More

    ಜೈಲಲ್ಲೇ ಸಂಧಾನಕ್ಕೆ ಮುರುಘಾ ಶರಣರ ಪ್ರಯತ್ನ; ಜಾಮೀನಿನ ಮೇಲೆ ಬಿಡುಗಡೆ ಆಗುತ್ತಿದ್ದಂತೆ ಬಸವರಾಜನ್ ಪ್ರತಿಕ್ರಿಯೆ

    ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಪ್ರಕರಣದದಲ್ಲಿ ಬಂಧಿತರಾಗಿರುವ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರು ಜೈಲಿನಲ್ಲಿರುವಾಗ ನನ್ನ ಜತೆ ಸಂಧಾನ ಮಾತುಕತೆಗೆ ಪ್ರಯತ್ನಿಸಿದ್ದರು ಎಂದು ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಯಾದ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ತಿಳಿಸಿದ್ದಾರೆ.

    ಕಾರಾಗೃಹದಿಂದ ಹೊರಬಂದ ಬಳಿಕ ಮಾತನಾಡಿದ ಅವರು, ಜೈಲಿನಲ್ಲಿ ಭೇಟಿ ಮಾಡಲು ಸ್ವಾಮೀಜಿ ಹೇಳಿ ಕಳುಹಿಸಿದ್ದರು. ಆದರೆ ಅದಕ್ಕೆ ನಾನು ಒಪ್ಪಲಿಲ್ಲ. ಅಧಿಕಾರಿಗಳು ಕೂಡ ಅವಕಾಶ ನೀಡಲಿಲ್ಲ ಎಂದರು.
    ದ್ವೇಷದಿಂದ ನಮ್ಮ ಮೇಲೆ ಪ್ರಕರಣ ದಾಖಲಿಸಲಾಗಿದೆ. ಒತ್ತಡಕ್ಕೆ ಮಣಿದು ಪೊಲೀಸರು ಒಂದೇ ದಿನದಲ್ಲಿ ನನ್ನನ್ನು ಬಂಧಿಸಿದ್ದಾರೆ. ಸತ್ಯಕ್ಕೆ ಜಯ ಸಿಗುತ್ತದೆಂಬ ಭರವಸೆ ಇದೆ. ನಾನು, ನನ್ನ ಪತ್ನಿ ಮತ್ತು ಜತೆಗಿರುವವರು ಆರೋಪ ಮುಕ್ತರಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಟಿಕೆಟ್ ಸಿಗುತ್ತದೆ: ಜೈಲಿನಲ್ಲಿದ್ದಾಗಲೇ ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್ ಸಿಗುತ್ತದೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂದು ಬಸವರಾಜನ್ ತಿಳಿಸಿದರು. ಒಂದೂವರೆ ತಿಂಗಳ ಕಾರಾಗೃಹ ವಾಸ ನನಗೆ ಒಂದಷ್ಟು ಅನುಭವ ತಂದು ಕೊಟ್ಟಿದೆ, ಎಲ್ಲರಿಗೂ ಇದು ಸಿಗುವುದಿಲ್ಲ. ಮುಂದೆ ಶಾಸಕನಾಗಿ ಬಂದು ಜೈಲಿನಲ್ಲಿರುವ ನ್ಯೂನತೆ ಸರಿಪಡಿಸುವುದಾಗಿ ಕೈದಿಗಳಿಗೆ ಭರವಸೆ ನೀಡಿ ಬಂದಿದ್ದೇನೆ ಎಂದರು.

    ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಸರಿ ಇದೆ. ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸುವಂತೆ ಪ್ರತಿಭಟಿಸಿದ್ದು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವುದು ಸರಿಯಲ್ಲ. ತೀರ್ಪು ಬರುವವರೆಗೆ ಕಾಯಬೇಕು ಎಂದರು. ಸ್ವಾಮೀಜಿ ವಿರುದ್ಧದ ಪ್ರಕರಣದಲ್ಲಿ ಇನ್ನಿಬ್ಬರ ಬಂಧನವಾಗಿಲ್ಲ ಎಂದು ಇದೇ ವೇಳೆ ತಿಳಿಸಿದರು.

    ಬೆಂಬಲಿಗರಿಂದ ಹೂವಿನ ಹಾರ ಹಾಕಿ ಸ್ವಾಗತ, ಮೆರವಣಿಗೆ

    ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾಶರಣರ ವಿರುದ್ಧದ ಪಿತೂರಿ ಪ್ರಕರಣದಲ್ಲಿ ಬಂಧಿತರಾಗಿದ್ದ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರು ಷರತ್ತುಬದ್ಧ ಜಾಮೀನಿನ ಮೇಲೆ ಮಂಗಳವಾರ ಬಿಡುಗಡೆಯಾಗಿದ್ದಕ್ಕೆ ಅದ್ಧೂರಿ ಸ್ವಾಗತವೇ ಸಿಕ್ಕಿದೆ.

    ಕಾರಾಗೃಹದ ಬಳಿ ಕಾದಿದ್ದ ಅವರ ಬೆಂಬಲಿಗರು ಬಸವರಾಜನ್ ಹೊರಬರುತ್ತಿದ್ದಂತೆ ಹೂವಿನ ಹಾರ ಹಾಕಿ ಸ್ವಾಗತ ಕೋರಿದರು. ಕೆಲವರು ಕಾಲಿಗೆ ಬಿದ್ದು ನಮಸ್ಕರಿಸಿದರೆ, ಇನ್ನು ಕೆಲವರು ಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟರು.

    ನವೆಂಬರ್ 10ರಂದು ಬಂಧಿತರಾಗಿದ್ದ ಬಸವರಾಜನ್ ಅವರಿಗೆ ಡಿಸೆಂಬರ್ 22ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರ ಆದೇಶದ ಪ್ರತಿಯನ್ನು ಅವರ ವಕೀಲರು ಮಂಗಳವಾರ ಬೆಳಗ್ಗೆ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ಬಿಡುಗಡೆ ಆಯಿತು.

    ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    20 ಕೋಟಿ ರೂ. ಮೋಸ ಮಾಡಿದ್ದ ಮಹಾವಂಚಕಿಯ ಬಂಧನ; ಮಾತಲ್ಲೇ ಮರುಳು ಮಾಡುವ ಚಾಲಾಕಿಯಿಂದ 40 ಮಂದಿಗೆ ಧೋಖಾ

    ಅರೆಬೆತ್ತಲೆಯಾಗಿ ಎರಡನೇ ಮಹಡಿಗೆ ಹತ್ತಿ ಒಂಟಿ ಮಹಿಳೆ ಇದ್ದ ಮನೆ ಬಾಗಿಲು ಬಡಿದ; ಇಡೀ ಕಟ್ಟಡದಲ್ಲಿ ಯಾರೂ ಇಲ್ಲದಾಗ ಅವಾಂತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts