More

    AI ಕ್ಯಾಮೆರಾ ತಾನೇ ಅದೇನು ವರ್ಕ್​ ಆಗುತ್ತಾ ಅಂತ ಅಪ್ಪಿತಪ್ಪಿ ಪರೀಕ್ಷೆ ಮಾಡ್ಬೇಡಿ! ಮಾಡಿದ್ರೆ ಕಾದಿದೆ ಆಘಾತ

    ಕೋಯಿಕ್ಕೋಡ್​: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಸಂಚಾರಿ ಪೊಲೀಸರು ಇದೀಗ ತಂತ್ರಜ್ಞಾನದ ಮೊರೆ ಹೋಗಿರುವುದು ನಿಮಗೆಲ್ಲ ಗೊತ್ತೇ ಇದೆ. ಮೊದಲೆಲ್ಲ ಟ್ರಾಫಿಕ್​ ಪೊಲೀಸರ ಕಣ್ತಪ್ಪಿಸಿ, ಅವರಿಲ್ಲದಿರುವ ಏರಿಯಾ ನೋಡಿಕೊಂಡು ವಾಹನ ಸವಾರರು ಓಡಾಡುತ್ತಿದ್ದರು. ಆದರೆ, ಈಗ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡರೂ ಮೂರನೇ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

    ಆ ಮೂರನೇ ಕಣ್ಣು ಯಾವುದು ಅಂದರೆ ಆರ್ಟಿಫಿಶಿಯಲ್​ ಇಂಟಿಲಿಜೆಂಟ್​ ಕ್ಯಾಮೆರಾ. ಯಾರಿಂದಲೂ ಬೇಕಾದರೂ ಎಸ್ಕೇಪ್​ ಆಗಬಹುದು ಆದರೆ, ಈ ಎಐ ಕ್ಯಾಮೆರಾದಿಂದ ಎಸ್ಕೇಪ್​ ಆಗಲು ಸಾಧ್ಯಾನೇ ಇಲ್ಲ. ಪ್ರಮುಖ ನಗರಗಳ ಟ್ರಾಫಿಕ್​ ಸಿಗ್ನಲ್​ಗಳಲ್ಲಿ ಇದೀಗ ಎಐ ಆಧರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾರೇ ಆಗಿರಲಿ ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡಿದರೆ ಈ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬೀಳಲೇಬೇಕು. ಕ್ಯಾಮೆರಾ ತಾನೇ ಅದೇನು ವರ್ಕ್​ ಆಗುತ್ತಾ ಅಂತಾ ಅಪ್ಪಿತಪ್ಪಿ ಪರೀಕ್ಷೆ ಮಾಡಲು ಹೋಗಬೇಡಿ. ಒಂದು ವೇಳೆ ಪರೀಕ್ಷೆ ಮಾಡಿದರೆ ಏನು ಆಗುತ್ತದೆ ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

    ಕ್ಯಾಮೆರಾ ವರ್ಕ್​ ಆಗುತ್ತಾ ಅಂತ ಪರೀಕ್ಷೆ ಮಾಡಲು ಬೈಕ್​ನಲ್ಲಿ ಸಾಹಸ ಪ್ರದರ್ಶಿಸಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರಿಬ್ಬರ ಲೈಸೆನ್ಸ್​ ಅನ್ನು ಆರ್​ಟಿಒ ರದ್ದುಗೊಳಿಸಿದೆ. ಈ ಘಟನೆ ಕೇರಳದ ವಡಕರದಲ್ಲಿ ನಡೆದಿದೆ.

    ಚಾಲಾದ್‌ನ ಮತ್ತೋರ್ವ ವ್ಯಕ್ತಿ ವಾಹನ ಮುಂಭಾಗದ ನೊಂದಣಿ ಸಂಖ್ಯೆಯನ್ನು ಒಂದು ಕೈನಲ್ಲಿ ಮರೆ ಮಾಚಿಕೊಂಡು ಒಂದೇ ಬೈಕ್​ನಲ್ಲಿ ಮೂವರು ಮಂದಿ ಪ್ರಯಾಣ ಮಾಡುತ್ತಿದ್ದರು. ಇದು ಕೂಡ ಎಐ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಇದೀ ಎಲ್ಲರ ಡ್ರೈವಿಂಗ್​ ಲೈಸೆನ್ಸ್​ ಅನ್ನು ರದ್ದು ಮಾಡಲಾಗಿದೆ. ಹೀಗಾಗಿ ಎಐ ಕ್ಯಾಮೆರಾವನ್ನು ಯಾವುದೇ ಕಾರಣಕ್ಕೂ ಪರೀಕ್ಷೆ ಮಾಡಬಾರದು ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ. ಇಲ್ಲವಾದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬೀಳುವುದರ ಜತೆಗೆ ಲೈಸೆನ್ಸ್​ ಕೂಡ ರದ್ದಾಗುತ್ತದೆ.

    ಇನ್ನೂ ‘ಸುರಕ್ಷಿತ ಕೇರಳ’ ಯೋಜನೆಯ ಭಾಗವಾಗಿ ರಾಜ್ಯದಾದ್ಯಂತ ಸರಿಸುಮಾರು 700ಕ್ಕೂ ಅಧಿಕ AI ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಪ್ರಾಥಮಿಕವಾಗಿ ಟ್ರಾಫಿಕ್ ನಿಯಮ ಉಲ್ಲಂಘನೆಗಳಾದ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ, ಸೀಟ್ ಬೆಲ್ಟ್ ಧರಿಸದೆ ಇರುವುದು, ವೇಗದ ಮಿತಿಯನ್ನು ಮೀರುವುದು, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು ಮತ್ತು ಸಿಗ್ನಲ್​ ಜಂಪ್​ ಮಾಡುವುದು ಸೇರಿದಂತೆ ಮುಂತಾದ ಸಂಚಾರ ಅಪರಾಧಗಳನ್ನು ಪತ್ತೆ ಹಚ್ಚಲಿದೆ. (ಏಜೆನ್ಸೀಸ್).

    ಕಾರಿನೊಳಗೆ ಇರಲೇ ಇಲ್ಲ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ! ಹಾಗಾದ್ರೆ ಯಾರು ಆಕೆ? ಏನಿದು ನಿಗೂಢ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts