More

    ಮುಖ್ಯಮಂತ್ರಿಯನ್ನು ಭೇಟಿಯಾದ ಮುಸ್ಲಿಮರು: ಏನು ಅವರ ಬೇಡಿಕೆ?

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮಂಗಳವಾರ ಮುಸ್ಲಿಮರ ನಿಯೋಗವೊಂದು ಭೇಟಿ ಮಾಡಿ ಹಲವು ಮಹತ್ವದ ಬೇಡಿಕೆಗಳನ್ನು ಮುಂದಿಟ್ಟಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಈ ಭೇಟಿ ನಡೆದಿದೆ.

    ಈ ಮುಸ್ಲಿಂ ನಿಯೋಗದ ನೇತೃತ್ವವನ್ನು ಮೌಲಾನಾ ಸಗೀರ್ ಅಹಮದ್ ರಶೀದ್ ವಹಿಸಿದ್ದರು. ಸುಮಾರು 10ಕ್ಕೂ ಹೆಚ್ಚು ಜನ ಮುಸ್ಲಿಂ ಮುಖಂಡರು ಅವರ ಜತೆ ಇದ್ದರು. ಮುಖ್ಯಮಂತ್ರಿ ಜತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿದ್ದರು.

    ಇದನ್ನೂ ಓದಿ ಅಭಿವೃದ್ಧಿ ಕಾರ್ಯಕ್ಕಾಗಿ 33000 ಕೋಟಿ ರೂ. ಸಾಲ ಪಡೆಯಲಿದೆ ರಾಜ್ಯ ಸರ್ಕಾರ

    ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಗಲಭೆ ಪ್ರಕರಣವನ್ನು ಮುಸ್ಲಿಂ ಮುಖಂಡರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಪೊಲೀಸರು ಆ ಗಲಭೆಯಲ್ಲಿ ಭಾಗಿಯಾದವರನ್ನು ಮಾತ್ರವಲ್ಲದೆ, ಕೆಲವು ಅಮಾಯಕರನ್ನೂ ಬಂಧಿಸಿದ್ದಾರೆ. ನಿಜವಾಗಿಯೂ ತಪ್ಪು ಮಾಡಿದವರನ್ನು ಶಿಕ್ಷೆಗೆ ಒಳಪಡಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಅಮಾಯಕರನ್ನು ಬಿಟ್ಟುಬಿಡಿ ಎಂದು ಆಗ್ರಹಿಸಿದರು.

    ಈ ಗಲಭೆ ಸಂಭವಿಸಿದ ನಂತರವೂ ಹಿಂದೂ-ಮುಸ್ಲಿಂ ದೇವರುಗಳ ಬಗ್ಗೆ ಅವಹೇಳನಕಾರಿಯಾದ ಸಂದೇಶಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹಾಕುತ್ತಿದ್ದಾರೆ. ಅದನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಬೇಕು ಎಂದೂ ಒತ್ತಾಯಿಸಿದರು.

    ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts