More

    ಪ್ರತಿ ಗಂಟೆಗೂ ತೆರಿಗೆ ದರ ಬದಲು: ಜಿ.ವೇಣುಗೋಪಾಲ್

    ಚಿಕ್ಕಮಗಳೂರು: ಯಾವುದೇ ಸರಕುಗಳ ಮಾರಾಟದಲ್ಲಿ ಎಚ್‌ಎಸ್‌ಎನ್ ಸಂಖ್ಯೆ ಕಡ್ಡಾಯವಾಗಿರಬೇಕು ಎಂದು ಚಾರ್ಟೆಡ್ ಅಕೌಂಟೆಂಟ್ ಜಿ.ವೇಣುಗೋಪಾಲ್ ತಿಳಿಸಿದರು.

    ನಗರದ ಬ್ರಹ್ಮಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಸರಕು ಸೇವೆ ತೆರಿಗೆ ಮತ್ತು ಆದಾಯ ತೆರಿಗೆ ಹಾಗೂ ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತೆರಿಗೆಯ ದರವು ಪ್ರತಿ ಗಂಟೆಗೂ ಬದಲಾಗುತ್ತದೆ. ಯಾವುದೇ ಸರಕುಗಳನ್ನು ಮಾರಾಟ ಮಾಡುತ್ತಿದ್ದರೆ ಸರಕು ಪಟ್ಟಿಯಲ್ಲಿ ನಾಲ್ಕು ಅಂಕಿಯ ಎಚ್‌ಎಸ್‌ಎನ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು. ವಹಿವಾಟು 5 ಕೋಟಿ ರೂ.ಗಿಂತ ಹೆಚ್ಚಿದ್ದರೆ 6 ಅಂಕಿಯ ಎಚ್‌ಎಸ್‌ಎನ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಮಾಹಿತಿ ನೀಡಿದರು.
    ಸರಕು ಪಟ್ಟಿಯಲ್ಲಿ ಯಾವುದೇ ರೀತಿಯ ಗೊಂದಲ ಮತ್ತು ತಪ್ಪುಗಳನ್ನು ಮಾಡಿದ್ದಲ್ಲಿ ಕನಿಷ್ಠ 25 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಕೆಲ ಸರಕು ಪಟ್ಟಿಯಲ್ಲಿ ಮಾಹಿತಿ ಕಾರಣದಿಂದ ತಪ್ಪುಗಳನ್ನು ನಡೆದರೆ ಪುನಃ ತಪ್ಪುಗಳು ಮುಂದುವರೆಸುವುದಿಲ್ಲ ಎಂದು ಮನವಿ ಸಲ್ಲಿಸಿ ವಿನಾಯಿತಿ ಪಡೆದುಕೊಳ್ಳಬಹುದು. ಆದರೆ ಆ ತಪ್ಪು ಗಳಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ನಷ್ಟವಾಗಬಾರದು. ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ವಸ್ತು ಮಾರಾಟ ಮಾಡಿದರೆ ಅವುಗಳಿಗೆ ಕಡ್ಡಾಯವಾಗಿ ಜಿಎಸ್‌ಟಿ ಪಾವತಿಸಬೇಕಾಗುತ್ತದೆ ಎಂದರು.
    ಚಾರ್ಟೆಡ್ ಅಕೌಂಟೆಂಟ್ ಶ್ರೇಯಸ್ ಮಾತನಾಡಿ, ತಾವು ಕಟ್ಟುವ ಆಮದು ತೆರಿಗೆಯು ದೇಶದ ಮೂಲಸೌಕರ್ಯ, ಸಬ್ಸಿಡಿ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತದೆ. ತಮ್ಮ ಆದಾಯಕ್ಕಿಂತ ಹೆಚ್ಚು ಬಡ್ಡಿ ಪಾವತಿ ಬಾರದಂತೆ ಹೇಗೆ ನೋಡಿಕೊಳ್ಳುತ್ತೇವೆಯೋ ಹಾಗೆಯೇ ಸರಿಯಾದ ರೀತಿಯಲ್ಲಿ ತೆರಿಗೆಯನ್ನೂ ಪಾವತಿಸಬೇಕು ಎಂದು ಸಲಹೆ ನೀಡಿದರು.
    ವಾರ್ಷಿಕ ಆದಾಯ 2.50 ಲಕ್ಷ ರೂ.ಗಿಂತ ಹೆಚ್ಚಾಗಿದ್ದರೆ, ಚಾಲ್ತಿಖಾತೆಯಲ್ಲಿ ಒಂದು ಕೋಟಿಗಿಂತ ಹೆಚ್ಚು ಹಣ ಠೇವಣಿಯಾದರೆ, ವಿದೇಶಿ ಪ್ರಯಾಣದಲ್ಲಿ ಅಥವಾ ವಿದೇಶಿ ಸಂಬಂಧಿಸಿದ ಯಾವುದೇ ಖರ್ಚನ್ನು 2 ಲಕ್ಷ ರೂ.ಗಿಂತ ಹೆಚ್ಚು ಮಾಡಿದರೆ ಹಾಗೂ ವಿದ್ಯುತ್ ಬಿಲ್ 1 ಲಕ್ಷ ರೂ.ಗಿಂತ ಹೆಚ್ಚು ಪಾವತಿಸಿದರೆ ಆದಾಯ ತೆರಿಗೆ ಕಡತವನ್ನು ತೆರೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
    ಅಧ್ಯಕ್ಷತೆಯನ್ನು ಜಿಲ್ಲಾ ಲೆಕ್ಕಿಗರ ಮತ್ತು ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಜೆ.ಮಾಗಿಮಿರಾಜ್ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಜಾವೀದ್ ಅಕ್ತರ್, ಕಾರ್ಯದರ್ಶಿ ಅಬ್ದುಲ್ ಶವೂರ್, ಸದಸ್ಯರಾದ ಸೀಮಾ, ದೀಪ್ತಿ, ಬಾಲಾಜಿ, ಖಾದರ್‌ಪಾಷ, ಚಂದ್ರಶೇಖರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts