More

    ಬಾಕ್ಸಿಂಗ್​ ದಿಗ್ಗಜ ಮೊಹಮದ್​ ಅಲಿ ಅವರ ಸ್ಮರಣಾರ್ಥ ಅಭಿಮಾನಿಗಳಿಂದ ಸಿದ್ಧವಾಗಿದೆ ಕಿರುಚಿತ್ರ

    ವಾಷಿಂಗ್ಟನ್​: ವೃತ್ತಿಪರ ಬಾಕ್ಸಿಂಗ್​ ದಿಗ್ಗಜ ಮೊಹಮದ್​ ಅಲಿ, 5ನೇ ವರ್ಷದ ಸ್ಮರಣಾರ್ಥ ಕಿರುಚಿತ್ರ ನಿರ್ಮಿಸಲಾಗಿದೆ. ಮೊಹಮದ್​ ಅಲಿ 2016ರ ಜೂನ್​ 3ರಂದು ನಿಧನರಾಗಿದ್ದರು. ನಿಧನರಾದ ಒಂದು ವಾರದ ಬಳಿಕ ಅಂತ್ಯಕ್ರಿಯೆ ಮಾಡಲಾಗಿತ್ತು. ಸಾರ್ವಕಾಲಿಕ ಶ್ರೇಷ್ಠ ಬಾಕ್ಸರ್​ ಎನಿಸಿಕೊಂಡಿದ್ದ ಮೊಹಮದ್​ ಅಲಿ ಹೆಸರನ್ನು ಮತ್ತಷ್ಟು ಚಿರಸ್ಥಾಯಿ ಮಾಡುವ ನಿಟ್ಟಿನಲ್ಲಿ ಸಿಟಿ ಆಫ್​ ಅಲಿ ಹೆಸರಿನಲ್ಲಿ ಕಿರುಚಿತ್ರ ಹೊರತರಲಾಗಿದೆ. ಅಂದಾಜು 90 ನಿಮಿಷಗಳ ಈ ಕಿರುಚಿತ್ರದಲ್ಲಿ ಅಲಿ ಅವರ ತವರು, ಅವರ ಕಡೇ ದಿನಗಳ ಕುರಿತು ಚಿತ್ರಿಸಲಾಗಿದೆ. ಅವರ ಅಂತ್ಯಕ್ರಿಯೆ ವೇಳೆ ನೆರೆದಿದ್ದ ಜನಸಾಗರ, ಮೆರವಣಿಗೆಯುದ್ದಕ್ಕೂ ನೆರೆದಿದ್ದ ಜನಸ್ತೋಮ, ಅಭಿಮಾನಿಗಳು ಶವದ ಪೆಟ್ಟಿಗೆ ಮೇಲೆ ಹೂವಿನ ಮಳೆಯನ್ನೇ ಹರಿಸಿದ್ದರು.

    ಇದನ್ನೂ ಓದಿ: ಈ ಪಾಕ್​ ಕ್ರಿಕೆಟಿಗನ ಪತ್ನಿ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಭಿಮಾನಿ!

    ಅಲಿ ಅವರ ತವರು ಲೂಯಿಸ್​ವಿಲ್ಲೆ ಹಾಗೂ ಅಲ್ಲಿನ ಜನರನ್ನು ನೋಡಬೇಕೆಂಬ ತುಡಿತ ಅವರನ್ನು ಸದಾ ಕಾಡುತ್ತಿತ್ತು. ಲೊಯಿಸ್​ವಿಲ್ಲೆಯಲ್ಲೇ ಅವರ ವೃತ್ತಿಪರ ಬಾಕ್ಸಿಂಗ್​ ಆರಂಭಗೊಂಡಿದ್ದು, ಹೀಗಾಗಿ ಈ ನೆಲದ ಮೇಲೆ ಅವರಿಗೆ ವಿಶೇಷ ಅಭಿಮಾನವಿತ್ತು ಎಂದು ಅಲಿ ಪುತ್ರಿ ರಶೀದಾ ಅಲಿ ತಿಳಿಸಿದ್ದಾರೆ. ಅದೇ ರೀತಿ ಲೊಯಿಸ್​ವಿಲ್ಲೆಯ ಜನರು ಅಷ್ಟೇ ಪ್ರೀತಿ ತೋರುತ್ತಿದ್ದರು ಎಂದಿದ್ದಾರೆ.

    ಇದನ್ನೂ ಓದಿ:ಸೋಷಿಯಲ್​ ಮೀಡಿಯಾದಲ್ಲಿ ಆರ್​. ಅಶ್ವಿನ್​-ಸಂಜಯ್​ ಮಂಜ್ರೇಕರ್​ ನಡುವೆ ವಾರ್​!

    ನನ್ನ ತಂದೆ ಯಾವಾಗಲೂ ಪ್ರೀತಿ, ವಿಶ್ವಾಸವನ್ನು ತುಂಬಾ ನಂಬುತ್ತಿದ್ದರು. ಹಾಗೆಯೇ ಜನಾಂಗೀಯ ನಿಂದನೆ ವಿರುದ್ಧ ಧ್ವನಿ ಎತ್ತಿದ್ದರು ಎಂದು ರಶೀದಾ ಹೇಳಿದ್ದಾರೆ. ಲೊಯಿಸ್​ವಿಲ್ಲೆ ಜತೆಗೆ ಮೊಹಮದ್​ ಅಲಿ ಭಾವನಾತ್ಮಕ ಸಂಬಂಧ ಹೊಂದಿದ್ದರು. ಅವರೊಬ್ಬ ನಿಜವಾದ ಮಾಸ್ಟರ್​ ಎಂದು ಸ್ಥಳಿಯ ರಾಜಕಾರಣಿ ಚಾರ್ಲ್ಸ್​ ಬೂಕರ್​ ತಿಳಿಸಿದ್ದಾರೆ.

    ಕೆಎಲ್​ ರಾಹುಲ್​ ಜತೆಗೆ ಗೆಳತಿ ಅಥಿಯಾ ಶೆಟ್ಟಿ ಕೂಡ ಸೌಥಾಂಪ್ಟನ್​ನಲ್ಲಿ ಕ್ವಾರಂಟೈನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts