More

    ಮತ್ತೆ ಮುಖ್ಯಮಂತ್ರಿ; ಹೊಸ ನಾಟಕದ ಜತೆ ಬಂದ ಚಂದ್ರು..

    ಬೆಂಗಳೂರು: ‘ಮುಖ್ಯಮಂತ್ರಿ’ ನಾಟಕದ ಮೂಲಕ ಮನೆಮಾತಾಗುವುದರ ಜತೆಗೆ ಕರ್ನಾಟಕದ ಕಾಯಂ ಮುಖ್ಯಮಂತ್ರಿ ಎಂದು ಹೆಸರಾದವರು ಚಂದ್ರು. ಇದುವರೆಗೂ ‘ಮುಖ್ಯಮಂತ್ರಿ’ ನಾಟಕದ 734 ಪ್ರದರ್ಶನಗಳಾಗಿದ್ದು, ಇದೇ ಶುಕ್ರವಾರ (ಏಪ್ರಿಲ್ 02) 735ನೇ ಪ್ರದರ್ಶನವಾಗಲಿದೆ. ಅದಾಗಿ ಎರಡನೇ ದಿನಕ್ಕೆ ‘ಮತ್ತೆ ಮುಖ್ಯಮಂತ್ರಿ’ಯಾಗಲಿದ್ದಾರೆ ಚಂದ್ರು.

    ‘ಮತ್ತೆ ಮುಖ್ಯಮಂತ್ರಿ’ ಎನ್ನುವುದು ಚಂದ್ರು ಅವರ ಹೊಸ ನಾಟಕವಾಗಿದ್ದು, ಇದೇ ಮೊದಲ ಬಾರಿಗೆ ರಂಗದ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಈ ನಾಟಕದಲ್ಲೂ ಚಂದ್ರು ಅವರು ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸುತ್ತಿದ್ದು, ಕಲಾ ಗಂಗೋತ್ರಿ ರಂಗತಂಡದ ಸುವರ್ಣರಂಗ ಹಬ್ಬದ ಪ್ರಯುಕ್ತ ಈ ನಾಟಕ ಏಪ್ರಿಲ್ 4ರ ಭಾನುವಾರದಂದು ಮೊದಲ ಪ್ರದರ್ಶನ ಕಾಣಲಿದೆ. ‘ಮತ್ತೆ ಮುಖ್ಯಮಂತ್ರಿ’ ನಾಟಕವನ್ನು ಡಾ.ಕೆ.ವೈ. ನಾರಾಯಣಸ್ವಾಮಿ ರಚಿಸಿದ್ದು, ಹಿರಿಯ ರಂಗಕರ್ವಿು ಡಾ.ಬಿ.ವಿ. ರಾಜಾರಾಂ ನಿರ್ದೇಶನ ಮಾಡುತ್ತಿದ್ದಾರೆ.

    ಹೊಸ ನಾಟಕದ ಕುರಿತು ಮಾತನಾಡುವ ಮುಖ್ಯಮಂತ್ರಿ ಚಂದ್ರು, ‘ಆ ನಾಟಕವೇ ಬೇರೆ, ಈ ನಾಟಕವೇ ಬೇರೆ. ‘ಮುಖ್ಯಮಂತ್ರಿ’ ನಾಟಕವು ಆ ಕಾಲಘಟ್ಟದ ನೈತಿಕತೆ ಬಗ್ಗೆ ಮಾತನಾಡಿದರೆ, ಈ ನಾಟಕವು ಇಂದಿನ ವ್ಯವಸ್ಥೆ ಬಗ್ಗೆ ಮಾತನಾಡಲಿದೆ. ಈ ತರಹದ ಸರ್ಕಾರ, ವ್ಯವಸ್ಥೆ ಮತ್ತು ವ್ಯಕ್ತಿತ್ವ ಬೇಕಾ ಎಂಬ ಪ್ರಶ್ನೆಗಳನ್ನು ಈ ನಾಟಕ ಎತ್ತುತ್ತದೆ. ಇದೊಂದು ರಾಜಕೀಯ ಆತ್ಮಾವಲೋಕನದ ನಾಟಕವಾಗಿದ್ದು, ಮೊದಲ ಬಾರಿಗೆ ನಾರಾಯಣಸ್ವಾಮಿ ಅವರು ರಾಜಕೀಯ ನಾಟಕವೊಂದನ್ನು ರಚಿಸಿದ್ದಾರೆ. ‘ಮುಖ್ಯಮಂತ್ರಿ’ ನಾಟಕ ಪ್ರಾರಂಭವಾಗಿ 41 ವರ್ಷಗಳಾಗಿವೆ. ಈ ಸಮಯದಲ್ಲಿ ಬದಲಾದ ರಾಜಕೀಯ ವ್ಯವಸ್ಥೆಯನ್ನು ನಾವು ಈ ನಾಟಕದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ ಚಂದ್ರು. ಭಾನುವಾರ ಸಂಜೆ 7ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕದ ಮೊದಲ ಪ್ರದರ್ಶನ ನಡೆಯಲಿದೆ.

    ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಮದುವೆ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಮಹತ್ವದ ಫೋಟೋಗಳು ವೈರಲ್​

    ಬೆಣ್ಣೆ ಕಾಫಿ ಕುಡಿದಿದ್ದೀರಾ?; ನೋಡಿ.. ಇಲ್ಲಿ ಇಪ್ಪತ್ತು ವರ್ಷಗಳಿಂದ ಸಿಗುತ್ತಿದೆ ‘ಬಟರ್ ಕಾಫಿ’..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts