ರಾಹುಲ್​ ಗಾಂಧಿಯವರನ್ನೇ ಮತ್ತೆ ಕಾಂಗ್ರೆಸ್​ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಆಸ್ಸಾಂ ಕಾಂಗ್ರೆಸ್​ ಅಧ್ಯಕ್ಷ ರಿಪುನ್​ ಬೋರಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತ, ರಾಹುಲ್​ ಗಾಂಧಿಯವರನ್ನೇ ಕಾಂಗ್ರೆಸ್​ ಅಧ್ಯಕ್ಷನನ್ನಾಗಿ ನೇಮಕ ಮಾಡಬೇಕು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಹುಲ್​ ಗಾಂಧಿ ಅವರೊಬ್ಬರಿಗೇ ಮಾತ್ರ ಭಯ ಪಡುತ್ತಾರೆ. ನಾನು ಈ ಬಗ್ಗೆ ಕಳೆದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಜ್ಯಸಭಾ ಸದಸ್ಯರಿಗೆ ಹೇಳಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ‘ಮನಸು ಭಾರವಾದಾಗ ಹಾರುವುದೆಂತೋ … ಸುಚೇತನ್​ ಕಂಠಸಿರಿಯಲ್ಲಿ ಮನಸಿನ ಹಾಡು

    ರಾಹುಲ್​ ಗಾಂಧಿಯವರು ಮಾತ್ರ ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ನೇರವಾಗಿ ಹೋರಾಟ ಮಾಡುತ್ತಾರೆ. ಹಾಗೇ ಕಾಂಗ್ರೆಸ್​​ನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂದು ರಿಪುನ್​ ಬೋರಾ ಸೋನಿಯಾ ಗಾಂಧಿಯವರಿಗೆ ಪತ್ರವನ್ನೂ ಬರೆದಿದ್ದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಪ್ರಾಯೋಗಿಕ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡಿ; ಕೇಂದ್ರ ಸರ್ಕಾರ ಮನವಿ ಸಲ್ಲಿಸಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts