More

    ಜೋಡೆತ್ತಿನ ಕೃಷಿ ಪ್ರೋತ್ಸಾಹಿಸಲು ಆಗ್ರಹ, ಬಿಜ್ಜರಗಿಯಲ್ಲಿ ನಂದಿ ಯಾತ್ರೆ ಅಭಿಯಾನ

    ವಿಜಯಪುರ: ಜೋಡೆತ್ತಿನ ಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ತಿಂಗಳು ರೈತರಿಗೆ 11 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಆಗ್ರಹಿಸಿ ರೈತರು ನಂದಿ ಅಭಿಯಾನ ಆರಂಭಿಸಿದರು.

    ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸನ್ಯಾಸಪ್ಪನ ಮಠದಲ್ಲಿ ಗುರುವಾರ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಲಾಯಿತು.

    ನೇತೃತ್ವ ವಹಿಸಿದ್ದ ಬಸವರಾಜ ಬಿರಾದಾರ ಮಾತನಾಡಿ, ಕೃಷಿ ಭಾರತದ ಬೆನ್ನೆಲುಬು. ಇತ್ತೀಚೆಗೆ ಕೃಷಿ ಕ್ಷೇತ್ರ ನಿರ್ಲಕ್ಷಕ್ಕೆ ಒಳಗಾಗುತ್ತಿದೆ. ಅದರಲ್ಲೂ ಜೋಡೆತ್ತು ಬಳಸಿ ಮಾಡುವ ಕೃಷಿ ಪದ್ಧತಿ ಕಣ್ಮರೆಯಾಗುತ್ತಿದೆ. ಹೀಗಾಗಿ ಜೋಡೆತ್ತು ಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

    ಶತಮಾನ ಕಂಡ ಅಪರೂಪದ ಸಂತ ಲಿಂ.ಸಿದ್ಧೇಶ್ವರ ಸ್ವಾಮೀಜಿಯ ಕೃಪೆಯಿಂದ ಜೋಡೆತ್ತಿನ ಕೃಷಿಯ ಮಹತ್ವದ ಕುರಿತು ಜನಜಾಗೃತಿ ಮೂಡಿಸಲು ‘ನಂದಿ ಯಾತ್ರೆ’ ಅಭಿಯಾನ ಆರಂಭಿಸಲಾಗಿದೆ. ಬಿಜ್ಜರಗಿ ಗ್ರಾಮದಲ್ಲಿರುವ ಅವರ ಪೂರ್ವಾಶ್ರಮ ಮನೆಯಿಂದ ಪ್ರಾರಂಭವಾಗಿ ಹಲವು ಸಭೆ, ಸಮಾರಂಭ, ಸಮಾವೇಶ ಹಾಗೂ ಸಮ್ಮೇಳನಗಳ ಆಯೋಜನೆಗೆ ನಾಂದಿಯಾಗಿದೆ. ಅವರ ಸಂಕಲ್ಪ ಶಕ್ತಿಯು ಬಹು ಸಂಖ್ಯೆ ಎತ್ತು ಸಾಕಾಣಿಕೆದಾರರು ಒಗ್ಗೂಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದಕ್ಕೆ ಮೂಲ ಕಾರಣವಾಗಿದೆ. ಅದಕ್ಕಾಗಿ, ಸರ್ಕಾರವು ‘ಶ್ರೀ ಸಿದ್ಧೇಶ್ವರ ನಂದಿ ಪ್ರೋತ್ಸಾಹ ಧನ’ ಎಂಬ ಯೋಜನೆ ಜಾರಿಗೊಳಿಸಿ ರೈತರು ಹಾಗೂ ಪ್ರಕೃತಿಯ ಮೇಲೆ ಅವರಿಗಿರುವ ಪ್ರೀತಿಯನ್ನು ಮುಂದಿನ ಜನಾಂಗ ನೆನಪಿಡುವಂತೆ ಮಾಡಲು ಈ ಮೂಲಕ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಪತ್ರ ಸಲ್ಲಿಸಿ ಕೋರಲಾಗುತ್ತಿದೆ ಎಂದು ತಿಳಿಸಿದರು.

    ರೈತ ಮಿತ್ರ ಸ್ವಯಂ ಸೇವಕ ಶ್ರೀಶೈಲ ಉಟಗಿ, ಶಿವಾನಂದ ಬಿರಾದಾರ, ಸಂತೋಷ ಮಠಪತಿ, ಅಭಿಶೇಕ ಬಿರಾದಾರ, ಬಾಬಾನಗರ ಗ್ರಾಮದ ಸಿದ್ದಣ್ಣ ಗೌಡನವರ, ಕನಮಡಿ ಗ್ರಾಮದ ಮಹಾನಿಂಗ ಪಾಟೀಲ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts