More

    ಮೆಟ್ರೋ ಪಿಲ್ಲರ್​ ಬೈಕಿನ ಮೇಲೆ ಬಿದ್ದರೂ ತಂದೆ ಮಗಳು ಉಳಿದದ್ದು ಹೀಗೆ…

    ಬೆಂಗಳೂರು: ನಾಗವಾರ ಬಳಿ ರಸ್ತೆ ಮೇಲೆ ‘ನಮ್ಮ ಮೆಟ್ರೋ’ ಪಿಲ್ಲರ್​ ಕುಸಿದು ದುರ್ಘಟನೆಯಲ್ಲಿ ತಾಯಿ-ಮಗು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್​ಸಿಎಲ್ ಎಂಡಿ ಅಜುಂ ಪರ್ವೇಜ್, ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಕೂಡ ಘೋಷಿಸಿದ್ದಾರೆ.

    ಇದನ್ನೂ ಓದಿ: ‘ನಮ್ಮ ಮೆಟ್ರೋ’ ಪಿಲ್ಲರ್​ ದುರಂತ: ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಣೆ

    ಬೈಕ್​ ಮೇಲೆ ತಂದೆ ತಾಯಿ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದ ವೇಳೆ ಪಿಲ್ಲರ್​ ಕುಸಿದು ಬಿದ್ದಿದೆ. ಆದರೆ ಇದರಲ್ಲಿ ತಂದೆ ಮತ್ತು ಮಗಳು ಬಚಾವಾಗಿ ಉಳಿದಿರುವುದೇ ಅದೃಷ್ಟದಿಂದ ಎಂದು ಹೇಳಬಹುದು.

    ಲೋಹಿತ್​ ಮತ್ತು ಕುಟುಂಬ, ಒಂದೇ ಬೈಕಿನಲ್ಲಿ ಪ್ರಯಾಣಿಸುತ್ತಾ ಇದ್ದರು. ಪ್ಯಾಷನ್​ ಪ್ರೋ ಬೈಕಿನ ಮೇಲೆ ನಾಲ್ವರು ಪ್ರಯಾಣಿಸುತ್ತಿದ್ದರು. ಈ ಸಂದರ್ಭ, ಮಗಳನ್ನು ಬೈಕಿನ ಟ್ಯಾಂಕ್​ ಮೇಲೆ ಲೋಹಿತ್​ ಕೂರಿಸಿದ್ದ. ಹಿಂದಿನ ಸೀಟಿನಲ್ಲಿ ಮಡದಿ ಹಾಗೂ ಮಗನನ್ನು ಕೂರಿಸಿ ತಾನೇ ಬೈಕ್​ ಚಲಾಯಿಸುತ್ತಿದ್ದ. ಹೀಗೆ ಪ್ಯಾಷನ್​ ಪ್ರೋ ಬೈಕಿನ ಮೇಲೆ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು.

    ಇವರು ಪ್ರಯಾಣಿಸುತ್ತಾ ಪಿಲ್ಲರ್ ಬಳಿಯಿಂದ ಪಾಸ್​ ಆಗಿದ್ದಾರೆ. ಹಾಗೆ ಹೋಗುವಾಗ ಬೈಕ್ ಹಿಂದಿನ ಸೀಟಿನ ಮೇಲೆ ಪಿಲ್ಲರ್ ಬಿದ್ದಿದೆ. ನೇರವಾಗಿ ಲೋಹಿತ್ ಮಗ ಮತ್ತು ಆತನ ಪತ್ನಿ ಮೇಲೆ ಪಿಲ್ಲರ್ ಬಿದ್ದಿದೆ. ಇದರಿಂದಾಗಿ ಬೈಕ್​ ಒಮ್ಮಿಂದೊಮ್ಮೆಲೆ ಎಡಗಡೆಗೆ ಬಿದ್ದಿದೆ. ಈ ಸಂದರ್ಭ, ತಾಯಿ ಮತ್ತು ಮಗನಿಗೆ ಗಂಭೀರ ಗಾಯಗಳಾಗಿತ್ತು. ಬೈಕಿನ ಮುಂದೆ ಇದ್ದ ಲೋಹಿತ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಂದೆ ಮಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts