More

  ಲಾಟರಿ ಮಾರುತ್ತಿದ್ದ ಇಬ್ಬರು ಪೊಲೀಸರ ವಶಕ್ಕೆ

  ಎಚ್.ಡಿ.ಕೋಟೆ: ತಾಲೂಕಿನ ಅಂತರಸಂತೆ ಗ್ರಾಮದಲ್ಲಿ ಕೇರಳದ ಲಾಟರಿ ಟಿಕೆಟ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

  ಪಟ್ಟಣದ ಚೇತನ್ ಮತ್ತು ಮಾದೇಗೌಡ ಬಂಧಿತರು. ಸುಮಾರು 36 ಸಾವಿರ ಬೆಲೆ ಬಾಳುವ ಲಾಟರಿಯನ್ನು ಕೇರಳದಲ್ಲಿ ಖರೀದಿಸಿ ತಂದು ಅಂತರಸಂತೆ ಗ್ರಾಮದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ. ತಕ್ಷಣ ಕಾರ್ಯ ಪ್ರವೃತ್ತರಾಗಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

  ಅಲ್ಲದೆ ಬಂಧಿತರು ಲಾಟರಿ ಟಿಕೆಟ್ ಅನ್ನು ನಿರಂತರವಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಅಂತರಸಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


  See also  ರೈತರು ಎದೆಗುಂದದೇ ಮುನ್ನುಗ್ಗಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts