More

    ಶಾಲಾ ಮಕ್ಕಳಿಗೆ ಬೇಸಿಗೆ ಬಿಸಿಯೂಟ ಮಾರ್ಗಸೂಚಿ ಪ್ರಕಟ: ಊಟ ವಿತರಣೆಗೆ ಏನೆಲ್ಲ ನಿಯಮಗಳನ್ನು ಅನುಸರಿಸಬೇಕು?

    ಬೆಂಗಳೂರು ರಾಜ್ಯದ 223 ಬರ ಪೀಡಿತ ತಾಲೂಕುಗಳಲ್ಲಿ ಮಧ್ಯಾಹ್ನ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆಯು ನಿರ್ಧರಿಸಿದೆ. 1-10ನೇ ತರಗತಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಊಟ ಸಿಗಲಿದೆ. ಏ.11ರಿಂದ ಮೇ 28ರವರೆಗೆ ಒಟ್ಟು 41 ದಿನ ಊಟ ನೀಡಲಿದೆ. ಬಿಸಿಯೂಟ ವಿತರಣೆಯು 12.30ರಿಂದ 2ಗಂಟೆಯವರೆಗೆ ಇದ್ದು, ಸರಿಯಾದ ಸಮಯಕ್ಕೆ ಊಟ ವಿತರಿಸಬೇಕು. ಬೇಸಿಗೆ ಉಷ್ಣಾಂಶ ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಶಾಲಾ ಮಕ್ಕಳಿಗೆ ಬೆ.10 ಗಂಟೆಯಿಂದ 11.30ರ ಅವಧಿಯಲ್ಲಿ ವಿತರಿಸಲು ಕ್ರಮವಹಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

    ಶಾಲಾ ಮಕ್ಕಳ ಮಾಹಿತಿ ಅನುಗುಣವಾಗಿ ಬಿಸಿಯೂಟ ಸಿದ್ಧಪಡಿಸಿ ಬಡಿಸಬೇಕು. ಸಿದ್ಧಪಡಿಸಿದ ಅಹಾರವು ವ್ಯರ್ಥವಾಗದಂತೆ ಕ್ರಮವಹಿಸಬೇಕು. ಬಿಸಿಯೂಟ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಮತ್ತು ಪಾಲಕರ ಗಮನಕ್ಕೆ ತಂದು ಬಿಸಿಯೂಟ ಸ್ವೀಕರಿಸುವ ಒಪ್ಪಿಗೆ ಪತ್ರ ಪಡೆಯಬೇಕು. ಬಿಸಿಯೂಟ ಕೇಂದ್ರಗಳನ್ನು ಗುರುತಿಸಿದ ಶಾಲೆಯಲ್ಲಿ 250ಕ್ಕಿಂತ ಹೆಚ್ಚು ಮಕ್ಕಳು ನಿರಂತರವಾಗಿ ಬಿಸಿಯೂಟ ಸ್ವೀಕರಿಸಲು ಹಾಜರಾಗುತ್ತಿದ್ದಲ್ಲಿ, ಅಂತಹ ಕೇಂದ್ರ ಶಾಲೆಗಳಿಗೆ ಮಾತ್ರ ಒಬ್ಬರು ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಬೇಕು. ಶಿಕ್ಷಣಾಧಿಕಾರಿಯನ್ನು ತಾಲ್ಲೂಕು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಮೇಲ್ವಿಚಾರಣೆಗಾಗಿ ಪ್ರತಿನಿತ್ಯ ಎರಡು ಬಾರಿ ಬಿಸಿಯೂಟ ಕೇಂದ್ರ ಶಾಲೆಗೆ ಭೇಟಿ ನೀಡಬೇಕು.

    ಬೇಸಿಗೆ ರಜಾ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಗಳಿಕೆ ರಜೆಯನ್ನು ಪಡೆಯಲು ಅವಕಾವಿರುವುದರಿಂದ ಶಿಕ್ಷಕರನ್ನು ಅಗತ್ಯಕ್ಕೆ ತಕ್ಕಂತೆ ನಿಯೋಜಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆಯು ತನ್ನ ಅಧೀನ ಅಧಿಕಾರಿಗಳಿಗೆ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts