More

    ಕಾಮನ್ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನ ಐಒಎ ವಿರುದ್ಧ ಸಿಟ್ಟಾದ ಬಾಕ್ಸರ್ ಲವ್ಲಿನಾ

    ಬರ್ಮಿಂಗ್‌ಹ್ಯಾಂ: ಕಾಮನ್ವೆಲ್ತ್ ಗೇಮ್ಸ್ ಸಿದ್ಧತೆಗೆ ಅವಕಾಶ ಮಾಡಿಕೊಡದೆ, ಕೋಚ್‌ಗಳಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲೊವ್ಲಿನಾ ಬೊರ್ಗೊಹೈನ್ ಸೋಮವಾರ ಆರೋಪಿಸಿದ್ದಾರೆ. ಐರ್ಲೆಂಡ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಭಾರತದ ಬಾಕ್ಸಿಂಗ್ ತಂಡ ಭಾನುವಾರ ರಾತ್ರಿ ನೇರವಾಗಿ ಬರ್ಮಿಂಗ್‌ಹ್ಯಾಂನ ಕ್ರೀಡಾಗ್ರಾಮಕ್ಕೆ ಆಗಮಿಸಿತು. ಈ ವೇಳೆ ಲವ್ಲಿನಾ ಅವರ ವೈಯಕ್ತಿಕ ಕೋಚ್ ಸಂಧ್ಯಾ ಗುರುಂಗ್ ಮಾನ್ಯತೆ ಹೊಂದಿರದ ಕಾರಣ ಕ್ರೀಡಾಗ್ರಾಮಕ್ಕೆ ಪ್ರವೇಶ ನಿರಾಕರಿಸಲಾಯಿತು. ಲವ್ಲಿನಾ ಅವರ ಮತ್ತೋರ್ವ ವೈಯಕ್ತಿಕ ಕೋಚ್ ಅಮಿ ಕೊಲೇಕರ್ ಅವರ ಹೆಸರನ್ನು ಭಾರತ ತಂಡದಿಂದ ಕೈಬಿಡಲಾಗಿದೆ. ಈ ಕುರಿತು ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿರುವ ಭಾರತದ ಸ್ಟಾರ್ ಬಾಕ್ಸರ್ ಲವ್ಲಿನಾ, ‘ನಿರಂತರವಾಗಿ ನನ್ನ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.

    ಒಲಿಂಪಿಕ್‌ನಲ್ಲಿ ಪದಕ ಜಯಿಸಲು ನನಗೆ ಸಹಕರಿಸಿದ ಕೋಚ್‌ಗಳಿಗೆ ಕ್ರೀಡಾಗ್ರಾಮಕ್ಕೆ ಪ್ರವೇಶವಿಲ್ಲ. ಇದು ನನ್ನ ತರಬೇತಿಗೆ ಸಾಕಷ್ಟು ತೊಂದರೆ ಉಂಟಾಗಿದೆ’ ಎಂದು ಲವ್ಲಿನಾ ಸುದೀರ್ಘವಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ‘ನನ್ನ ಕೋಚ್‌ಗಳ ಪೈಕಿ ಸಂಧ್ಯಾ ಗುರುಂಗ್‌ಜೀ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರನ್ನು ತಂಡಕ್ಕೆ ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದೆ, ಆದರೂ ನನ್ನ ಮನವಿಯನ್ನು ಪರಿಗಣಿಸದೆ, ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಸಂಧ್ಯಾ ಗುರುಂಗ್, ಕ್ರೀಡಾಗ್ರಾಮದ ಹೊರಗೆ ಉಳಿದುಕೊಂಡಿದ್ದು, ನನ್ನ ಸ್ಪರ್ಧೆ ಆರಂಭಕ್ಕೆ ಕೇವಲ 8 ದಿನಗಳಷ್ಟೇ ಬಾಕಿ ಉಳಿದಿದ್ದು, ಇದರಿಂದ ನನ್ನ ತರಬೇತಿ ವೇಳಾಪಟ್ಟಿ ಸಾಕಷ್ಟು ಏರಿಳಿತವಾಗಿದೆ ಎಂದಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ಗೂ ಮುನ್ನ ಇದೇ ರೀತಿ ಮಾನಸಿಕ ಹಿಂಸೆ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.

    * ಕ್ರೀಡಾ ಸಚಿವಾಲಯ ಆಗ್ರಹ
    ಈ ಕುರಿತು ಮಧ್ಯಪ್ರವೇಶಿಸಿರುವ ಕೇಂದ್ರ ಕ್ರೀಡಾ ಸಚಿವಾಲಯ, ಲವ್ಲಿನಾ ಕೋಚ್ ಕ್ರೀಡಾಗ್ರಾಮ ಪ್ರವೇಶಿಸಲು ಮಾನ್ಯತೆ ವ್ಯವಸ್ಥೆ ಮಾಡುವಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ (ಐಒಎ) ಮನವಿ ಮಾಡಿಕೊಂಡಿದೆ. ಲವ್ಲಿನಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಭಾರತೀಯ ಬಾಕ್ಸಿಂಗ್ ೆಡರೇಷನ್ (ಬಿಎ್ಐ), ಮಾನ್ಯತೆ ವ್ಯವಸ್ಥೆಯನ್ನು ಸಂಪೂರ್ಣ ಐಒಎ ಮಾಡುತ್ತಿದ್ದು, ಈ ಕುರಿತು ಅವರ ಗಮನಕ್ಕೆ ತಂದಿದ್ದು, ಶೀಘ್ರವೇ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದು ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts