More

    ಪತಿಗೆ 500 ಮಹಿಳೆಯರ ಜತೆ ಸಂಬಂಧ: ಆಕಸ್ಮಿಕವಾಗಿ ಮೊಬೈಲ್​ ನೋಡಿ ಮೂರ್ಛೆ ಹೋದ ಪತ್ನಿ!

    ಚೆನ್ನೈ: ನನ್ನ ಪತಿಗೆ 500ಕ್ಕೂ ಅಧಿಕ ಮಹಿಳೆಯರ ಜತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ, ಮಹಿಳೆಯೊಬ್ಬಳು ಮದ್ರಾಸ್​ ಹೈಕೋರ್ಟ್​ನ ಮದುರೈ ಪೀಠಕ್ಕೆ ಅರ್ಜಿ ಸಲ್ಲಿಸಿರುವ ಪ್ರಸಂಗ ವರದಿಯಾಗಿದೆ.

    ದೂರುದಾರೆಯ ಹೆಸರು ಆರತಿ. ಈಕೆ ತಂಜಾವೂರು ಜಿಲ್ಲೆಯ ನಿವಾಸಿ. ವಿವೇಕ್​ರಾಜ್​ ಎಂಬುವರನ್ನು ನಾನು ಮದುವೆಯಾಗಿದ್ದೇನೆ. ಇಬ್ಬರು ಜತೆಯಲ್ಲೇ ವಾಸಿಸುತ್ತಿದ್ದೆವು. ಹೀಗಿರುವಾಗ ಒಮ್ಮೆ ನನ್ನ ಗಂಡನ ಸೆಲ್​ಫೋನ್​ ತೆಗೆದು ಪರಿಶೀಲನೆ ನಡೆಸಿದಾಗ ಒಂದು ಕ್ಷಣ ಶಾಕ್​ ಆದೆ. ಮಹಿಳೆಯರ ಜತೆ ವಿಡಿಯೋ ಕಾಲ್​ನಲ್ಲಿ ಬೆತ್ತಲೆಯಾದ ಅನೇಕ ಸ್ಕ್ರೀನ್​ಶಾಟ್​ಗಳು ಮತ್ತು ಗಂಡನ ಖಾಸಗಿ ಅಂಗದ ಫೋಟೋಗಳನ್ನು ನೋಡಿ ಆಘಾತವಾಗಿದೆ.

    ಪತಿ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿರುವುದರಿಂದ ಅಲ್ಲಿಗೆ ಬರುವ ಹುಡುಗಿಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರ ಜತೆ ಮಾತನಾಡಿ, ಅವರನ್ನು ಪರಿಚಯಿಸಿಕೊಂಡು ಸುಮಾರು 500 ರಿಂದ 1000 ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋಗಳನ್ನು ತೆಗೆದಿದ್ದಾರೆ ಎಂದು ಪತ್ನಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಪತಿ ಮತ್ತು ಅವರ ಪಾಲಕರನ್ನು ಪ್ರಶ್ನೆ ಮಾಡಿದಾಗ ಈ ವಿಚಾರವನ್ನು ಬಹಿರಂಗಪಡಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

    ಈ ವಿಚಾರ ನನಗೆ ತಿಳಿಯಿತು ಎಂಬ ಕಾರಣಕ್ಕೆ ನಾನು ಎರಡು ತಿಂಗಳ ಗರ್ಭಿಣಿ ಅಂತಾನೂ ನೋಡದೆ ನನಗೆ ಕಿರುಕುಳ ನೀಡಿದರು. ಇದರ ಪರಿಣಾಮ ಗರ್ಭಪಾತವೂ ಆಯಿತು. ಈ ಸಂಬಂಧ ತಂಜಾವೂರು ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಆದರೆ, ಯಾವೊಬ್ಬ ಪೊಲೀಸ್​ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಂತ್ರಸ್ತ ಮಹಿಳೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ.

    ನನ್ನ ಗಂಡನ ವಿರುದ್ಧ ನೀಡಿರುವ ದೂರಿನ ತನಿಖೆಯನ್ನು ತಂಜಾವೂರು ಮಹಿಳಾ ಪೊಲೀಸರು ನಿಷೇಧಿಸಬೇಕು. ಬದಲಾಗಿ ಪ್ರಕರಣವನ್ನು ಸಿಬಿಸಿಐಡಿ ತನಿಖೆಗೆ ವರ್ಗಾಯಿಸಿ ಆದೇಶ ಹೊರಡಿಸಬೇಕು ಎಂದು ಮಹಿಳೆ ಮನವಿ ಮಾಡಿದ್ದು, ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಕುಮಾರ ಗ್ರೂಪ್, ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ತಂಜಾವೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿಬಿಸಿಐಡಿಗೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿದರು. (ಏಜೆನ್ಸೀಸ್​)

    3 ಪ್ರಮುಖ ರೈಲ್ವೆ ಕಾರಿಡಾರ್​ ಘೋಷಿಸಿದ ವಿತ್ತ ಸಚಿವೆ: ವಂದೇ ಭಾರತ್​ ಗುಣಮಟ್ಟಕ್ಕೆ 40 ಸಾವಿರ ಬೋಗಿಗಳ ಅಪ್​ಗ್ರೇಡ್​

    ವಾರದಲ್ಲಿ 36 ಗಂಟೆ ಉಪವಾಸ ಇರ್ತಾರೆ ಸುಧಾಮೂರ್ತಿ ಅಳಿಯ ಸುನಕ್ !; ಈ ಬಗ್ಗೆ ತಜ್ಞರು ಹೇಳೋದು ಕೇಳಿದ್ರೆ ಅಚ್ಚರಿ ಪಡ್ತೀರಾ…

    ‘https://www.vijayavani.net/railway-budget-2024-3-major-railway-corridors-announced-40000-bogies-to-be-upgraded-to-vande-bharat-standards

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts