More

    ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಅನುಕೂಲ

    ದೇವದುರ್ಗ: ಕನ್ನಡದ ನಂಬರ್ ಒನ್ ದಿನಪತ್ರಿಕೆ ವಿಜಯವಾಣಿ ಹೊರತರುತ್ತಿರುವ ವಿದ್ಯಾರ್ಥಿ ಉದ್ಯೋಗ ಮಿತ್ರ ಮಕ್ಕಳಿಗೆ ಉತ್ತಮ ಗೆಳೆಯ ಮಾತ್ರವಲ್ಲ ಕಲಿಕೆಗೆ ಶಿಕ್ಷಕರಂತೆ ಕೆಲಸ ಮಾಡುತ್ತಿದೆ ಎಂದು ಜಾಲಹಳ್ಳಿ ಶ್ರೀಭಾಗ್ಯವಂತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಶರಣು ಹುಣಸಗಿ ಹೇಳಿದರು.

    ತಾಲೂಕಿನ ಜಾಲಹಳ್ಳಿ ಗ್ರಾಮದ ಶ್ರೀಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬೇಸಿಗೆ ತರಬೇತಿ ಶಿಬಿರ ಉದ್ಘಾಸಿ ಶುಕ್ರವಾರ ಮಾತನಾಡಿದರು.

    ಇದನ್ನು ಓದಿ: ಶಾಲಾ ಮಕ್ಕಳಿಗೆ ಬೇಸಿಗೆ ಬಿಸಿಯೂಟ ಮಾರ್ಗಸೂಚಿ ಪ್ರಕಟ: ಊಟ ವಿತರಣೆಗೆ ಏನೆಲ್ಲ ನಿಯಮಗಳನ್ನು ಅನುಸರಿಸಬೇಕು?

    ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ವಿದ್ಯಾರ್ಥಿ ಉದ್ಯೋಗ ಮಿತ್ರ ಸಹಾಯವಾಗಲಿದೆ. ಗಣಿತ, ವಿಜ್ಞಾನ, ಇಂಗ್ಲೀಷ್ ಸೇರಿ ಎಲ್ಲ 6ವಿಷಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿಯಾಗಿದೆ. ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ, ಐಎಎಸ್, ಕೆಎಎಸ್ ಸೇರಿ ಇತರೆ ಪರೀಕ್ಷೆ ಬರೆಯಲು ವಿದ್ಯಾರ್ಥಿಮಿತ್ರ ಅಧ್ಯಯನಕ್ಕೆ ಯೋಗ್ಯ ಸಂಚಿಕೆಯಾಗಿದೆ.

    ಬೇಸಿಗೆ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಬೇಸಿಗೆ ರಜೆ ಕಳೆಯಲು ಹಲವು ಪಠ್ಯೇತರ ಚಟುವಟಿಕೆ ಆಯೋಜಿಸಲಾಗಿದೆ. ಚಿತ್ರಕಲಾ ಸ್ಪರ್ಧೆ, ಪ್ರವಾಸದ ಅನುಭವ, ರಂಗೋಲಿ, ಕಥೆ, ಕವನ, ಪತ್ರ ಬರೆಯುವುದು, ರಜೆಯನ್ನು ಹೇಗೆ ಕಳೆಯುವುದು ಇತರೆ ಸಾಕಷ್ಟು ವಿಷಯ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಬೇಸಿಗೆ ತರಬೇತಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts