More

    ನ್ಯಾಯ ಯಾತ್ರೆಯಿಂದ ಎನ್​ಡಿಎಗೆ ಅನುಕೂಲ

    ಕೋಲಾರ: ಕಾಂಗ್ರೆಸ್​ ನಾಯಕ ರಾಹುಲ್​ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ನ್ಯಾಯಯಾತ್ರೆಯಿಂದ ಎನ್​ಡಿಎಗೆ ಹೆಚ್ಚು ಅನುಕೂಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​ ಅಭಿಪ್ರಾಯಪಟ್ಟರು.

    ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್​ ಬಹು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದೆ. ಆದರೆ ಜನರ ನಿರೀೆಯಂತೆ ಅಭಿವೃದ್ಧಿ ಸಾಧ್ಯವಾಗಿಲ್ಲ. ಆದ್ದರಿಂದ ಜನರು ಈ ಬಾರಿಯೂ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
    ರಾಹುಲ್​ಗಾಂಧಿ ನ್ಯಾಯಯಾತ್ರೆಗೂ ಮುಂಚೆ ಜೋಡೋ ಯಾತ್ರೆ ನಡೆಸಿ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡರು. ಈ ಬಾರಿ ರಾಷ್ಟ್ರಮಟ್ಟದಿಂದಲೇ ಕಾಂಗ್ರೆಸ್​ಮುಕ್ತವಾಗುವುದು ಖಚಿತ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರಿಗೆ ಉಚಿತ ಗ್ಯಾರಂಟಿಗಳ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದರು. ಆದರೆ ಶೇ.100 ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ತಲುಪಿಸುವಲ್ಲಿ ವಿಲರಾಗಿದ್ದಾರೆ. ಜನರಿಗೂ ಇದರ ಅರಿವಾಗಿದ್ದು, ಕಾಂಗ್ರೆಸ್​ಗೆ ಪಾಠ ಕಲಿಸುತ್ತಾರೆ ಎಂದರು.
    ಕೇಂದ್ರ ಗೃಹ ಮಂತ್ರಿ ರಾಜನಾಥ್​ ಸಿಂಗ್​ ನೇತೃತ್ವದಲ್ಲಿ ಪ್ರಣಾಳಿಕೆ ರಚನೆ ಮಾಡಿದ್ದು, ಜನರಿಂದ ಜನರಿಗಾಗಿ, ಜನರಿಗೋಸ್ಕರ ಎಂಬ ಉದ್ದೇಶದಡಿ ವಿಕಸಿತ ಭಾರತ ನಿಮಾರ್ಣಕ್ಕೆ ತಕ್ಕ ಪ್ರಣಾಳಿಕೆ ತಯಾರಿಸಲಾಗಿದೆ. ಬಡವರಿಗಾಗಿ ಐದು ವರ್ಷ ಉಚಿತ ಪಡಿತರ ವಿತರಣೆ, ಆಯುಷ್ಮಾನ್​ ಭಾರತ ಯೋಜನೆ ಸೇರಿ ಹಲವು ಗ್ಯಾರಂಟಿ ಘೋಷಿಸಿದ್ದಾರೆ. ಬಿಜೆಪಿಯ ಪ್ರಣಾಳಿಕೆ ಕಾಂಗ್ರೆಸ್​ ಮಾದರಿಯ ಸುಳ್ಳು ಭರವಸೆ ನೀಡುವುದಿಲ್ಲ ಎಂದರು.
    ರಾಜ್ಯದಿಂದ ಸಾವಿರಾರು ಕೋಟಿ ರೂ. ತೆಲಂಗಾಣಕ್ಕೆ ಹರಿದು ಹೋಗಿದೆ. ಕಳೆದ ಬಿಜೆಪಿ ನೀಡಿದ ಭರವಸೆಗಳಂತೆ ಆರ್ಟಿಕಲ್​ 370 ಜಾರಿ, ರಾಮ ಮಂದಿರ ನಿಮಾರ್ಣ, ಸಿಎಎ ಜಾರಿ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಾಕಿ ಭರವಸೆಗಳನ್ನು ಮುಂದಿನ ಅವಧಿಯಲ್ಲಿ ಅನುಷ್ಠಾನಕ್ಕೆ ತರುವ ಭರವಸೆಯಿದೆ ಎಂದು ತಿಳಿಸಿದರು.
    ಚುನಾವಣಾ ಸಂಚಾಲಕ ಮಾಗೇರಿ ನಾರಾಯಣಸ್ವಾಮಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಓಂಶಕ್ತಿ ಚಲಪತಿ, ಅಪ್ಪಿ, ಎಸ್ಸಿ ಮೊರ್ಚಾ ಅಧ್ಯಕ್ಷ ಹಾರೋಹಳ್ಳಿ ವೆಂಕಟೇಶ್​, ಖಜಾಂಚಿ ಮಹೇಶ್​, ಮಾಧ್ಯಮ ಪ್ರಮುಖ್​ ಪ್ರವಿಣ್​ಗೌಡ, ಸಹ ಪ್ರಮುಖ್​ ಕೆಂಬೋಡಿ ನಾರಾಯಣಸ್ವಾಮಿ, ಮುಖಂಡ ರಾಜೇಶ್​ ಸಿಂಗ್​ ಹಾಜರಿದ್ದರು.

    • 20ಕ್ಕೆ ಮೋದಿ ಪ್ರಚಾರ
      ಎನ್​ಡಿಎ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಏ.20ರಂದು ದೇನಹಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ಕೋಲಾರ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ಪರವಾಗಿಯೂ ಪ್ರಚಾರ ನಡೆಸಲಿದ್ದಾರೆ. ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ, ಜೆಡಿಎಸ್​ ಕಾರ್ಯಕರ್ತರು ಭಾಗವಹಿಸಬೇಕು ಎಂದು ಡಾ.ಕೆ.ಎನ್​.ವೇಣುಗೋಪಾಲ್​ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts