More

    ಕೇಂದ್ರದ ಅನುದಾನ ಬಂದಿಲ್ಲವೆಂದು ಜನರನ್ನು ದಾರಿ ತಪ್ಪಿಸಬೇಡಿ: ನಿರ್ಮಲಾ ಸೀತಾರಾಮನ್ ತಿರುಗೇಟು

    ಬೆಂಗಳೂರು ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕಕ್ಕೆ ನಮ್ಮ ಪಾಲಿನ ಅನುದಾನ ನೀಡುತ್ತಿಲ್ಲವೆಂದು ಜನರನ್ನು ದಾರಿ ತಪ್ಪಿಸುವುದು ಬೇಡ. ಯುಪಿಎ ಅವಧಿಗಿಂತ ಮೋದಿ ಸರ್ಕಾರದ ಅವಧಿಯಲ್ಲಿ ಶೇ.3.7 ಪಟ್ಟು ಹೆಚ್ಚು ಅನುದಾನ ನೀಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

    ಜೆ.ಪಿ.ನಗರದಲ್ಲಿರುವ ಆರ್.ವಿ. ದಂತ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ 2004ರಿಂದ 2014ರ ಅವಧಿಯಲ್ಲಿ ಕರ್ನಾಟಕಕ್ಕೆ 60,779 ಕೋಟಿ ರೂ.ಗಳನ್ನು ನೀಡಲಾಗಿದೆ. ಹಾಗೆಯೇ 2014ರಿಂದ 2024ರ ೆಬ್ರವರಿವರೆಗೆ ಮೋದಿ ಸರ್ಕಾರದಲ್ಲಿ 2,26,832 ಕೋಟಿ ರೂ. ನೀಡಲಾಗಿದೆ ಎಂದು ಹೇಳಿದರು.

    ಹಣಕಾಸು ಆಯೋಗದ ಶಿಾರಸಿನಂತೆ ಕೇಂದ್ರದಿಂದ ರಾಜ್ಯಗಳಿಗೆ ಅನುದಾನ ನೀಡಲಾಗುತ್ತಿದೆ. ಪ್ರತಿ ಪೈಸಾ ಪೈಸೆಯನ್ನು ಕರ್ನಾಟಕಕ್ಕೆ ನಿಗದಿತ ಅವಧಿಯಲ್ಲಿ ನೀಡಲಾಗಿದೆ. 4ಕ್ಕಿಂತ ಹೆಚ್ಚು ಬಾರಿ ಎರಡು ತಿಂಗಳು ಮೊದಲೇ ಅನುದಾನವನ್ನು ನೀಡಲಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ತೆರಿಗೆ ಸಂಗ್ರಹ ಜಾಸ್ತಿಯಾಗಿದೆ. ಯುಪಿಎ ಸರ್ಕಾರದ 10 ವರ್ಷಗಳಿಗೆ ಹೋಲಿಸಿಕೊಂಡರೆ, ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಶೇ.258 ರಷ್ಟು ಹೆಚ್ಚಳವಾಗಿದೆ. ಹಾಗೆಯೇ ತೆರಿಗೆ ಸಂಗ್ರಹಿಸಿದ್ದನ್ನು ಮತ್ತೆ ಹಿಂತಿರುಗಿಸಲಾಗಿದೆ ಎಂದು ತಿಳಿಸಿದರು.

    ವಿಶೇಷ ಅನುದಾನಕ್ಕೆ ಶಿಾರಸು ಮಾಡಿಲ್ಲ:

    ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಿರುವ 5,495 ವಿಶೇಷ ಅನುದಾನವನ್ನು ಕರ್ನಾಟಕಕ್ಕೆ ನೀಡಿಲ್ಲವೆಂಬುದು ಶುದ್ಧ ಸುಳ್ಳು. ಏಕೆಂದರೆ, ಹಣಕಾಸು ಆಯೋಗವು ಶಿಾರಸು ಮಾಡದೆ ಅನುದಾವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

    ಹಣಕಾಸು ಆಯೋಗವು ಮೂಲಸೌಕರ್ಯಕ್ಕೆ ಅನುದಾನ ನೀಡಬೇಕೆಂದು ಹೇಳಿಲ್ಲ. ಹೀಗಿದ್ದರೂ ಕರೊನಾ ಬಳಿಕ ಆರ್ಥಿಕ ಹೊಡೆತವಾಗಿದೆ ಎಂದು ತಿಳಿದು ಶೇ.50ರಷ್ಟು ಅನುದಾನವನ್ನು ಬಡ್ಡಿ ರಹಿತವಾಗಿ ನೀಡಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಅನುದಾನ ನೀಡಿಲ್ಲವೆಂದು ಜನರನ್ನು ದಾರಿ ತಪ್ಪಿಸುವುದು ಬೇಡ. ಅಂಕಿಅಂಶಗಳನ್ನು ನೋಡಿ ಮಾತನಾಡಿ ಎಂದರು.

    ರಾಜ್ಯದಿಂದ ಸಂಗ್ರಹವಾಗುವ ತೆರಿಗೆ ಆಧಾರದ ಮೇಲೆ ರಾಜ್ಯಗಳಿಗೆ ನೀಡುವ ಪಾಲಿನ ವಿಚಾರವಾಗಿ
    12ನೇ ಹಣಕಾಸು ಆಯೋಗ ಶೇ30.5, 13ನೇ ಹಣಕಾಸು ಆಯೋಗ ಶೇ.32 ಮಾಡಿತ್ತು. 2014ರಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ 14ನೇ ಹಣಕಾಸು ಆಯೋಗವು ಶೇ.42 ಶಿಾರಸು ಮಾಡಿದೆ. ಇದನ್ನು ಮೋದಿ ಅವರು ಸ್ವೀಕರಿಸಿ ಅನುದಾನ ನೀಡಿದ್ದಾರೆ ಎಂದು ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts