More

    ಮಹಿಳಾ’ಶಕ್ತಿ’: ತೆಲಂಗಾಣ ಬಸ್​ಗಳಲ್ಲಿ ಪುರುಷರಿಗೆ 20 ಸೀಟು ಮೀಸಲು?!

    Bus free effect for women: Reserve 20 seats for men

    ಹೈದರಾಬಾದ್​: ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಸರಕಾರ ತಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಪುರುಷರಿಗೆ ಸೀಟು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬಸ್‌ಗಳಲ್ಲಿ ನೂಕುನುಗ್ಗಲು ಹೆಚ್ಚುತ್ತಿದ್ದು, ಎಲ್ಲ ಸೀಟುಗಳನ್ನೂ ಮಹಿಳೆಯರೇ ಅಕ್ರಮಿಸುತ್ತಿತ್ತಿದ್ದಾರೆ. ಇದರಿಂದ ಪುರುಷರು ನೂರಾರು ಕಿಮೀ ನಿಂತು ಪ್ರಯಾಣಿಸುವ ಸ್ಥಿತಿ ಎದುರಾಗಿದೆ. ಅಷ್ಟೇ ಏಕೆ ಗಂಡಸರು ಬಸ್‌ ಹಿಡಿದು ಹೋಗುವ ಸ್ಥಿತಿ ಮಾಯವಾಗುತ್ತಿದೆ. ಟಿಕೆಟ್ ಖರೀದಿಸಿದರೂ ತಮಗೆ ಸೀಟು ಇಲ್ಲ ಎಂದರೆ ಹೇಗೆ ಎಂದು ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ದ್ವನಿ ಎತ್ತುತ್ತಿದ್ದಾರೆ.

    ಇದನ್ನೂ ಓದಿ: ಕೊನೆಗೂ ಮುಂಬೈ ತಲುಪಿದ ವಿಮಾನ: 276 ಪ್ರಯಾಣಿಕರು ವಾಪಸ್​- 27 ಭಾರತೀಯರು ಇನ್ನೂ ಫ್ರಾನ್ಸ್‌ನಲ್ಲಿರುವುದೇಕೆ?
    ಇದೇ ಕಾರಣಕ್ಕಾಗಿ ಎಲ್ಲೆಡೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಇದಲ್ಲದೇ ಪ್ರತಿ ಬಸ್ಸಿನಲ್ಲೂ ಗಂಡಸರು, ಹೆಂಗಸರ ನಡುವೆ ಮಾರಾಮಾರಿ ನಡೆಯುತ್ತಿದೆ. ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಗೆ ತಂದಿದ್ದು, ಅದಕ್ಕೆ ತಕ್ಕಂತೆ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸದಿರುವುದು ಜನದಟ್ಟಣೆ ಹೆಚ್ಚಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಟಿಎಸ್​ಆರ್​ಟಿಸಿ ಆಡಳಿತವು ನಿರ್ಧರಿಸಿದೆ. ಅಷ್ಟರಮಟ್ಟಿಗೆ ಪುರುಷರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆಗೆ ಮುಂದಾಗಿರುವುದು ಸ್ವಲ್ಪ ಮಟ್ಟಿಗೆ ಪುರುಷ ಪ್ರಯಾಣಿಕರಲ್ಲಿ ಸಮಾಧಾನ ಮೂಡುವಂತಾಗಿದೆ.

    ಹಲವೆಡೆ ಪುರುಷರ ಪ್ರತಿಭಟನೆ: ಆರ್‌ಟಿಸಿ ಬಸ್‌ಗಳಲ್ಲಿ ಸೀಟು ಸಿಗದ ಕಾರಣ ಹಲವೆಡೆ ಪುರುಷರು ಪ್ರತಿಭಟನೆ ನಡೆಸಿದ ಘಟನೆಗಳು ನಡೆದಿವೆ. ಇತ್ತೀಚೆಗಷ್ಟೇ ಹೈದರಾಬಾದ್‌ನ ಮೆಹದಿಪಟ್ಟಣಂ ಬಸ್ ನಿಲ್ದಾಣದಲ್ಲಿ ಬಸ್‌ಗಳಲ್ಲಿ ಸೀಟುಗಳು ಮಹಿಳೆಯರಿಂದ ತುಂಬಿದ್ದ ಕಾರಣ ಹಲವು ಪುರುಷರು ಪ್ರತಿಭಟನೆ ನಡೆಸಿದ್ದರು. 15 ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ನಿಜಾಮಾಬಾದ್ ಜಿಲ್ಲೆಯ ಅರ್ಮೋರು ಎಂಬಲ್ಲಿ ಯುವಕನೊಬ್ಬ ತನಗೆ ಸೀಟು ಸಿಗದ ಕಾರಣ ಆರ್‌ಟಿಸಿ ಬಸ್‌ಗೆ ಅಡ್ಡಲಾಗಿ ಕುಳಿತು ಬಹಳ ಹೊತ್ತು ಪ್ರತಿಭಟನೆ ನಡೆಸಿದ್ದಾನೆ. ಸಹಪ್ರಯಾಣಿಕರು ಸರಿಪಡಿಸಿದ ಬಳಿಕ ಯುವಕ ಶಾಂತನಾದ.

    ಡಿಪೋವಾರು ಪ್ರತಿಕ್ರಿಯೆ ಸಂಗ್ರಹ:  ಪ್ರತಿ ಬಸ್‌ನಲ್ಲಿ 55 ಸೀಟುಗಳಲ್ಲಿ ಪುರುಷರಿಗೆ 20 ಸೀಟುಗಳನ್ನು ಮೀಸಲಿಡುವ ಬಗ್ಗೆ ಆರ್‌ಟಿಸಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಡಿಪೋಗಳಿಗೆ ವಿವರ ಕಳುಹಿಸುವಂತೆ ಆದೇಶ ಹೊರಡಿಸಲಾಗಿದೆ. ವಿಶೇಷವಾಗಿ ಡಿಪೋ ವ್ಯವಸ್ಥಾಪಕರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬೇಕು. ಸಂಸ್ಥೆಯು ಡಿಪೋವಾರು ವರದಿ ಪಡೆದ ನಂತರ ಪುರುಷರಿಗೆ ಮೀಸಲು ಸೀಟುಗಳ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.

    ಮೊದಲ ಗ್ಯಾರಂಟಿ: ಆರ್ ಟಿಸಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ ಆರು ಭರವಸೆಗಳಲ್ಲಿ ಒಂದಾಗಿದೆ. ಅಧಿಕಾರಕ್ಕೆ ಬಂದ ನಂತರ ಪಕ್ಷ ಜಾರಿಗೆ ತಂದ ಮೊದಲ ಎರಡರಲ್ಲಿ ಇದೂ ಒಂದು. ರಾಜ್ಯದಲ್ಲಿ ಮಹಿಳೆಯರಿಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸುವ ಸ್ವಾತಂತ್ರ್ಯ ನೀಡಲಾಗಿದೆ. ಸ್ಥಳೀಯತೆಗೆ ಗುರುತಿನ ಚೀಟಿ ತೋರಿಸಿದರೆ ಕಂಡಕ್ಟರ್‌ಗಳು ಶೂನ್ಯ ಟಿಕೆಟ್ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಆರ್‌ಟಿಸಿ ಬಸ್‌ಗಳ ದಟ್ಟಣೆ ವಿಪರೀತ ಹೆಚ್ಚಾಗಿದೆ. ಅದೂ ಮಹಿಳಾ ಪ್ರಯಾಣಿಕರು ಕಿಕ್ಕಿರಿದು ತುಂಬಿಕೊಂಡು ಪ್ರವಾಸಿ ತಾಣ ಮತ್ತು ದೂರದ ಊರುಗಳಿಗೆ ಪ್ರಯಾಣಿಸುತ್ತಿದ್ದಾರೆ.

    ದೇಶಕ್ಕಿಂತ ಐಪಿಎಲ್ ಮುಖ್ಯವೇ? ಮೂವರು ಕ್ರಿಕೆಟಿಗರಿಗೆ ಆಫ್ಘನ್​ ಕ್ರಿಕೆಟ್ ಮಂಡಳಿ ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts