More

    ಕೊನೆಗೂ ಸಿಕ್ಕಿಬಿದ್ದ ಈ ಕುಖ್ಯಾತ ವಂಚಕ; ಈತನ ವಿರುದ್ಧ ದೇಶಾದ್ಯಂತ ಇವೆ 187 ಕೇಸ್​ಗಳು​!

    ಮುಂಬೈ: ಈತನಿಗೆ 63 ವರ್ಷ, ಟಿಪ್​-ಟಾಪ್​ ಲೈಫ್​ ಸ್ಟೈಲ್​​, ಹೈಕ್ಲಾಸ್​ ಇಂಗ್ಲಿಷ್​. ಇವನಿಗಿರುವ ಅಲಿಯಾಸ್​ ಹೆಸರುಗಳೇ ಅನೇಕ. ಒಂದು ಡಜನ್​ಗೂ ಹೆಚ್ಚು ಹೆಸರುಗಳನ್ನು ಹೊಂದಿರುವ ಈತನ ಬಳಿ ಇರುವ ನಕಲಿ ಪ್ಯಾನ್​ ಕಾರ್ಡ್​, ಆಧಾರ್​ ಕಾರ್ಡ್​ಗಳೆಷ್ಟು ಗೊತ್ತೇ? ಬರೋಬ್ಬರಿ 58. ಅಷ್ಟಕ್ಕೂ ಈತನ ಟಾರ್ಗೆಟ್​ ಏನಿದ್ದರೂ ಸ್ಟಾರ್​ ಹೋಟೆಲ್​ಗಳೇ. ಸ್ಟಾರ್ ಅಥವಾ ಡಿಲಕ್ಸ್ ಹೋಟೆಲ್​ಗಳಿಗೆ ಗುರಿ ಇಟ್ಟು ಬಾಣ ಬಿಟ್ಟನೆಂದರೆ ಹೊಟೇಲ್​ನವರು ‘ಬಿಲ್​’ ಎತ್ತಿಕೊಳ್ಳುವುದರಲ್ಲಿ ಇವನು ಪರಾರಿ ಆಗಿರುತ್ತಾನೆ.

    ಕಳೆದ ಕೆಲ ವರ್ಷಗಳಿಂದ ಮೋಸ್ಟ್ ವಾಂಟೆಡ್​ ಆಗಿದ್ದ ಈತ ಕೊನೆಗೂ ಮುಂಬೈ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ದೇಶಾದ್ಯಂತ ಹಲವು ಹೋಟೆಲ್​ಗಳವರಿಗೆ ಮೋಸ ಮಾಡಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಈತ ಕೊನೆಗೆ ಮುಂಬೈನ ಹೋಟೆಲೊಂದರಲ್ಲಿ ಮೋಸ ಮಾಡಿ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ತಮಿಳುನಾಡು ಮೂಲದ ಈತನ ಹೆಸರು ವಿನ್ಸೆಂಟ್​ ಜಾನ್​. ಮುಂಬೈನ ಹೋಟೆಲ್​ ರಿಗೆಂಜಾದವರಿಗೆ ಮೋಸ ಮಾಡಿದ್ದ ಈತ, ಅವರು ಕೊಟ್ಟ ದೂರಿನ ಮೇರೆಗೆ ಸಿಕ್ಕಿಬಿದ್ದಿದ್ದಾನೆ. ಡಿ. 13ರಂದು ಹೋಟೆಲ್​ನವರು ದೂರು ನೀಡಿದ್ದು, ಡಿ. 15ರಂದು ಪೊಲೀಸ್​ನವರು ಈತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಹೋಗುವುದರೊಳಗೆ ಬಂತು ಮತ್ತೊಂದು ಡೆಡ್ಲಿ ಸೋಂಕು! ದೇಶದ ಹಲವು ಭಾಗಗಳಲ್ಲಿ ಪತ್ತೆ, 9 ಸಾವು! 

    ಕಾರ್ಪೋರೇಟ್​ ಉದ್ಯೋಗಿಯ ಥರ ಹೈಫೈ ಆಗಿ ಹೋಟೆಲ್​ಗೆ ಎಂಟ್ರಿ ಕೊಡುವ ಈತ ಬಿಸಿನೆಸ್ ಮೀಟ್ ಎಂದು ಹೋಟೆಲ್ ಬುಕ್​ ಮಾಡಿ, ಭಾರಿ ಬಿಲ್ ಬರುವಂತೆ ಊಟಕ್ಕೂ ಆರ್ಡರ್ ಮಾಡುತ್ತಿದ್ದ. ಕೊನೆಗೆ ಹೋಟೆಲ್​ನಲ್ಲಿರುವ ದುಬಾರಿ ಮದ್ಯ, ವಸ್ತುಗಳನ್ನು ಎತ್ತಿಕೊಂಡು ಪರಾರಿಯಾಗುತ್ತಿದ್ದ. ಮುಂಬೈನ ಹೋಟೆಲ್ ರಿಗೆಂಜಾದಲ್ಲಿ ಬಿಜಿನೆಸ್ ಮೀಟ್ ಇದೆ ಎಂದು ಒಂದು ಡಜನ್​ ಗೆಸ್ಟ್​ಗಳಿಗೆ ಬ್ಯಾಂಕ್ವೆಟ್​ ಹಾಲ್​ ಬುಕ್ ಮಾಡಿದ್ದ. ಮಾತ್ರವಲ್ಲ ದುಬಾರಿ ಪಾನೀಯ ಹಾಗೂ ಊಟವನ್ನೂ ಆರ್ಡರ್ ಮಾಡಿದ್ದ. ಪ್ರೆಸೆಂಟೇಷನ್ ನೀಡಲು ಬೇಕು ಎಂದು ಹೋಟೆಲ್​ನವರಿಂದಲೇ ಲ್ಯಾಪ್​ಟಾಪ್​ ಪಡೆದಿದ್ದ. ಆದರೆ ಎಷ್ಟು ಹೊತ್ತಾದರೂ ಬುಕ್​ ಮಾಡಿದ್ದ ಟೈಮ್​ಗೆ ಗೆಸ್ಟ್​ಗಳು ಬರದಿದ್ದಾಗ ಈತನಿದ್ದ ರೂಮ್​ಗೆ ಹೋಗಿ ನೋಡಿದರೆ ಲ್ಯಾಪ್​ಟಾಪ್ ಸಹಿತ ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದ. ತಾಂತ್ರಿಕ ಸುಳಿವಿನ ಮೇರೆಗೆ ಈತನ ಜಾಡು ಹಿಡಿದು ಥಾಣೆಯ ಒಂದು ಪ್ರದೇಶದಲ್ಲಿ ಅಡಗಿಕೊಂಡಿದ್ದನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

    ತಮಿಳುನಾಡಿನ ತೂತುಕುಡಿ ಜಿಲ್ಲೆ ಕಿಲ ಉರುಡ್ಡಿ ಎಂಬಲ್ಲಿನ ಈತ ಹಲವು ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದುದಲ್ಲದೆ ಆ ಹೆಸರುಗಳನ್ನು ಬಳಸಿ ಹಲವಾರು ಪ್ಯಾನ್​ ಹಾಗೂ ಆಧಾರ್​ ಕಾರ್ಡ್​ಗಳನ್ನು ಪಡೆದಿದ್ದ. ದೇಶಾದ್ಯಂತ ಈತನ ವಿರುದ್ಧ 187 ಪ್ರಕರಣಗಳು ದಾಖಲಾಗಿದ್ದು, ಬಹಳ ದಿನಗಳಿಂದ ಪೊಲೀಸರು ಈತನ ಶೋಧದಲ್ಲಿದ್ದರು. ಈಗ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್ ಸೇರಿ ಬೇರೆ ಬೇರೆ ರಾಜ್ಯಗಳ ನಾನಾ ಸ್ಟಾರ್ ಹೋಟೆಲ್​ಗಳಲ್ಲಿ ಇದೇ ರೀತಿ ವಂಚನೆ ನಡೆಸಿದ್ದ. ಅಲ್ಲಿಂದ ಕದ್ದಿದ್ದ ದುಬಾರಿ ವಸ್ತುಗಳನ್ನು ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಥಾಣೆ ನ್ಯಾಯಾಲಯ ಶುಕ್ರವಾರದವರೆಗೆ ಈತನನ್ನು ಪೊಲೀಸ್​ ಕಸ್ಟಡಿಗೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ! 

    ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

    ಪಾಠ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಶಿಕ್ಷಕ!

    ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ…

    ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts