More

    2023ರಲ್ಲಿ ಶೇಕಡಾ 200 ಲಾಭ ತಂದುಕೊಟ್ಟ ಮಲ್ಟಿಬ್ಯಾಗರ್ ಸ್ಟಾಕ್: ಮತ್ತೆ ಡಿವಿಡೆಂಡ್​ ಘೋಷಿಸಲು ಸಜ್ಜು

    ಮುಂಬೈ: ಈಗಷ್ಟೇ ಮುಕ್ತಾಯಗೊಂಡ 2023ನೇ ಇಸ್ವಿಯಲ್ಲಿ ರೂ 45 ಡಿವಿಡೆಂಡ್ (ಲಾಭಾಂಶ) ಮತ್ತು ಶೇಕಡಾ 200ರಷ್ಟು ಲಾಭವನ್ನು ತಂದುಕೊಟ್ಟಿರುವ ಈ ಮಲ್ಟಿಬ್ಯಾಗರ್ ಸ್ಟಾಕ್ ಈಗ ಸಾರ್ವಕಾಲಿಕ ಎತ್ತರವನ್ನು ತಲುಪಿದೆ, ಅಲ್ಲದೆ, ಜನವರಿ 15 ರಂದು ಮತ್ತೆ ಲಾಭಾಂಶವನ್ನು ಘೋಷಿಸಲು ಸಜ್ಜಾಗಿದೆ.

    ಏಂಜೆಲ್ ಒನ್ ಲಿಮಿಟೆಡ್ ಕಂಪನಿಯು ಸ್ಟಾಕ್ ಬ್ರೋಕರ್ ಸಂಸ್ಥೆಯಾಗಿದೆ. ಇದು ತನ್ನ ಷೇರುದಾರರಿಗೆ ಲಾಭಾಂಶವನ್ನು ಘೋಷಿಸುವ ಸಾಧ್ಯತೆಯಿದೆ. ಸೋಮವಾರ ಈ ಸ್ಟಾಕ್ ರೂ 3,760 ಬೆಲೆಯಲ್ಇ ಆರಂಭವಾಗಿ ರೂ 3,752.50 ಕ್ಕೆ ತಲುಪಿತು. ಇದು ದಿನದ ವಹಿವಾಟಿನ ನಡುವೆ ಗರಿಷ್ಠ ಮತ್ತು ಸಾರ್ವಕಾಲಿಕ ಗರಿಷ್ಠ 3,884.15 ರೂಪಾಯಿ ತಲುಪಿತ್ತು.

    ಷೇರುದಾರರಿಗೆ ಡಿವಿಡೆಂಡ್ ಪಾವತಿಯ ಪ್ರಸ್ತಾಪವನ್ನು ಪರಿಗಣಿಸಲು ಮತ್ತು ಅನುಮೋದಿಸಲು ಇದರ ಮಂಡಳಿಯು ಮುಂದಿನ ವಾರ ಸಭೆ ಸೇರಲಿದೆ. ಈ ಸಭೆಯಲ್ಲಿ ಡಿವಿಡೆಂಡ್​ ಘೋಷಿಸಲು ನಿರ್ಧಾರ ಕೈಗೊಂಡರೆ, ಇದು ಪ್ರಸಕ್ತ ಹಣಕಾಸು ವರ್ಷವೊಂದರಲ್ಲಿಯೇ ಕಂಪನಿಯ ಮೂರನೇ ಮಧ್ಯಂತರ ಲಾಭಾಂಶವಾಗುತ್ತದೆ.

    ಬಿಎಸ್​ಇ ವಿಶ್ಲೇಷಣೆಯ ಪ್ರಕಾರ, 2023 ರಲ್ಲಿ ಏಂಜೆಲ್ ಒನ್ ಐದು ಸಂದರ್ಭಗಳಲ್ಲಿ ಲಾಭಾಂಶವನ್ನು ಪಾವತಿಸಿದೆ. ಈ ಮೊತ್ತ ಒಟ್ಟು 45.15 ರೂ. ಆಗುತ್ತದೆ. ಸಂಸ್ಥೆಯು ಅಕ್ಟೋಬರ್‌ನಲ್ಲಿ ರೂ 12.70, ಜುಲೈನಲ್ಲಿ ರೂ 9.25, ಜೂನ್‌ನಲ್ಲಿ ರೂ 4 ಮತ್ತು ಮಾರ್ಚ್ ಮತ್ತು ಜನವರಿಯಲ್ಲಿ ತಲಾ ರೂ 9.60 ಲಾಭಾಂಶ ಪಾವತಿಸಿದೆ.

    2022 ರಲ್ಲಿ, ಕಂಪನಿಯು ಅಕ್ಟೋಬರ್‌ನಲ್ಲಿ ರೂ 9, ಜುಲೈನಲ್ಲಿ ರೂ 7.65, ಮೇನಲ್ಲಿ ರೂ 2.25, ಏಪ್ರಿಲ್ ಮತ್ತು ಜನವರಿಯಲ್ಲಿ ತಲಾ ರೂ 7 ಲಾಭಾಂಶವಾಗಿ ಪಾವತಿಸಿದೆ. 2021 ರಲ್ಲಿ, ಇದು ಪ್ರತಿ ಸ್ಟಾಕ್‌ಗೆ ಲಾಭಾಂಶವಾಗಿ 18.35 ರೂ. ನೀಡಿತ್ತು.

    ಬಿಎಸ್‌ಇ ವಿಶ್ಲೇಷಣೆಯ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಏಂಜೆಲ್ ಒನ್ ಷೇರುಗಳು ಶೇಕಡಾ 30 ರಷ್ಟು ಏರಿವೆ. ಈ ಸ್ಟಾಕ್ ಕೇವಲ ಮೂರು ತಿಂಗಳಲ್ಲಿ ಹೂಡಿಕೆದಾರರ ಹಣವನ್ನು ಬಹುತೇಕವಾಗಿ ದ್ವಿಗುಣಗೊಳಿಸಿದೆ, ಅಂದರೆ ಶೇಕಡಾ 95ರಷ್ಟು ಹೆಚ್ಚಳವಾಗಿದೆ. ಕಳೆದ ಆರು ತಿಂಗಳು ಮತ್ತು ಒಂದು ವರ್ಷದಲ್ಲಿ, ಷೇರು ಹೂಡಿಕೆದಾರರ ಹಣವನ್ನು ಕ್ರಮವಾಗಿ 125 ಪ್ರತಿಶತ ಮತ್ತು 201 ಪ್ರತಿಶತದಷ್ಟು ಹೆಚ್ಚಿಸಿದೆ.

    ಜನವರಿ 8ರ ಪ್ರಕಾರ, ಏಂಜೆಲ್ ಒನ್ ಬಂಡವಾಳವು 32,263.42 ಕೋಟಿ ರೂ. ತಲುಪಿದೆ.

    ಮಲ್ಟಿಬ್ಯಾಗರ್​ ಸ್ಟಾಕ್​ ಎಂದರೇನು?: ಹೂಡಿಕೆಗಿಂತ ಹಲವು ಪಟ್ಟು ಆದಾಯ ನೀಡುವ ಷೇರುಗಳನ್ನು ಮಲ್ಟಿಬ್ಯಾಗರ್​ ಎಂದು ಕರೆಯುತ್ತಾರೆ. ಉದಾಹರಣೆಗೆ ಒಂದು ಷೇರಿನ ಬೆಲೆಯು 100 ರೂಪಾಯಿಯಿಂದ 500 ರೂಪಾಯಿಗೆ ಏರಿದರೆ, ಅದು ಹೂಡಿಕೆಗಿಂತ ಐದು ಪಟ್ಟು ಹೆಚ್ಚಳವಾಗುತ್ತದೆ. ಇಂತಹ ಷೇರುಗಳನ್ನು ಮಲ್ಟಿಬ್ಯಾಗರ್​ ಸ್ಟಾಕ್​ ಎಂದು ಗುರುತಿಸುತ್ತಾರೆ.

    3 ವರ್ಷಗಳಲ್ಲಿ ಶೇ. 4,000 ಆದಾಯ ಗಳಿಸಿದ ಷೇರು: ಈಗ ಎರಡೇ ದಿನಗಳಲ್ಲಿ ಶೇಕಡಾ 10 ಹೆಚ್ಚಳ

    ಏಕನಾಥ್ ಶಿಂಧೆ ಬಣವೇ ನೈಜ ಶಿವಸೇನಾ: ಮಹಾರಾಷ್ಟ್ರ ಸ್ಪೀಕರ್ ಮಹಾ ತೀರ್ಪಿಗೆ ಆಧಾರಗಳೇನು?

    ಮೇಲ್ಛಾವಣಿ ಸೌರ ವಿದ್ಯುತ್ ಸಬ್ಸಿಡಿ ಹೆಚ್ಚಳ ; ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ ಲಾಭದಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts