ಬಳ್ಳಾರಿ: ಸಾಲಭಾದೆ ತಾಳಲಾಗದೆ ಮೂವರು ‘ಕೆರೆಗೆ ಹಾರ’ ಆಗಿದ್ದಾರೆ. ಸಾಲದ ಹೊರೆಯಿಂದ ನೊಂದಿರುವ ರೈತ ಮಹಿಳೆ ಮಕ್ಕಳಿಬ್ಬರ ಜತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ಸಿರುಗುಪ್ಪದ ಶಾಲಿಗನೂರು ನಿವಾಸಿಗಳಾಗಿದ್ದ ನಾಗರತ್ನ (40), ಶ್ರುತಿ (12), ಗಿರಿಜಾ (7) ಮೃತಪಟ್ಟವರು. ಮಾಡಿದ್ದ ಸಾಲವನ್ನು ತೀರಿಸಲಾಗದೆ ಮನನೊಂದು ಇವರು ಗ್ರಾಮದ ಹೊರಭಾಗದ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ನಾಗರತ್ನ ಆಂಧ್ರ ಬ್ಯಾಂಕ್ನಲ್ಲಿ 5.6 ಲಕ್ಷ ರೂಪಾಯಿ ಮಾತ್ರವಲ್ಲದೆ ಖಾಸಗಿಯಾಗಿ 15 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿರಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿರಗುಪ್ಪ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಪೋರ್ನ್ ಸೈಟಿನಲ್ಲಿ ತಮ್ಮದೇ ವಿಡಿಯೋ ನೋಡಿ ದಂಪತಿ ಶಾಕ್: ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸೋ ಸತ್ಯ!