More

    ಪರಿಣಾಮಕಾರಿ ಬೋಧನೆಗೆ ರಂಗ ಕಲೆ ಸಹಕಾರಿ

    ಚಿತ್ರದುರ್ಗ: ಸಂಗೀತ,ನಾಟಕ,ನೃತ್ಯ ಮತ್ತಿತರ ಕ್ಷೇತ್ರಗಳಲ್ಲಿ ರಂಗಭೂಮಿ ಹಾಸುಹೊಕ್ಕಾಗಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್. ಸಂದೀಪ್ ಹೇಳಿದರು.
    ರಂಗಸೌರಭ ಕಲಾ ಸಂಘದಿಂದ ನಗರದ ಹೇಮಾವತಿ ಕುವೆಂಪು ಶಿಕ್ಷಣ ಮಹಾ ವಿದ್ಯಾಲಯದಲ್ಲಿ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿ ಗಳಿಗಾಗಿ ಬುಧವಾರ ಏರ್ಪಡಿಸಿದ್ದ ಶಿಕ್ಷಣದಲ್ಲಿ ರಂಗಭೂಮಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ರಂಗಕಲೆ ಪರಿ ಣಾಮಕಾರಿ ಬೋಧನೆ ಮತ್ತು ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಜಿ.ದಾಸಯ್ಯ ಮಾತನಾಡಿ ಪ್ರಶಿಕ್ಷಣಾರ್ಥಿಗಳು ಚಟುವಟಿಕೆಯಿಂದಿರಲು ರಂಗಭೂಮಿ ಸಹ ಕಾರಿಯಾಗಿದೆ ಎಂದರು. ಉಪನ್ಯಾಸಕರಾದ ಡಾ.ಪಿ.ರಾಧಮ್ಮ,ಡಾ.ಎಂ.ಎಸ್.ಲಕ್ಷ್ಮೀದೇವಿ, ಕೆ.ತ್ರಿವೇಣಿ,ಎಂ.ಉಷಾಕಿರಣ,ಟಿ.ತಿಪ್ಪೇರು ದ್ರಯ್ಯ ಹಾಗೂ ಬಿ.ಪಾತಲಿಂಗಪ್ಪ ಇದ್ದರು.
    ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ನಿರ್ದೇಶನದಲ್ಲಿ ಪ್ರಶಿಕ್ಷಣಾರ್ಥಿಗಳು ಮೂಢ ನಂಬಿಕೆ,ಬಾಲ್ಯವಿವಾಹ,ಮತದಾನ,ವರದಕ್ಷಿಣೆ, ಬಾಲಕಾರ್ಮಿಕ,ಅನಕ್ಷರತೆ, ಭ್ರಷ್ಟಾಚಾರ ಹಾಗೂ ಜಾತಿಪದ್ಧತಿ ನಾಟಕಗಳನ್ನು ಪ್ರದರ್ಶಿಸಿದರು. ಐಶ್ವರ್ಯ,ಗೀತಾಂಜಲಿ,ಶಿವಮ್ಮ ಪ್ರಾರ್ಥಿ ಸಿದರು. ಚಿತ್ರಾ ಸ್ವಾಗತಿಸಿ,ಸಂತೋಕುಮಾರಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts