More

    ನಾಗಾಲೆಂಡಿನ ಭೂತ್​ ಜೊಲೊಕಿಯ ಮಿರ್ಚಿಗಳು ಲಂಡನ್ನಿಗೆ!

    ನವದೆಹಲಿ : ಜಗತ್ತಿನ ಅತಿ ಖಾರವಾದ ಮೆಣಸಿನಕಾಯಿ ಎನ್ನಲಾಗುವ ನಾಗಾಲೆಂಡಿ​ನ ಭೂತ್​ ಜೊಲೊಕಿಯ ಅಥವಾ ರಾಜಾ ಮಿರ್ಚಾ​ಗಳನ್ನು ಪ್ರಥಮ ಬಾರಿಗೆ ಇಂಗ್ಲೆಂಡಿಗೆ ರಫ್ತು ಮಾಡಲಾಗುತ್ತಿದೆ. ಭಾರತದ ಪೂರ್ವೋತ್ತರ ಭಾಗದ ಭೌಗೋಳಿಕ ಸಂಕೇತ (ಜಿಐ) ಉತ್ಪನ್ನಗಳ ರಫ್ತು ಹೆಚ್ಚಿಸುವ ಪ್ರಯತ್ನದಲ್ಲಿ, 250 ಕೆಜಿ ಮೆಣಸಿನಕಾಯಿಗಳನ್ನು​ ಕಳುಹಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

    ನಾಗಾಲೆಂಡಿನ ಪೆರೆನ್ ಜಿಲ್ಲೆಯ ಟೆನಿಂಗ್​ನಲ್ಲಿ ಬೆಳೆಯಲಾದ ಈ ಮೆಣಸಿನಕಾಯಿಗಳನ್ನು ಅಸ್ಸಾಂನ ಗೌಹಾಟಿ ಮಾರ್ಗವಾಗಿ ಬುಧವಾರ ಲಂಡನ್​ಗೆ ಕಳುಹಿಸಲಾಯಿತು. ಕೃಷಿ ಮತ್ತು ಪರಿಷ್ಕರಿಸಲ್ಪಟ್ಟ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು(APEDA) 500 ಕೆಜಿ ವೀಳ್ಯದೆಲೆಗಳ ರಫ್ತಿನ ಕನ್​ಸೈನ್​ಮೆಂಟ್​​ ಜೊತೆಗೆ ಸ್ಯಾಂಪಲ್​ ಶಿಪ್​ಮೆಂಟಾಗಿ 250 ಕೆಜಿ ಭೂತ್​ ಜೊಲೊಕಿಯ ಮೆಣಸಿನಕಾಯಿಗಳನ್ನು ಪ್ಯಾಕ್​ ಮಾಡಿ ಕಳುಹಿಸಿದೆ ಎನ್ನಲಾಗಿದೆ.

    ಇದನ್ನೂ ಓದಿ: ರಾಜಭವನದಲ್ಲಿ ಹಣ್ಣಿನ ತೋಟ! ಗಿಡ ನೆಟ್ಟು ನೀರೆರೆದ ರಾಜ್ಯಪಾಲ ಗೆಹ್ಲೋತ್​

    ಸ್ಕಾವಿಲ್ಲೆ ಹೀಟ್​ ಯುನಿಟ್ಸ್​(ಎಸ್​ಎಚ್​ಯು) ಮೌಲ್ಯದ ಆಧಾರದ ಮೇಲೆ ಭೂತ್​ ಜೊಲೊಕಿಯ ಮೆಣಸಿನಕಾಯಿಗಳನ್ನು ಜಗತ್ತಿನ ಅತ್ಯಂತ ಖಾರದ ಮೆಣಸಿನಕಾಯಿ ಎಂದು ಗುರುತಿಸಲಾಗಿದೆ. ಕಿಂಗ್​ ಚಿಲ್ಲಿ ಅಥವಾ ಘೋಸ್ಟ್​ ಪೆಪ್ಪರ್​ ಎಂಬ ಹೆಸರಿನಿಂದಲೂ ಈ ಮೆಣಸಿಕಾಯಿಗಳನ್ನು ಕರೆಯಲಾಗುತ್ತದೆ. (ಏಜೆನ್ಸೀಸ್)

    VIDEO | ಖಾರದ ಮೆಣಸಿನಕಾಯಿ ತಿನ್ನುವುದೇ ಇವನ ಧರ್ಮ!

    ಒಲಿಂಪಿಕ್ಸ್​: ಕ್ವಾರ್ಟರ್​ ಫೈನಲ್ಸ್ ತಲುಪಿದ ಸಿಂಧು, ಸತೀಶ್​ ಕುಮಾರ್​; ಅರ್ಜೆಂಟಿನಾ ವಿರುದ್ಧ ಭಾರತದ ಹಾಕಿ ತಂಡಕ್ಕೆ ಜಯ

    VIDEO | ಕೊಲೆ ಶಂಕೆ ಮೂಡಿಸಿರುವ ನ್ಯಾಯಾಧೀಶರ ‘ಅಪಘಾತ’ದ ದೃಶ್ಯ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts