ಸಿಡಿಲು ಬಡಿದು ತಾಯಿ ಮಕ್ಕಳಿಬ್ಬರ ಮರಣ, ಮೈದುನನ ಸ್ಥಿತಿ ಗಂಭೀರ..

Lightning F
Published on

ಯಾದಗಿರಿ: ರಾಜ್ಯದಲ್ಲಿ ಆಗಾಗ ಸಿಡಿಲು ಅಪ್ಪಳಿಸಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣ ನಡೆಯುತ್ತಿದ್ದು, ಇದೀಗ ಆ ಪಟ್ಟಿಗೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ಅದರಲ್ಲೂ ಈ ಬಾರಿ ಸಿಡಿಲು ಬಡಿದು ತಾಯಿ ಹಾಗೂ ಆಕೆಯ ಮಕ್ಕಳಿಬ್ಬರು ಕೂಡ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಂದೆಡೆ ಮೈದುನನ ಸ್ಥಿತಿ ಚಿಂತಾಜನಕವಾಗಿದೆ.

ಯಾದಗಿರಿ ತಾಲೂಕಿನ ಎಮ್ ಹೊಸಳ್ಳಿ ಗ್ರಾಮದ ಬಳಿ ಈ ಪ್ರಕರಣ ನಡೆದಿದೆ. ಗಾಜರಕೋಟ್ ಗ್ರಾಮದ ಮೋನಮ್ಮ (25), ಈಕೆಯ ಮಕ್ಕಳಾದ ಬಾನು (4), ಶ್ರೀನಿವಾಸ (2) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಆಸ್ಪತ್ರೆಗೆಂದು ತೆರಳಿದ್ದ ಇವರು ಮರಳುವಾಗ ಏಕಾಏಕಿ ಮಳೆ ಬಂದಿದ್ದರಿಂದ ಅದರಿಂದ ರಕ್ಷಿಸಿಕೊಳ್ಳಲು ಗಿಡವೊಂದರ ಬಳಿ ನಿಂತಿದ್ದರು. ಇದೇ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಮಕ್ಕಳಿಬ್ಬರ ಜತೆಗೆ ತಾಯಿಯೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮೋನಮ್ಮನ ಮೈದುನ ಭೀಮಾಶಂಕರ್ (32) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅದೇ ಗ್ರಾಮದಲ್ಲಿ ಮತ್ತೊಬ್ಬ ಸಾವು: ಅದೇ ಗ್ರಾಮದ ಇನ್ನೊಂದು ಕಡೆ ಸಿಡಿಲು ಬಡಿದು ಸಾಬಣ್ಣ (17) ಎಂಬ ಯುವಕನೊಬ್ಬ ಸಾವಿಗೀಡಾಗಿದ್ದಾನೆ. ಈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net