More

    FACT-CHECK| ಕಪಿಲ್ ದೇವ್ ಎಂದೂ ನೋಬಾಲ್ ಎಸೆದಿಲ್ಲವೇ?

    ಬೆಂಗಳೂರು: ಭಾರತಕ್ಕೆ 1983ರ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ನಾಯಕ, ಆಲ್ರೌಂಡರ್ ಆಗಿ ಮಾತ್ರವಲ್ಲ ವೇಗದ ಬೌಲರ್ ಆಗಿಯೂ ಸಾಕಷ್ಟು ಕೊಡುಗೆ ನೀಡಿದವರು. ಅತ್ಯಂತ ನಿಖರ ಬೌಲಿಂಗ್‌ಗೆ ಹೆಸರಾದ ಕಪಿಲ್ ದೇವ್ ವೃತ್ತಿಜೀವನದಲ್ಲಿ ಎಂದೂ ನೋಬಾಲ್ ಎಸೆದಿಲ್ಲ ಎಂಬ ಮಾಹಿತಿ ಜಾಲತಾಣದಲ್ಲಿ ಯಾವಾಗಲೂ ಓಡಾಡುತ್ತಿರುತ್ತದೆ. ಇದೊಂದು ಬಹಳ ವಿಶೇಷವಾದ ದಾಖಲೆ ಎನಿಸಿದರೂ, ಇದು ನಿಜಕ್ಕೂ ಖಚಿತವಾದ ಮಾಹಿತಿಯೇ ಎಂಬುದು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳನ್ನು ಕಾಡಿರುವ ಪ್ರಶ್ನೆ. ಹಾಗಾದರೆ ಸತ್ಯವೇನು ಗೊತ್ತೇ?

    ವಿಶ್ವ ಕ್ರಿಕೆಟ್‌ನಲ್ಲಿ 1984ರವರೆಗೂ ನೋಬಾಲ್ ಮತ್ತು ವೈಡ್ ರನ್‌ಗಳನ್ನು ಬೌಲರ್ ಖಾತೆಗೆ ನೀಡಲಾಗುತ್ತಿರಲಿಲ್ಲ. ನಿಜ ಸಂಗತಿ ಏನೇಂದರೆ, ಕಪಿಲ್ ದೇವ್ 1978ರಲ್ಲಿ ಫೈಸಲಾಬಾದ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಎಸೆದ 2ನೇ ಎಸೆತವೇ ಫ್ರಂಟ್-ಫುಟ್ ನೋಬಾಲ್ ಆಗಿತ್ತು. ಇದಕ್ಕೆ ಈಗ ವಿಡಿಯೋ ಸಾಕ್ಷ್ಯವೂ ದೊರೆತಿದೆ. 1984ರ ನಂತರದ ಅಂಕಿ-ಅಂಶಗಳನ್ನು ಮೆಲುಕು ಹಾಕಿದರೆ, ಕಪಿಲ್ ದೇವ್ 18 ನೋಬಾಲ್ ಎಸೆದಿದ್ದಾರೆ. ಆದರೆ ಈ ಪೈಕಿ ಫ್ರಂಟ್-ಫುಟ್ ನೋಬಾಲ್ ಎಷ್ಟು ಮತ್ತು ಹೈಟ್ ಕಾರಣದಿಂದಾಗಿ ನೋಬಾಲ್ ಆದವುಗಳೆಷ್ಟು ಎಂಬುದು ಸ್ಪಷ್ಟವಾಗಿಲ್ಲ. ಯಾಕೆಂದರೆ ಸ್ಕೋರರ್‌ಗಳು ಇದನ್ನು ದಾಖಲಿಸಿಲ್ಲ.

    ಇದನ್ನೂ ಓದಿ: ಇಂದು ಬರ್ತ್​ಡೇ ಆಚರಿಸುತ್ತಿರುವ ಐವರು ಕ್ರಿಕೆಟಿಗರು ಸಾವಿರ ವಿಕೆಟ್ ಸರದಾರರು!

    ಕಪಿಲ್ ದೇವ್ ಮಾತ್ರವಲ್ಲ, ಪಾಕಿಸ್ತಾನದ ಇಮ್ರಾನ್ ಖಾನ್, ಆಸ್ಟ್ರೇಲಿಯಾದ ಡೆನಿಸ್ ಲಿಲ್ಲಿ, ಇಂಗ್ಲೆಂಡ್‌ನ ಇಯಾನ್ ಬಾಥಂ, ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ, ವೆಸ್ಟ್ ಇಂಡೀಸ್‌ನ ಲ್ಯಾನ್ಸ್ ಗಿಬ್ಸ್ ಕೂಡ ವೃತ್ತಿಜೀವನದಲ್ಲಿ ಎಂದೂ ನೋಬಾಲ್ ಎಸೆದಿಲ್ಲ ಎಂಬ ಮಾಹಿತಿಯ ಸುದ್ದಿಗಳು ಜಾಲತಾಣಗಳಲ್ಲಿ ಓಡಾಡುತ್ತಿರುತ್ತವೆ. ಆದರೆ ಇದು ಕೂಡ ಸತ್ಯವಾದ ಸುದ್ದಿಯಲ್ಲ. ಈಗ ಪಾಕಿಸ್ತಾನದ ಪ್ರಧಾನಿ ಆಗಿರುವ ಇಮ್ರಾನ್‌ಗೆ 1992ರ ವಿಶ್ವಕಪ್ ಫೈನಲ್ ವೃತ್ತಿಜೀವನದ ಅಂತಿಮ ಪಂದ್ಯವಾಗಿತ್ತು. ಈ ಪಂದ್ಯದ ಸ್ಕೋರ್‌ಕಾರ್ಡ್ ನೋಡಿದರೆ ಇಮ್ರಾನ್ ಖಾನ್ ಒಂದು ನೋಬಾಲ್ ಎಸೆದಿರುವುದು ಕಾಣಿಸುತ್ತದೆ. ಹೀಗಾಗಿ ಇಮ್ರಾನ್ ನೋಬಾಲ್ ಎಸೆದಿಲ್ಲ ಎಂಬ ಸುದ್ದಿ ಸತ್ಯವಲ್ಲ ಎಂಬುದು ಸ್ಪಷ್ಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts