More

    ದೇಶೀಯ ಟಿ20 ಟೂರ್ನಿಯಲ್ಲಿ ಇಂದು ಸೆಮಿಫೈನಲ್ ಸೆಣಸಾಟ

    ಅಹಮದಾಬಾದ್: ಕರೊನಾ ಕಾಲದಲ್ಲಿ ನಡೆಯುತ್ತಿರುವ ದೇಶೀಯ ಕ್ರಿಕೆಟ್‌ನ ಮೊದಲ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ಶುಕ್ರವಾರ ನಡೆಯಲಿವೆ. ಫೆಬ್ರವರಿ 18ರಂದು ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಹಿನ್ನೆಲೆಯಲ್ಲಿ ಆಟಗಾರರ ಪಾಲಿಗೆ ಈ ಪಂದ್ಯಗಳು ಮಹತ್ವ ಪಡೆದಿವೆ.

    ಮೊದಲ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ಹಾಗೂ ರಾಜಸ್ಥಾನ ತಂಡಗಳು ಎದುರಾದರೆ, ಎರಡನೇ ಪಂದ್ಯದಲ್ಲಿ ಬರೋಡ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್ ಆಟಗಾರರ ಹರಾಜು ಹಾಗೂ ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೂ ಆಯ್ಕೆಗಾರರ ಗಮನ ಸೆಳೆಯಲು ಈ ಪಂದ್ಯಗಳು ಪ್ರಮುಖವಾಗಿವೆ. ರಾಜಸ್ಥಾನ ಹೊರತುಪಡಿಸಿ, ಹಾಲಿ ರನ್ನರ್‌ಅಪ್ ತಮಿಳುನಾಡು, ಪಂಜಾಬ್ ಹಾಗೂ ಬರೋಡ ತಂಡಗಳು ಲೀಗ್‌ನಲ್ಲಿ ಇದುವರೆಗೆ ಅಜೇಯವಾಗಿ ಉಳಿದಿವೆ.

    ಇದನ್ನೂ ಓದಿ: ಬ್ರಿಸ್ಬೇನ್ ಹೀರೋ ರಿಷಭ್ ಪಂತ್ ಈಗ ವಿಶ್ವ ನಂ. 1 ವಿಕೆಟ್​ ಕೀಪರ್-ಬ್ಯಾಟ್ಸ್‌ಮನ್

    ಬರೋಡದ ವಿಷ್ಣು ಸೋಲಂಕಿ, ರಾಜಸ್ಥಾನದ ಮಹಿಪಾಲ್ ಲೊಮ್ರರ್, ಅಂಕಿತ್ ಲಾಂಬ, ತಮಿಳುನಾಡಿದ ಹರಿ ನಿಶಾತ್ ಟೂರ್ನಿಯುದ್ದಕ್ಕೂ ಉತ್ತಮ ನಿರ್ವಹಣೆ ತೋರಿದ್ದು, ಮತ್ತೊಮ್ಮೆ ಸ್ಫೋಟಿಸುವ ವಿಶ್ವಾಸದಲ್ಲಿದ್ದಾರೆ. ಕಳೆದ ಬಾರಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಕೇವಲ 1 ರನ್‌ನಿಂದ ಸೋತಿರುವ ತಮಿಳುನಾಡು ಹಾಗೂ ಇದೇ ಟೂರ್ನಿಯಲ್ಲಿ 4 ಬಾರಿ ಫೈನಲ್‌ನಲ್ಲಿ ಮುಗ್ಗರಿಸಿರುವ ಪಂಜಾಬ್ ತಂಡಗಳು ಪ್ರಶಸ್ತಿ ಫೇವರಿಟ್ ಎನಿಸಿವೆ.

    ಇಂದಿನ ಸೆಮಿಫೈನಲ್ಸ್
    *ತಮಿಳುನಾಡು-ರಾಜಸ್ಥಾನ
    ಆರಂಭ: ಮಧ್ಯಾಹ್ನ 12.00
    *ಪಂಜಾಬ್-ಬರೋಡ
    ಆರಂಭ: ರಾತ್ರಿ 7.00
    ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್

    ಟೀಮ್ ಇಂಡಿಯಾದ ಈ ಕ್ರಿಕೆಟಿಗನ ಅಕ್ಕ ಕೂಡ ವೃತ್ತಿಪರ ಕ್ರಿಕೆಟರ್, ತಮ್ಮನ ಯಶಸ್ಸಿಗೂ ನೆರವು!

    ಹಸೆಮಣೆಗೇರಿದ ಟೀಮ್ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts