More

    ಪ್ಯಾಂಟ್​ ಧರಿಸದೇ ಲಂಡನ್​ ನಗರದಲ್ಲಿ ಓಡಾಡಿದ ಜನರ ಫೋಟೊ ವೈರಲ್..!

    ಲಂಡನ್​: ನೀವು ‘ನಮ್ಮ ಮೆಟ್ರೋ’ ರೀತಿಯ ಸಬ್​ವೇ ಅಥವಾ ರೈಲು ವ್ಯವಸ್ಥೆಯಲ್ಲಿ ಸಂಚಾರ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ ಮುಂದೆ ಒಮ್ಮಿಂದೊಮ್ಮೆಲೆ ಗಂಡಸರೂ ಹೆಂಗಸರೂ ಸೇರಿ ಅನೇಕ ಜನರು ಪ್ಯಾಂಟ್​ ಧರಿಸದೇ ಬಂದು ಕುಳಿತರೆ ಹೇಗಾಗಬಹುದು?

    ಪ್ಯಾಂಟ್​ ಧರಿಸದೇ ಲಂಡನ್​ ನಗರದಲ್ಲಿ ಓಡಾಡಿದ ಜನರ ಫೋಟೊ ವೈರಲ್..!

    ಅಷ್ಟು ಮುಜುಗರ ಎಲ್ಲೂ ಆಗುವುದಿಲ್ಲ ಕಾಣುತ್ತೆ. ಭಾರತದಲ್ಲಿ ಇಂತಹ ಒಂದು ದಿನವನ್ನು ನಾವು ಯಾವ ಕಾರಣಕ್ಕೂ ಕಾಣಲು ಸಾಧ್ಯವಿಲ್ಲ. ಆದರೆ ಇಂತಹದ್ದೇ ಒಂದು ಘಟನೆ ಲಂಡನ್​ನಲ್ಲಿ ನಡೆದಿದೆ. ನೂರಾರು ಜನರು ತಮ್ಮ ಒಳಉಡುಪಿನಲ್ಲಿ ಲಂಡನ್ ಅಂಡರ್‌ಗ್ರೌಂಡ್‌ ರೈಲುಗಳು ಅಥವಾ ಸಬ್​ವೇಗೆ ಹತ್ತಿದಾಗ ಅಲ್ಲಿದ್ದ ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ಇತರ ಪ್ರಯಾಣಿಕರು ದಿಗ್ಭ್ರಮೆಗೊಂಡು ಏನಾಗುತ್ತಿದೆ ಎಂದು ಗೊಂದಲಕ್ಕೊಳಗಾದದ್ದು ಎಲ್ಲೆಡೆ ಕಂಡುಬಂದಿತ್ತು. ನಿನ್ನೆ ಲಂಡನ್​ನಲ್ಲಿ ಹಲವರು ಪ್ಯಾಂಟ್​ ಧರಿಸದೇ ರೈಲು ಸವಾರಿ ಮಾಡುತ್ತಿರುವುದು ಕಂಡುಬಂದಿದೆ.

    ಯಾಕೆ ಈ ಹುಚ್ಚು? ಇದರ ಹಿಂದೆಯೂ ಒಂದು ಕಥೆ ಇದೆ:
    ಜನವರಿ 8ನ್ನು ‘ನೋ ಟ್ರೌಸರ್ಸ್​ ಟ್ಯೂಬ್ ರೈಡ್ ಡೇ’ ಎಂದು ಲಂಡನ್​ನಲ್ಲಿ ಆಚರಿಸುತ್ತಾರೆ. ಕರೋನಾ ನಂತರ ಈ ವರ್ಷವೇ ಮೊದಲ ಬಾರಿಗೆ ಉತ್ಸಾಹಿಗಳು ಈ ವಿಚಿತ್ರ (ವಿಶಿಷ್ಟ?) ದಿನದಲ್ಲಿ ಭಾಗವಹಿಸಲು ಸಾಧ್ಯವಾಗಿತ್ತು.

    ನಮ್ಮ ಮೆಟ್ರೋದಲ್ಲಿ ಪರ್ಪಲ್​ ಲೈನ್, ಗ್ರೀನ್​ ಲೈನ್​ ಇದ್ದಂತೆ, ಲಂಡನ್​ನಲ್ಲೂ ಬೇರೆ ಬೇರೆ ಹೆಸರಿನ ಲೈನ್​ಗಳಿವೆ. ಅದರಲ್ಲಿ ಎಲಿಜಬೆತ್​ ಲೈನ್​ ಕೂಡ ಒಂದು. ಇಂದು ಎಲಿಜಬೆತ್ ಲೈನ್‌ನಲ್ಲಿ ಟ್ರೌಸರ್‌ಲೆಸ್ ಟ್ಯೂಬ್ ರೈಡ್ ಡೇಯನ್ನು ಉದ್ಘಾಟನೆ ಮಾಡಲಾಗಿದೆ. ಇದರಲ್ಲಿ ಭಾಗವಹಿಸಲು ಯಾವುದೇ ರೀತಿಯ ಔಪಚಾರಿಕ ಸದಸ್ಯತ್ವದ ಅಗತ್ಯವಿಲ್ಲ. ಇದರಲ್ಲಿ ತೊಡಗಿಸಿಕೊಳ್ಳಲು ನೀವು ನಿಮ್ಮ ಪ್ಯಾಂಟ್ ಬಿಚ್ಚಿ ಲಂಡನ್​ನ ಸಬ್​ವೇಯಲ್ಲಿ ಪ್ರಯಾಣ ಮಾಡಿದರೆ ಸಾಕು. ನೆನಪಿಡಿ, ಇದು ಲಂಡನ್​ನಲ್ಲಿ ಮಾತ್ರ!

    ಜನರನ್ನು ನಗಿಸುವುದೇ ಈ ದಿನದ ಉದ್ದೇಶ
    ಈ ಕಲ್ಪನೆ ನ್ಯೂಯಾರ್ಕ್‌ನಿಂದ ಬಂದದ್ದು ಎನ್ನಲಾಗುತ್ತದೆ. ಅಲ್ಲಿ ಜನರು 2002 ರಲ್ಲಿ ನೋ ಪ್ಯಾಂಟ್ ಸಬ್‌ವೇ ರೈಡ್ ಅನ್ನು ಪ್ರಾರಂಭಿಸಿದ್ದರು. ಈ ದಿನದ ಸ್ಥಾಪಕರು “ಇತರರನ್ನು ನಗಿಸುವುದನ್ನು ಬಿಟ್ಟು ಈ ದಿನಕ್ಕೆ ಯಾವುದೇ ಅಜೆಂಡಾ ಇಲ್ಲ” ಎನ್ನುತ್ತಾರೆ. ಈ ಕಲ್ಪನೆಯು ಲಂಡನ್​ಗೂ ತಲುಪಿ ಸ್ಟಿಫ್​ ಅಪರ್ ಲಿಪ್​ ಸೊಸೈಟಿ ಇದನ್ನು ಅವರ ನಗರದಲ್ಲಿ ಶುರು ಮಾಡಿದೆ.

    ದಿ ಸ್ಟಿಫ್ ಅಪ್ಪರ್ ಲಿಪ್ ಸೊಸೈಟಿಯ ಸಂಸ್ಥಾಪಕ ಇವಾನ್ ಮಾರ್ಕೊವಿಕ್, ನೋ ಟ್ರೌಸರ್ಸ್​ ಡೇ ಬಗ್ಗೆ “ನಾವು ಹಣವನ್ನು ಸಂಗ್ರಹಿಸುತ್ತಿಲ್ಲ. ನಾವು ಯಾವುದೇ ರೀತಿಯ ಜಾಗೃತಿ ಮೂಡಿಸುತ್ತಿಲ್ಲ. ನಾವು ಕೇವಲ ಒಂದು ನಗುವಿನ ಕ್ಷಣವನ್ನು ಸೃಷ್ಟಿಸುತ್ತಿದ್ದೇವೆ. ಇದರಲ್ಲಿ ಜನ ಫಿಲಾಸಫಿ ಹುಡುಕಬಾರದು. ಜನರು ಕೇವಲ ನಕ್ಕು, ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹೊಂದಿರಬೇಕು ಎಂದು ನಾವು ಬಯಸುತ್ತೇವೆ
    ಒಮ್ಮೆ ನೀವು ಹೇಳಿಕೆ ನೀಡಲು ಶುರು ಮಾಡಿದರೆ ಅಥವಾ ಯಾವುದೇ ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದರೆ, ನೀವು ಬೆಂಬಲಿಸಲು ಆಯ್ಕೆ ಮಾಡುವ ಯಾವುದೇ ಚಾರಿಟಿಯನ್ನು ವಿರೋಧಿಸಲು ಯಾರಾದರೂ ಯಾವಾಗಲೂ ಕಾರಣವನ್ನು ಕಂಡುಕೊಳ್ಳುತ್ತಾರೆ. ಹಣ ಬಂದೊಡನೆ ಪರ ವಿರೋಧ ಶುರುವಾಗುತ್ತದೆ.” ಎಂದು ಹೇಳುತ್ತಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts