More

    ಕೆಐಎ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಗುತ್ತಿಗೆ; ಬಿಐಎಎಲ್​ನಿಂದ ಆಹ್ವಾನ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, “ಏರ್​ಪೋರ್ಟ್​ ಸಿಟಿ ಮೆಟ್ರೋ ನಿಲ್ದಾಣ’ದ ನಿರ್ಮಾಣಕ್ಕೆ ಪೂರ್ವ ಅರ್ಹತಾ ಗುತ್ತಿಗೆಯನ್ನು ಬಿಐಎಎಲ್​ ಆಹ್ವಾನಿಸಿದೆ.

    ವಿಮಾನ ನಿಲ್ದಾಣದ ರ್ಟಮಿನಲ್​ಗೆ 2.6 ಕಿ.ಮೀ. ದೂರದಲ್ಲೇ ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದೆ. ಇದು 14 ಸಾವಿರ ಚದರ ಕಿಮೀ ವಿಸ್ತೀರ್ಣ ಹೊಂದಿರಲಿದ್ದು, ಅತ್ಯಾಧುನಿಕ ವಿನ್ಯಾಸದಲ್ಲಿ ತಲೆಯೆತ್ತಲಿದೆ. ಗುತ್ತಿಗೆದಾರರ ನೇಮಕಕ್ಕೆ ಬಿಐಎಎಲ್​ ಎರಡು ಹಂತದ ಪ್ರಕ್ರಿಯೆ ಜಾರಿಗೆ ತಂದಿದೆ. ಪೂರ್ವ ಅರ್ಹತಾ ಹಂತದಲ್ಲಿ ಸಲ್ಲಿಸಿದ ಬಿಡ್​ಗಳನ್ನು ಮೊದಲು ಪರಿಶೀಲಿಸಲಾಗುತ್ತದೆ. ಬಳಿಕ ಅರ್ಹ ಸಂಸ್ಥೆಗಳಿಗೆ ಟೆಂಡರ್​ ಹಂತಕ್ಕೆ ಮುಂದುವರಿಯಲು ಅವಕಾಶ ನೀಡಲಾಗುತ್ತದೆ.

    ಕಾಮಗಾರಿ ವೇಗ

    ನಗರದ ರೇಷ್ಮೆ ಮಂಡಳಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಕಾಮಗಾರಿಯನ್ನು ಮೂರು ಸಂಸ್ಥೆಗಳು ನಿರ್ವಹಿಸುತ್ತಿವೆ. 2026ರ ಜೂನ್​ ವೇಳೆ ಈ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್​ಸಿಎಲ್​ ಹಾಕಿಕೊಂಡಿದೆ.

    39 ಕಿ.ಮೀ. ಉದ್ದದ ಮಾರ್ಗ

    ನೀಲಿ ಮಾರ್ಗವು ಕೇಂದ್ರೀಯ ರೇಷ್ಮೆ ಮಂಡಳಿ-ಕೆ.ಆರ್​.ಪುರ-ಹೆಬ್ಬಾಳ ಮೂಲಕ ಕೆಐಎ ಸಂಪರ್ಕಿಸುತ್ತದೆ. ಒಟ್ಟು 39 ಕಿ.ಮೀ. ಉದ್ದದ ಈ ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಲು ಎರಡು ಹಂತಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ರೇಷ್ಮೆ ಮಂಡಳಿ& ಕೆ.ಆರ್​. ಪುರ ಮಾರ್ಗದ “2ಎ’ ಸಂಪೂರ್ಣ ನಗರದೊಳಗೆ ಹಾದುಹೋಗಬೇಕಿರುವ ಕಾರಣ ಕಾಮಗಾರಿ ಸ್ವಲ್ಪಮಟ್ಟಿಗೆ ನಿಧಾನಗೊಂಡಿದೆ. ಕೆ.ಆರ್​.ಪುರದಿಂದ ಹೆಬ್ಬಾಳ ಮಾರ್ಗವಾಗಿ ಕೆಐಎ ತಲುಪುವ “2ಬಿ’ ಮಾರ್ಗದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರ ವೆಚ್ಚ ಸುಮಾರು 14,778 ಕೋಟಿ ರೂ.ಗಳು.

    ಪ್ರಯಾಣಿಕರಿಗೆ ಲಾಭ

    ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೋ ಮಾರ್ಗ ಆ ಭಾಗದಲ್ಲಿನ ವಾಹನದಟ್ಟಣೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲಿದೆ. ಪ್ರಸ್ತುತ ವಿಮಾನ ನಿಲ್ದಾಣಕ್ಕೆ ತೆರಳಲು ಕ್ಯಾಬ್​, ಸ್ವಂತ ವಾಹನ ಹಾಗೂ ಬಿಎಂಟಿಸಿ ವೋಲ್ವೋ ಬಸ್​ ಅವಲಂಬಿಸಿರುವ ಪ್ರಯಾಣಿಕರು, ಮುಂದಿನ ದಿನಗಳಲ್ಲಿ ಮೆಟ್ರೋ ಅವಲಂಬಿಸುವುದರಲ್ಲಿ ಅನುಮಾನವಿಲ್ಲ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts