More

    ಮಹಾಮಾರಿ ಕರೊನಾದಿಂದ ಹೀಗೂ ಆಗುತ್ತಾ? ಮಗಳ ಸ್ಥಿತಿ ಕಂಡು ಬೆಚ್ಚಿಬಿದ್ದ ತಾಯಿ…!

    ಲಂಡನ್​: ಉರಿಯೂತದ ರೋಗದ ವಿರುದ್ಧ ಹೋರಾಡುತ್ತಿರುವ ಮಗಳ ಫೋಟೋವನ್ನು ಬಿಡುಗಡೆ ಮಾಡಿರುವ ತಾಯಿಯೊಬ್ಬಳು ಕರೊನಾ ವೈರಸ್​ನಿಂದಲೇ ತನ್ನ ಮಗಳಿಗೆ ಹೀಗಾಗಿರಬಹುದು ಎಂದು ನಂಬಿದ್ದಾಳೆ.

    ಇದನ್ನೂ ಓದಿ: ಕೆಲಸದ ಆಮಿಷವೊಡ್ಡಿ ಹೊರರಾಜ್ಯದಿಂದ ಅಮಾಯಕ ಹೆಣ್ಣು ಮಕ್ಕಳನ್ನು ಕರೆತಂದು ದುಷ್ಕೃತ್ಯ: ಇಬ್ಬರ ಬಂಧನ

    ಗ್ರೇಸ್ ಹೆವೆನ್ಸ್​ (13) ಉರಿಯೂತದಿಂದ ಬಳಲುತ್ತಿರುವ ಬಾಲಕಿ. ಇಂಗ್ಲೆಂಡ್​ನ ನಾನ್ ಮೆಟ್ರೋಪಾಲಿಟನ್​ ಕೌಂಟಿ ಗ್ಲೌಸೆಸ್ಟರ್‌ಶೈರ್ ನಿವಾಸಿಯಾಗಿರುವ ಹೆವೆನ್ಸ್, ನೋವುಂಟು ಮಾಡುವ ಹಾಗೂ ಅಂಗಾಂಗಳಲ್ಲಿ ಉರಿಯೂತ ಎನಿಸುವ ಕೆಂಪುಗುಳ್ಳೆಗಳನ್ನು ಹೊಂದಿದ ಕಾಯಿಲೆಯಿಂದ ಬಳಲುತ್ತಿದ್ದಳು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗುತ್ತಿದ್ದಾಳೆ.

    ಹೆವೆನ್ಸ್​ ಅನ್ನು ಪರಿಶೀಲಿಸಿದ ನಂತರ ಆಕೆಗೆ ಹೆನೊಚ್-ಷಾನ್ಲೀನ್ ಪರ್ಪುರಾ (ಎಚ್‌ಎಸ್‌ಪಿ) ರೋಗ ನಿರ್ಣಯಿಸಲಾಗಿದ್ದು, ಇದು ಕವಾಸಕಿ ಕಾಯಿಲೆಯನ್ನು ಹೋಲುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: 8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!

    ಬಾಲ್ಯದ ಉರಿಯೂತದ ಲಕ್ಷಣಗಳು ಆರಂಭಿಕ ಕಾಯಿಲೆಯಿಂದ ಪ್ರಚೋದಿಸಲ್ಪಟ್ಟ ದ್ವಿತೀಯ ಸ್ಥಿತಿಯಾಗಿದ್ದು, ಏಪ್ರಿಲ್‌ನಿಂದ ಇಂಗ್ಲೆಂಡಿನಾದ್ಯಂತ ಈ ರೀತಿಯ 100 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇದರ ನಡುವೆ ಇದು ಕರೊನಾ ವೈರಸ್‌ಗೆ ಸಂಬಂಧಿಸಿದೆ ಎಂಬ ಆತಂಕವೂ ಮನೆ ಮಾಡಿದೆ.

    ಇನ್ನು ಹೆವೆನ್ಸ್​ ತಾಯಿ ರಾಚೆಲ್​ ಹೆವೆನ್ಸ್​ (47) ವೃತ್ತಿಯಲ್ಲಿ ಇವೆಂಟ್​ ಪ್ಲಾನರ್ ಆಗಿದ್ದು, ಕರೊನಾದಿಂದಲೇ ತನ್ನ ಮಗಳಿಗೆ ಎಚ್​ಎಸ್​ಪಿ ರೋಗ ಲಕ್ಷಣ ಬಂದಿದೆ ಎಂದು ನಂಬಿದ್ದಾರೆ. ರಾಚೆಲ್​ ಪತಿ ಜಸ್ಟಿನ್​ ಹೆವೆನ್ಸ್​ (52) ಮಾನಸಿಕ ಚಿಕಿತ್ಸಕರಾಗಿದ್ದು, ಕರೊನಾದಿಂದಲೇ ತಮ್ಮ ಮಗಳಿಗೆ ಈ ರೀತಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆ್ಯಂಡಿಬಾಡಿ ಪರೀಕ್ಷೆಗೆ ಎದುರು ನೋಡುತ್ತಿದ್ದಾರೆ.

    ಇದನ್ನೂ ಓದಿ: VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಕ್​ ವಿಮಾನ ಪತನದ ಭೀಕರ ದೃಶ್ಯ…!

    ರೋಗ ಕಾಣಿಸಿಕೊಂಡಿದ್ದು ಹೇಗೆ?
    ತುಂಬಾ ಉತ್ಸಾಹಿಯಾಗಿದ್ದ ಗ್ರೇಸ್ ಹೆವೆನ್ಸ್​ ಫೆ.28ರಂದು ಶಾಲೆಯಿಂದ ಮನೆಗೆ ಮರಳಿದಾಗ ಹೊಟ್ಟೆ ನೋವಾಗುತ್ತಿರುವ ಹಾಗೂ ಉರಿ ಅನುಭವದ ಬಗ್ಗೆ ಹೇಳಿಕೊಂಡಿದ್ದಳು. ಬಳಿಕ ಎರಡು ಬಾರಿ ಆಸ್ಪತ್ರೆಗೆ ತೋರಿಸಿದಾಗ ಅಪೆಂಡಿಕ್ಸ್ ಆಗಿಬಹುದೆಂದು ಶಂಕಿಸಿ ಗ್ಲೌಸೆಸ್ಟರ್‌ಶೈರ್​ನಲ್ಲಿನ ರಾಯಲ್ ಹಾಸ್ಪಿಟಲ್​ ಚಿಲ್ಡ್ರನ್​ ಸೆಂಟರ್​ಗೆ ಸೇರಿಸಲಾಗಿತ್ತು.​

    ಈ ವೇಳೆ ಯಾವುದೇ ಲಕ್ಷಣಗಳು ಗೋಚವಾಗದಿದ್ದಾಗ ಮನೆಗೆ ವಾಪಸ್​ ಕಳುಹಿಸಲಾಗಿತ್ತು. ನಂತರ ಮೈಮೇಲೆ ಗುಳ್ಳೆಗಳು ಮೂಡಲು ಆರಂಭಿಸಿದ ಬೆನ್ನಲ್ಲೇ ಮಾರ್ಚ್​ 5 ರಂದು ನಾಲ್ಕು ವಾರಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕೆಯ ಕಿಡ್ನಿಯಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೋನ್​ ಸೋರಿಕೆಯಾಗುತ್ತಿರುವುದನ್ನು ಕಂಡು ಚಿಕಿತ್ಸೆ ನೀಡಲಾಗಿದ್ದು, ಸದ್ಯ ಡಿಸ್ಚಾರ್ಜ್​ ಆಗಿರುವ ಹೆವೆನ್ಸ್​ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾಳೆ. ಅಂದಹಾಗೆ ಕರೊನಾ ಸೋಂಕಿಗೆ ಒಳಗಾದರೆ ಕಿಡ್ನಿ ತೊಂದರೆ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತದೆ. (ಏಜೆನ್ಸೀಸ್​)

    ಮತ್ತೊಂದು ಸುತ್ತಿನ ಸೀಲ್​ ​ಡೌನ್​ ಬರುತ್ತಾ? ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ಪಾಲಿಸಿದರೆ ಏಳು ರಾಜ್ಯಗಳು ಸಂಪೂರ್ಣ ಬಂದ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts