More

    ಮುರಗೋಡ ತಾಲೂಕು ರಚನೆ ಮಾಡಿ

    ಬೈಲಹೊಂಗಲ: ಬೈಲಹೊಂಗಲ ಮತಕ್ಷೇತ್ರಕ್ಕೆ ಒಳಪಟ್ಟ ಸವದತ್ತಿ ತಾಲೂಕಿನ ಗ್ರಾಮಗಳನ್ನು ಒಟ್ಟುಗೂಡಿಸಿ ಮುರಗೋಡ ತಾಲೂಕು ರಚಿಸಿ. ಇಲ್ಲವಾದರೆ, ಮುರಗೋಡ ಗ್ರಾಮವನ್ನು ಬೈಲಹೊಂಗಲ ತಾಲೂಕಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ನ್ಯಾಯವಾದಿ ಎಫ್.ಎಸ್.ಸಿದ್ಧನಗೌಡರ, ಮಹಾಂತೇಶ ಬಾಳಿಕಾಯಿ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಪಟ್ಟಣದ ಎಸಿ ಕಚೇರಿ ಬಳಿ ಪ್ರತಿಭಟಿಸಿದರು. ಬಳಿಕ ಎಸಿ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.

    ನ್ಯಾಯವಾದಿ ಎಫ್.ಎಸ್. ಸಿದ್ದನಗೌಡರ ಮಾತನಾಡಿ, ಬಾಂಬೆ ಸರ್ಕಾರದಲ್ಲಿ ಮುರಗೋಡ ತಾಲೂಕು ಸ್ಥಾನವಾಗಿತ್ತು. ಕರ್ನಾಟಕ ರಾಜ್ಯ ಉದಯವಾದ ನಂತರ ತಾಲೂಕು ಪಟ್ಟ ಕಳಚಿದ ಕಾರಣ ಮತ್ತೆ ಗ್ರಾಮವಾಗಿ ಉಳಿಯಿತು. ಜನಪತ್ರಿನಿಧಿಗಳ ನಿರ್ಲಕ್ಷೃದಿಂದಾಗಿ ಮುರಗೋಡ ಗ್ರಾಮ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

    ಮುರಗೋಡ ಹೋಬಳಿ ವ್ಯಾಪ್ತಿಯ ಗ್ರಾಮಗಳು ಸವದತ್ತಿ ತಾಲೂಕು ಕೇಂದ್ರದಿಂದ 65 ಕಿ.ಮೀ. ದೂರದಲ್ಲಿವೆ. ಸರ್ಕಾರಿ ಸೌಲಭ್ಯ ಪಡೆಯಲು ಗ್ರಾಮಸ್ಥರು ದೂರದ ಸವದತ್ತಿಗೆ ತೆರಳಬೇಕಾಗಿದೆ. ಬೈಲಹೊಂಗಲ-ಮುರಗೋಡ ನಡುವೆ ಕೇವಲ 3 ಕಿ.ಮೀ. ಅಂತರವಿದೆ. ಸರ್ಕಾರ ದಾಖಲೆ ಪರಿಶೀಲಿಸಿ ಮುರಗೋಡ ಗ್ರಾಮವನ್ನು ಶೀಘ್ರ ಬೈಲಹೊಂಗಲ ತಾಲೂಕಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

    ಮುರಗೋಡ ಹೋಬಳಿ ಕಂದಾಯ ಇಲಾಖೆ ದೃಷ್ಟಿಯಲ್ಲಿ ಸವದತ್ತಿ ತಾಲೂಕಿಗೆ ಒಳಪಟ್ಟರೆ, ಚುನಾವಣೆಯಲ್ಲಿ ಬೈಲಹೊಂಗಲ ಮತಕ್ಷೇತ್ರಕ್ಕೆ ಒಳಪಟ್ಟಿದೆ. ಹೋಬಳಿಯ ಅರಣ್ಯ, ಪಿಎಂಜಿಎಸ್‌ವೈ, ನೀರಾವರಿ ಕಚೇರಿಗಳು ಗೋಕಾಕ ವಿಭಾಗಕ್ಕೆ, ಪಿಡಬ್ಲುೃಡಿ, ಆರ್‌ಟಿಒ ಕಚೇರಿಗಳು ಬೈಲಹೊಂಗಲಕ್ಕೆ, ಪೊಲೀಸ್ ಇಲಾಖೆಯ ಉಪವಿಭಾಗ ರಾಮದುರ್ಗ ವೃತ್ತಕ್ಕೆ ಒಳಪಟ್ಟಿದೆ. ಎಸ್‌ಎಲ್‌ಒ ಕಚೇರಿ ದೂರದ ಬಾಗಲಕೋಟೆ ಜಿಲ್ಲೆಗೆ ಸೇರ್ಪಡೆಯಾಗಿದೆ.

    ಪರಿಣಾಮ ಸ್ಥಳೀಯರು ಸರ್ಕಾರಿ ಸೌಲಭ್ಯ ಪಡೆಯಲು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಬಸವರಾಜ ಬಂಡಿವಡ್ಡರ, ಜಗದೀಶ ಬೂದಿಹಾಳ, ಎಸ್.ಕೆ.ಕುಲಕರ್ಣಿ, ಎಂ.ಎಂ.ಅಬ್ಬಾಯಿ ಮಾತನಾಡಿದರು. ಬಸವರಾಜ ದುಗ್ಗಾಣಿ, ಲಕ್ಕಪ್ಪ ಕಾರ್ಗಿ, ಶ್ರೀಕಾಂತ ಶಿರಹಟ್ಟಿ, ವಿರೂಪಾಕ್ಷಗೌಡ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts