ಕೊಲ್ಕತ್ತಾ: ಪಾನ್ ಮಸಾಲ ಪ್ಯಾಕೆಟ್ಗಳನ್ನು ಬ್ಯಾಂಕಾಕ್‌ಗೆ ಸಾಗಿಸುವ ಸೋಗಿನಲ್ಲಿ ಈತ ಬರೋಬ್ಬರಿ 40 ಸಾವಿರ ಡಾಲರ್ ಪಾರ್ಸೆಲ್ ಮಾಡಿದ್ದ! ಆದರೆ ಅದೃಷ್ಟವಶಾತ್, ಇದರ ಸುಳಿವು ಸಿಕ್ಕಿ ಕಸ್ಟಮ್ಸ್ ಅಧಿಕಾರಿಗಳು ಏನಪ್ಪಾ ಇದು ಎಂದುಕೊಂಡು ಪರಿಶೀಲಿಸಿದರೆ, ಅಲ್ಲಿದ್ದದ್ದು ಗರಿಗರಿ ನೋಟುಗಳು!

ಅಷ್ಟೊಂದು ಹಣವನ್ನು ಬಚ್ಚಿಟ್ಟ ರೀತಿ ನೋಡಿದರೆ ಎಂತಹವನೂ ಒಮ್ಮೆಗೆ ದಂಗಾಗಬೇಕು. ಪ್ರತಿಯೊಂದು ಸಣ್ಣ ಗುಟ್ಕಾ ಪ್ಯಾಕೆಟ್ನಲ್ಲೂ ಹಣ ಬಚ್ಚಿಟ್ಟರೆ ಗೊತ್ತಾಗಲ್ಲ ಎಂದುಕೊಂಡಿದ್ದ ಕಾಣುತ್ತೆ. ಅದಕ್ಕೆ ಪಾರ್ಸೆಲ್ ಕಳುಹಿಸಿದಾತ ಪ್ರತೀ ಪ್ಯಾಕೆಟ್ನಲ್ಲೂ 50 ಡಾಲರ್ ನೋಟನ್ನು ಮಡಚಿ ಬಚ್ಚಿಟ್ಟು ಹವಾಲಾ ಹಣ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ.
ಇಷ್ಟೊಂದು ಪ್ರಮಾಣದ ಪಾನ್ ಮಸಾಲಾ ಯಾತಕ್ಕಾಗಿ ಪಾರ್ಸೆಲ್ ಕಳುಹಿಸಲಾಗಿದೆ ಎಂದು ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ನಿನ್ನೆ ಬ್ಯಾಂಕಾಕ್‌ಗೆ ನಿರ್ಗಮಿಸಲು ನಿಗದಿಪಡಿಸಿದ ಪ್ಯಾಕ್ಸ್ ಅನ್ನು ತಡೆದಿದ್ದಾರೆ. ಈ ಸಂದರ್ಭ ಹುಡುಕಾಡಿದ ಅಧಿಕಾರಿಗೆಳಿಗೆ ಗುಟ್ಖಾ ಪೌಚ್‌ಗಳೊಳಗೆ ಬಚ್ಚಿಟ್ಟಿದ್ದ US $40O00 (ರೂ. 32,78,000 ಮೌಲ್ಯ) ಪತ್ತೆಯಾಗಿದೆ.
Acting on intelligence #AIUofficers intercepted a pax scheduled to depart to Bangkok on 08.01.23 after immigration formalities. Search of his checked-in baggage resulted in recovery of US $40O00 (worth ₹3278000) concealed inside Gutkha pouches @cbic_india @PIBKolkata @DDBanglaTV pic.twitter.com/DpxSCL5S3w
— Kolkata Customs (@kolkata_customs) January 9, 2023