More

    ಮನಿಮಾತು| ಅಕ್ಕನ ವೇತನ ಆರು ಲಕ್ಷ ರೂಪಾಯಿ ಇದ್ದು, ಆದಾಯ ತೆರಿಗೆ ಪಾವತಿಸಬೇಕೆ?

    ಮನಿಮಾತು| ಅಕ್ಕನ ವೇತನ ಆರು ಲಕ್ಷ ರೂಪಾಯಿ ಇದ್ದು, ಆದಾಯ ತೆರಿಗೆ ಪಾವತಿಸಬೇಕೆ? ನಮ್ಮ ಅಕ್ಕನ ವೇತನ ವಾರ್ಷಿಕ ರೂ. 6 ಲಕ್ಷ ಇದೆ. ಹಾಗಾದರೆ ಇವರು ಆದಾಯ ತೆರಿಗೆ ಕಟ್ಟಬೇಕೆ? | ಯಲಗೂರೇಶ ಗಂಗಶೆಟ್ಟಿ ವಿಜಯಪುರ

    2019 ರ ಬಜೆಟ್​ನಲ್ಲಿ ರೂ. 5 ಲಕ್ಷದ ವರಗಿನ ಆದಾಯವಿರುವವರಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87(ಎ) ಅಡಿಯಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಎಂದು ತಿಳಿಸಲಾಗಿದೆ. ಇದರಂತೆ ನಿಮ್ಮ ವಾರ್ಷಿಕ ಆದಾಯ ರೂ. 5 ಲಕ್ಷದ ವರೆಗೆ ಇದ್ದರೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಆದರೆ ನಿಮ್ಮ ಆದಾಯ ರೂ. 5 ಲಕ್ಷಕ್ಕಿಂತ ಜಾಸ್ತಿ ಇದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿಯೂ ಸಹಿತ ಆದಾಯ ತೆರಿಗೆ ಕಾಯ್ದೆಯಡಿ ಇರುವ ಕೆಲವು ವಿನಾಯ್ತಿ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡರೆ ವಾರ್ಷಿಕ 8 ಲಕ್ಷ ರೂ. ವರೆಗೆ ಆದಾಯ ಹೊಂದಿರುವ ವೇತನದಾರರು ಕೂಡ ಯಾವುದೇ ತೆರಿಗೆ ಕಟ್ಟದೇ ನಿರುಮ್ಮಳವಾಗಿರಬಹುದು. (ಪಟ್ಟಿ ಗಮನಿಸಿ)

    ಆದಾಯ ತೆರಿಗೆ ಮಿತಿ 2019-20 ( ಸಾಮಾನ್ಯ ನಾಗರಿಕರಿಗೆ): 60 ವರ್ಷ ಒಳಪಟ್ಟ ಸಾಮಾನ್ಯ ನಾಗರಿಕರು ರೂ. 2.5 ಲಕ್ಷ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ರೂ. 2.5 ಲಕ್ಷದಿಂದ ರೂ. 5 ಲಕ್ಷ ವರೆಗಿನ ಆದಾಯಕ್ಕೆ ಶೇ 5 ರಷ್ಟು ತೆರಿಗೆ ಪಾವತಿಸಬೇಕು. ರೂ. 5 ಲಕ್ಷದಿಂದ ರೂ. 10ಲಕ್ಷ ವರೆಗಿನ ಆದಾಯಕ್ಕೆ ಶೇ 20 ರಷ್ಟು ತೆರಿಗೆ ಕಟ್ಟಬೇಕು. ರೂ. 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ 30 ರಷ್ಟು ತೆರಿಗೆ ಅನ್ವಯ.

    ನಾನು ಗೃಹಸಾಲ ಪಡೆದು 600 ಚದರಡಿಯ ಮನೆ ಖರೀದಿಸಿದ್ದೇನೆ. ಮನೆಯಲ್ಲಿ ಎರಡು ಬೆಡ್ ರೂಂ ಇದ್ದು, ರಸ್ತೆ ಕಡೆಗೆ ಇರುವ ಕೊಠಡಿಯಲ್ಲಿ ದಿನಸಿ ಅಂಗಡಿ ತೆರೆಯುವ ಯೋಜನೆ ಇದೆ. ಲೇ ಔಟ್ ಒಳಗೆ ಅಂಗಡಿ ತೆರೆದು ವ್ಯಾಪಾರ ಮಾಡಲು ಪಾಲಿಕೆ ಅನುಮತಿ ಪಡೆಯಬೇಕೆ? ಮಾಹಿತಿ ಕೊಡಿ. ಇದಕ್ಕೆ ಚಾಲ್ತಿ ಖಾತೆಯನ್ನು ತೆರೆಯಬೇಕೆ?

    | ಎಸ್ ಗೋಪಿನಾಥ್ ಬೆಂಗಳೂರು

    ಚಿಲ್ಲರೆ ಅಂಗಡಿ ಆರಂಭಿಸಲು ಬಿಬಿಎಂಪಿ ವತಿಯಿಂದ ಟ್ರೇಡ್ ಲೈಸೆನ್ಸ್ ಪಡೆಯಬೇಕಾಗುತ್ತದೆ. ಟ್ರೇಡ್ ಲೈಸೆನ್ಸ್ ಗೆ ಅರ್ಜಿ ಹಾಕುವ ಮುನ್ನ ನಿಮ್ಮ ಮನೆ ಇರುವ ಕಡೆ ವಾಣಿಜ್ಯ ಮಳಿಗೆಗಳನ್ನು ಆರಂಭಿಸಲು ಅನುಮತಿ ಸಿಗುತ್ತದೆಯೇ ನೋಡಿಕೊಳ್ಳಿ. ನಿಯಮದ ಪ್ರಕಾರ ವಸತಿ ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳನ್ನು ಆರಂಭಿಸಲು ಬಿಬಿಎಂಪಿ ಟ್ರೇಡ್ ಲೈಸೆನ್ಸ್ ನೀಡುವುದಿಲ್ಲ. ಇನ್ನು ನೀವೇ ಅಂಗಡಿಯ ಮಾಲೀಕರಾಗಿರುವುದರಿಂದ ಚಾಲ್ತಿ ಖಾತೆ ತೆರೆಯಲೇಬೇಕೆಂಬ ಯಾವುದೇ ನಿಯಮವಿಲ್ಲ. ಉಳಿತಾಯ ಖಾತೆಯಲ್ಲೂ ಕೂಡ ನೀವು ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ನಿಮ್ಮ ಚಿಲ್ಲರೆ ವ್ಯಾಪಾರದಲ್ಲಿ ದೊಡ್ಡಮಟ್ಟದ ವಹಿವಾಟು ನಡೆಸಿದರೆ ಚಾಲ್ತಿ ಖಾತೆ ತೆರೆಯಬೇಕಾಗುತ್ತದೆ. ಚಾಲ್ತಿ ಖಾತೆಯಲ್ಲಿ ಗರಿಷ್ಠ ಟ್ರಾನ್ಸಾಕ್ಷನ್ ಗೆ ಅವಕಾಶ ಸಿಗುತ್ತದೆ. ಆದರೆ ಉಳಿತಾಯ ಖಾತೆಯಲ್ಲಿ ಚಲಾವಣೆಗೆ ಮಿತಿಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts