More

    3 ಪ್ರಮುಖ ರೈಲ್ವೆ ಕಾರಿಡಾರ್​ ಘೋಷಿಸಿದ ವಿತ್ತ ಸಚಿವೆ: ವಂದೇ ಭಾರತ್​ ಗುಣಮಟ್ಟಕ್ಕೆ 40 ಸಾವಿರ ಬೋಗಿಗಳ ಅಪ್​ಗ್ರೇಡ್​

    ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ ಇಂದು ಮಧ್ಯಂತರ ಬಜೆಟ್​ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್​​ ಭಾರತೀಯ ರೈಲ್ವೇ ಕ್ಷೇತ್ರಕ್ಕೂ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದರು. ಭಾರತೀಯ ರೈಲ್ವೆಯು ಮೂರು ಪ್ರಮುಖ ರೈಲ್ವೆ ಆರ್ಥಿಕ ಕಾರಿಡಾರ್​ಗಳನ್ನು ಅಭಿವೃದ್ಧಿಪಡಿಸಲಿವೆ ಮತ್ತು ವಂದೇ ಭಾರತ್​ ಗುಣಮಟ್ಟಕ್ಕೆ ಬೋಗಿಗಳನ್ನು ಅಪ್​ಗ್ರೇಡ್​ ಮಾಡಲಾಗುವುದು ಎಂದರು.

    ನಿಮಗೆಲ್ಲರಿಗೂ ತಿಳಿದಿರುವಂತೆ ಈ ಹಿಂದಿನಂತೆ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಪ್ರಸ್ತುತ ಪಡಿಸದೇ ಅದನ್ನು ವಿತ್ತ ಸಚಿವರ ಬಜೆಟ್​ ಮಂಡನೆಯಲ್ಲೇ ಸೇರಿಸಿಕೊಳ್ಳಲಾಗಿದೆ. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೆಯ ಪಾತ್ರ ಬಹಳ ಮುಖ್ಯವಾಗಿದೆ. ಸುರಕ್ಷತೆ, ಮೂಲಸೌಕರ್ಯ ಉನ್ನತೀಕರಣ, ಹೊಸ ರೈಲುಗಳ ಪ್ರಾರಂಭ ಮತ್ತು ನವೀಕರಿಸಿದ ರೈಲು ನಿಲ್ದಾಣಗಳ ಮೇಲೆ ಭಾರತೀಯ ರೈಲ್ವೆ ಇಲಾಖೆ ಕೇಂದ್ರೀಕರಿಸಿದೆ.

    ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳೊಂದಿಗೆ, ಭಾರತೀಯ ರೈಲ್ವೆಯು ಪ್ರಯಾಣಿಕರ ಸೌಕರ್ಯವನ್ನು ಅಪ್​​ಗ್ರೇಡ್​ ಮಾಡುತ್ತಿದೆ. 40,000 ಬೋಗಿಗಳನ್ನು ವಂದೇ ಭಾರತ್ ರೈಲಿನ ಮಾನದಂಡಕ್ಕೆ ರೈಲ್ವೆ ಇಲಾಖೆ ಅಪ್​ಗ್ರೇಡ್​ ಮಾಡಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು. ಮೂರು ಪ್ರಮುಖ ರೈಲ್ವೆ ಆರ್ಥಿಕ ಕಾರಿಡಾರ್‌ಗಳನ್ನು ಘೋಷಿಸಿದರು. ಅವುಗಳೆಂದರೆ..

    * ಶಕ್ತಿ, ಖನಿಜ ಮತ್ತು ಸಿಮೆಂಟ್ ಕಾರಿಡಾರ್
    * ಬಂದರು ಸಂಪರ್ಕ ಕಾರಿಡಾರ್‌ಗಳು
    * ಹೆಚ್ಚಿನ ಸಂಚಾರ ಸಾಂದ್ರತೆಯ ಕಾರಿಡಾರ್‌ಗಳು

    ಸೀತಾರಾಮನ್ ಪ್ರಕಾರ, ಈ ಹೊಸ ಕಾರಿಡಾರ್‌ಗಳನ್ನು ಬಹು-ಮಾದರಿ ಸಂಪರ್ಕಕ್ಕಾಗಿ ಪ್ರಧಾನಿ ಗತಿ ಶಕ್ತಿ ಯೋಜನೆ ಅಡಿಯಲ್ಲಿ ಗುರುತಿಸಲಾಗಿದೆ. ಹೆಚ್ಚಿನ ದಟ್ಟಣೆ ಸಾಂದ್ರತೆಯ ಕಾರಿಡಾರ್‌ಗಳು ವೇಗವಾದ ಮತ್ತು ಸುರಕ್ಷಿತ ರೈಲು ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಯಾಣಿಕ ರೈಲುಗಳ ಕಾರ್ಯಾಚರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. (ಏಜೆನ್ಸೀಸ್​)

    ಮಧ್ಯಂತರ ಬಜೆಟ್​ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಭರವಸೆ ನೀಡುತ್ತದೆ: ಪ್ರಧಾನಿ ಮೋದಿ

    ಕೇಂದ್ರ ಬಜೆಟ್​ 2024: ನಿರ್ಮಲಾ ಸೀತಾರಾಮನ್​ ಮಂಡಿಸಿದ ಮಧ್ಯಂತರ ಬಜೆಟ್​ನ ಪ್ರಮುಖಾಂಶಗಳು ಇಲ್ಲಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts