More

    ಏಳೇ ದಿನಕ್ಕೆ ತಿಂಗಳ ಕೋಟಾ ಮೀರಿದ ಮಹಾಮಳೆ; ನಲುಗಿದ ಮುಂಬೈ; ಇನ್ನೆರಡು ದಿನವೂ ಕಾದಿದೆ ಅಪಾಯ..!

    ಮುಂಬೈ: ಕಳೆದೊಂದು ವಾರದಿಂದ ಮಹಾ ಮಳೆಗೆ ಮುಂಬೈ ನಲುಗಿದೆ. ಕರೊನಾ ಸಂಕಷ್ಟದಿಂದಾಗಿ ಜನ ಹಾಗೂ ವಾಹನ ಸಂಚಾರ ನಿಯಂತ್ರಣದಲ್ಲಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

    ಮಳೆಯಿಂದ ಇಷ್ಟೊಂದು ತೊಂದರೆ ಉಂಟಾಗಲು ಕಾರಣ, ಒಂದು ತಿಂಗಳಲ್ಲಿ ಸುರಿಯಬೇಕಿದ್ದಕ್ಕಿಂತಲೂ ಹೆಚ್ಚು ಮಳೆ ಕೇವಲ ಏಳು ದಿನದಲ್ಲಿಯೇ ಬಂದಿದೆ. ಆಗಸ್ಟ್​ 1ರಿಂದ 7ರವರೆಗೆ ಸುರಿದ ಮಳೆಯ ಪ್ರಮಾಣ ಲೆಕ್ಕಹಾಕಿದರೆ ಅಚ್ಚರಿ ಮೂಡದೇ ಇರದು.

    ಆಗಸ್ಟ್​ನಲ್ಲಿ ಮುಂಬೈನಲ್ಲಿ ಸರಾಸರಿ 585.2 ಮಿ.ಮೀ. ಮಳೆ ಸುರಿಯವುದು ವಾಡಿಕೆ. ಆದರೆ, ಕಳೆದ ಒಂದು ವಾರದಲ್ಲಿ ಅಂದರೆ ಆಗಸ್ಟ್​ 1-7ರವರೆಗೆ ಸುರಿದ ಮಳೆಯ ಪ್ರಮಾಣವೇ 597. 6 ಮಿ.ಮೀ. ಆಗಿದೆ. ಇದೇ ಭಾರಿ ಅನಾಹುತಕ್ಕೆ ಕಾರಣವಾಗಿದೆ.

    ಇದನ್ನೂ ಓದಿ; ವಾರದಲ್ಲಿ ಅಮೆರಿಕ, ಬ್ರೆಜಿಲ್​ ಮೀರಿಸಿದ ಭಾರತ; ಹೊಸ ಕರೊನಾ ಕೇಸ್​ಗಳಿಗೆ ಬೀಳುತ್ತಿಲ್ಲ ಕಡಿವಾಣ

    ಮಂಗಳವಾರ ಒಂದೇ ದಿನ 268 ಮಿ.ಮೀ ಮಳೆ ಬಂದಿದೆ. ಗುರುವಾರ 162 ಮಿ.ಮೀ. ಮಳೆಯಾಗಿದೆ. ಒಂದಿಡೀ ತಿಂಗಳ ಸರಾಸರಿಯ ಶೇ.70 ಮಳೆ ಇವೆರಡೇ ದಿನಗಳಲ್ಲಿ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಅರಬ್ಬೀ ಸಮುದ್ರದಲ್ಲಿ ಮೇಲಿಂದ ರಭಸವಾಗಿ ಬೀಸಿದ ನೈರುತ್ಯ ಮಾನ್ಸೂನ್​ ಮಾರುತಗಳು ಹಾಗೂ ದಕ್ಷಿಣ ಗುಜರಾತ್​ನಲ್ಲಿ ಚಂಡಮಾರುತದಿಂದ ಉಂಟಾದ ವಾಯುಭಾರ ಕುಸಿತ ಈ ಮಟ್ಟದ ಮಳೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

    ಇದನ್ನೂ ಓದಿ; ತರಕಾರಿ, ದಿನಸಿ ವ್ಯಾಪಾರಿಗಳು, ಅಂಗಡಿ ಕೆಲಸಗಾರರನ್ನು ಕರೊನಾ ಪರೀಕ್ಷೆಗೊಳಪಡಿಸಿ; ಕೇಂದ್ರದಿಂದಲೇ ಬಂತು ಸೂಚನೆ 

    ಮುಂಬೈಗೆ ಶುಕ್ರವಾರ ಮಳೆ ಕೊಂಚ ಬಿಡುವು ನೀಡಿದಂತಿತ್ತು. ಆದರೆ ಸೋಮವಾರದವರೆಗೂ ಮುಂಬೈ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts