More

    ಸುಶಾಂತ್​ ಸಾವು: ನಮಗೆ ಮೊದಲೇ ಸತ್ಯಾಂಶ ಗೊತ್ತಿತ್ತು ಎಂದ ಮುಂಬೈ ಪೊಲೀಸ್​

    ಮುಂಬೈ: ಸುಶಾಂತ್​ ಕೊಲೆಯಾಗಿಲ್ಲ, ಅವರದ್ದು ಆತ್ಮಹತ್ಯೆ ಎಂದು ಏಮ್ಸ್​ನ ವೈದ್ಯರು ಸಿಬಿಐಗೆ ವರದಿ ನೀಡಿದೆ. ಈ ನಿಟ್ಟಿನಲ್ಲಿ ಮಾತನಾಡಿರುವ ಮುಂಬೈ ಪೊಲೀಸ್​ ಆಯುಕ್ತ ಪರಂಬೀರ್​ ಸಿಂಗ್​, ಈ ವಿಷಯ ತಮಗೆ ಮೊದಲೇ ಗೊತ್ತಿತ್ತು ಮತ್ತು ತಮಗೆ ಗೊತ್ತಿರುವ ವಿಷಯವನ್ನೇ ವೈದ್ಯರು ಖಚಿತಪಡಿಸಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅವ್ರು ಹಾಗಂತಾರೆ, ಇವ್ರು ಹೀಗಂತಾರೆ … ನಿಜ ಯಾವುದು?

    ಸುಶಾಂತ್​ ಸಿಂಗ್​ ರಜಪೂತ್​ ಅವರ ಅಸಹಜ ಸಾವಿನ ಕುರಿತಾಗಿ ಸಾಕಷ್ಟು ಊಹಾಪೋಹಗಳು ಎದ್ದಿತ್ತು. ಈ ಹಿನ್ನೆಲೆಯಲ್ಲಿ, ಅವರ ಪೋಸ್ಟ್​ ಮಾರ್ಟಂ ವರದಿಯನ್ನು ಪರಿಶೀಲಿಸಿರುವ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸಸ್​ (ಏಮ್ಸ್​)ನ ವೈದ್ಯರು, ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಹೇಳಿದ್ದರು. ಇನ್ನು ಸಿಬಿಐ ಸಹ ಸಾಕಷ್ಟು ತನಿಖೆಯ ನಂತರ, ಸುಶಾಂತ್​ ಅವರ ಕೊಲೆಯಾಗಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿತ್ತು.

    ಈ ಕುರಿತು ಖಾಸಗೀ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಪರಂಬೀರ್​ ಸಿಂಗ್​, ‘ನಾವು ಮೊದಲಿನಿಂದಲೂ ಇದೊಂದು ಆತ್ಮಹತ್ಯೆ ಎಂದೇ ಹೇಳಿಕೊಂಡು ಬಂದಿದ್ದೆವು. ಆದರೆ, ಕುಟುಂಬದವರು ಸೇರಿದಂತೆ ಎಲ್ಲರೂ ಇದೊಂದು ಕೊಲೆ ಎಂದು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರು. ಈಗ ವೈದ್ಯರೇ ನಮ್ಮ ಮಾತನ್ನು ಪುಷ್ಠೀಕರಿಸಿದ್ದಾರೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅತ್ಯಂತ ಹಿತವಾದ ಜಾಗ ಯಾವುದು ಗೊತ್ತಾ? ಕಂಗನಾ ಹೇಳ್ತಾರೆ ಕೇಳಿ …

    ಈ ಕುರಿತು ಮತ್ತಷ್ಟು ಮಾತನಾಡಿರುವ ಅವರು, ‘ನಮ್ಮದು ಮೊದಲಿನಿಂದಲೂ ವೃತ್ತಿಪರ ತನಿಖೆಯಾಗಿತ್ತು. ಸುಶಾಂತ್​ ಅವರ ಪೋಸ್ಟ್​ಮಾರ್ಟಂ ಸಹ ಬಹಳ ವೃತ್ತಿಪರವಾಗಿ ನಡೆಸಲಾಗಿತ್ತು. ಸುಪ್ರೀಂ ಕೋರ್ಟ್​​ ನಮಗೆ ವರದಿ ಸಲ್ಲಿಸುವುದಕ್ಕೆ ಹೇಳಿದಾಗ, ನಾವು ಪ್ರಾಮಾಣಿಕವಾದ ವರದಿಯನ್ನು ಕೊಟ್ಟಿದ್ದೆವು. ನ್ಯಾಯಾಲಯಕ್ಕೆ ನಮ್ಮ ವರದಿಯಲ್ಲಿ ಯಾವ ಲೋಪ-ದೋಷಗಳು ಕಂಡುಬಂದಿರಲಿಲ್ಲ. ಆದರೆ, ಸುದ್ದಿವಾಹಿನಿಗಳು ಮಾತ್ರ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಸಾಬೀತು ಮಾಡುವುದಕ್ಕೆ ಮುಂದಾದವು. ಇದೀಗ ವೈದ್ಯರ ತಂಡವೇ, ಇದು ಆತ್ಮಹತ್ಯೆ ಎಂದು ಹೇಳುವ ಮೂಲಕ ನ್ಯಾಯವನ್ನು ಎತ್ತಿಹಿಡಿದಿದೆ’ ಎಂದು ಹೇಳಿದ್ದಾರೆ.

    ನನ್ನ ಚಿತ್ರದಲ್ಲಿನ ಸೆಕ್ಸ್ ದೃಶ್ಯಗಳಿಂದ ರೇಪ್​ಗಳಾಗುತ್ತಿಲ್ಲ; ನೆಟ್ಟಿಗನಿಗೆ ಸ್ವರಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts