More

    ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಉಭಯ ಸದನಗಳ ಸಂಸದರು ಖುದ್ದು ಹಾಜರಿರಬೇಕು?

    ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳ ಸಂಸದರು ಖುದ್ದು ಕಲಾಪದಲ್ಲಿ ಹಾಜರರಿಬೇಕು.ಎಲ್ಲರೂ ಅವರವರ ಮೀಸಲು ಸ್ಥಾನದಲ್ಲಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾಪದಲ್ಲಿ ಭಾಗವಹಿಸಬೇಕು. ಇದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಲಲಾಗುತ್ತಿದೆ ಎಂದು ಉಭಯ ಸದನಗಳ ಸೆಕ್ರೆಟರಿ ಜನರಲ್ಸ್​ ಮಾಹಿತಿ ನೀಡಿದ್ದಾರೆ.

    ಲೋಕಸಭೆ ಮತ್ತು ರಾಜ್ಯಸಭೆಗಳ ಉನ್ನತ ಅಧಿಕಾರಿಗಳೂ ಅವರವರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯ ಸಭಾ ಚೇರ್​ಮನ್​ ಎಂ.ವೆಂಕಯ್ಯ ನಾಯ್ಡು ಅವರು ಮುಂಗಾರು ಅಧಿವೇಶನದ ತಯಾರಿ ಕುರಿತು ಚರ್ಚೆ ನಡೆಸಿದರು.

    ಇದನ್ನೂ ಓದಿ:ಇನ್ನು ಮುಂದೆ ಶನಿವಾರ, ಭಾನುವಾರ ಎರಡೂ ದಿನ ಲಾಕ್‌ಡೌನ್: ಗೋವಿಂದ ಕಾರಜೋಳ

    ಮೂಲಗಳ ಮಾಹಿತಿ ಪ್ರಕಾರ, ಎರಡೂ ಸದನಗಳಲ್ಲಿ ಏಕಕಾಲದಲ್ಲಿ ಕಲಾಪ ನಡೆಸುವುದಕ್ಕೆ ಅವಕಾಶ ನೋಡಿಕೊಂಡು ಸಿದ್ಧತೆ ಮಾಡಲಾಗುತ್ತಿದೆ. ಮಾಧ್ಯಮ ವರದಿಗಳಲ್ಲಿ ಪರ್ಯಾಯ ದಿನಗಳಲ್ಲಿ ಕಲಾಪ ನಡೆಯುತ್ತದೆ ಎಂಬ ಮಾಹಿತಿ ಪ್ರಕಟವಾಗಿದೆಯಾದರೂ ಅದು ಸತ್ಯಕ್ಕೆ ದೂರ ಇರುವಂತೆ ಇದೆ. ಸಂಸದರಿಗೆ ಸಂಸತ್​ ಸಂಕೀರ್ಣದ ಬೇರೆ ಬೇರೆ ಸ್ಥಳಗಳಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ.ಲಾಬಿಗಳಲ್ಲಿ, ಗ್ಯಾಲರಿಗಳಲ್ಲಿ, ಸೆಂಟ್ರಲ್ ಹಾಲ್​, ಬಾಲಯೋಗಿ ಆಡಿಟೋರಿಯಂಗಳಲ್ಲಿ ಸಂಸದರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ.

    ಮುಂಗಾರು ಅಧಿವೇಶನದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದಾಗ್ಯೂ, ಅಧಿವೇಶನ ಖಚಿತವಾಗಿ ಸೆಪ್ಟೆಂಬರ್ 22ಕ್ಕೆ ಮುಂಚಿತವಾಗಿಯೇ ನಡೆಯಲಿದೆ. ಯಾಕೆಂದರೆ, ನಿಯಮಾವಳಿ ಪ್ರಕಾರ ಒಂದು ಅಧಿವೇಶನಕ್ಕೂ ಇನ್ನೊಂದು ಅಧಿವೇಶನಕ್ಕೂ ನಡುವೆ ಆರು ತಿಂಗಳಿಗಿಂತ ಹೆಚ್ಚಿನ ಅಂತರ ಇರಬಾರದು.ಏಪ್ರಿಲ್ 3ರ ತನಕ ನಡೆಯಬೇಕಾಗಿದ್ದ ಕೇಂದ್ರ ಮುಂಗಡ ಪತ್ರ ಅಧಿವೇಶನ ಮಾರ್ಚ್​ 23ಕ್ಕೆ ಅರ್ಧಕ್ಕೇ ಮೊಟಕುಗೊಂಡಿತ್ತು. (ಏಜೆನ್ಸೀಸ್)

    ಟ್ರ್ಯಾಕ್ ಮೈ ವೈಫ್​’ಸ್ ಫೋನ್ ಅಂತ ಗೂಗಲ್ ಸರ್ಚ್ ಮಾಡ್ತಿದ್ದೀರಾ?: ನಿಮಗೊಂದು ಶಾಕಿಂಗ್​ ಸುದ್ದಿ ಇಲ್ಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts