More

    ಜಾತಿಭೇದ ಹೋದರೆ ಅಸ್ಪಶ್ಯತೆ ನಿವಾರಣೆ ಸಾಧ್ಯ

    ಮೊಳಕಾಲ್ಮೂರು: ಜಾತಿಭೇದ ಮರೆತು ಮಠ, ಮಂದಿರ, ದೇವಸ್ಥಾನಗಳ ಗರ್ಭ ಗುಡಿ ಪ್ರವೇಶಿಸುವಂತೆ ಮೇಲು-ಕೀಳು ಜಾತಿ ಎಂಬ ಭೇದ ಬಿಟ್ಟು ಎಲ್ಲರೂ ಒಟ್ಟಾಗಿ ಬಾಳಿದಾಗ ಮಾತ್ರ ಅಸ್ಪಶ್ಯತೆ ನಿವಾರಣೆ ಸಾಧ್ಯವಾಗುತ್ತದೆ ಎಂದು ದೇವಸಮುದ್ರ ಮಂಡಲ ಮಾಜಿ ಪ್ರಧಾನ ಪಿ.ಕೆ. ಕುಮಾರಸ್ವಾಮಿ ಹೇಳಿದರು.

    ತಾಲೂಕಿನ ದೇವಸಮುದ್ರ ಗ್ರಾಪಂ ಆವರಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಹಾಗೂ ಅಸ್ಪಶ್ಯತೆ ನಿವಾರಣೆ ಕುರಿತು ಸಾರ್ವಜನಿಕವಾಗಿ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

    70 ವರ್ಷಗಳ ಹಿಂದಿದ್ದ ಮೌಢ್ಯತೆ, ಕಂದಾಚಾರ, ಅನಕ್ಷರತೆ ಪಿಡುಗನ್ನು ದೂರಾಗಿಸಲು, ಎಸ್‌ಸಿ, ಎಸ್ಟಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಬರಲು, ಸರ್ವರಿಗೂ ಸಾಮಾಜಿಕ ನ್ಯಾಯ ಸಿಗಲೆಂದು ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಇದರ ಆಶಯದಂತೆ ನಡೆದರೆ ಎಲ್ಲರಿಗೂ ಕ್ಷೇಮ ಲಭ್ಯವಾಗುತ್ತದೆ ಎಂದರು.

    ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಭಕ್ತಪ್ರಹ್ಲಾದ ಮಾತನಾಡಿ, ಸ್ವಾತಂತ್ರೃ ಬಂದು 70 ವರ್ಷ ಕಳೆದರೂ ಪ್ರತಿ ಹಳ್ಳಿಯಲ್ಲಿ ಜಾತಿ ಹೆಸರಿನ ಕಾಲೊನಿಗಳು ಕಾಣಸಿಗುತ್ತಿವೆ. ಈ ಅಸಮಾನತೆ ತೊಲಗಿ ಸರ್ವ ಸಮುದಾಯದವರೂ ಸಂತೋಷದಿಂದ ಬಾಳಬೇಕು. ಧರ್ಮ, ಜಾತಿ ಹೆಸರಿನಲ್ಲಿ ಕಾಲೊನಿ ನಿರ್ಮಿಸಿಕೊಳ್ಳುವ ಕೊಳಕು ಸಂಸ್ಕೃತಿ ನಿಲ್ಲಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಎಲ್ಲ ಸಮುದಾಯಗಳು ಮಾಡಬೇಕು ಎಂದರು.

    ಇದೇ ಸಂದರ್ಭದಲ್ಲಿ ಡಿ.ಒ. ಮುರಾರ್ಜಿ ಕಲಾ ತಂಡದವರು ಅಸ್ಪಶ್ಯತೆ ತಡೆ ಕುರಿತು ಕಿರು ನಾಟಕ ಪ್ರದರ್ಶಿಸಿದರು.
    ದೇವಸಮುದ್ರದ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ, ಸಮಾಜ ಕಲ್ಯಾಣಾಧಿಕಾರಿ ಬಿ.ಪಿ. ಪ್ರೇಮನಾಥ, ಪಿಡಿಒ ಬಾಂಡ್ರವಪ್ಪ, ಕಂದಾಯ ಅಧಿಕಾರಿ ಗೋಪಾಲ, ವಕೀಲರಾದ ಬಿ. ಬಸವರಾಜ್, ಹುಲುಗಪ್ಪ, ಹಾಲಸ್ವಾಮಿ, ಗುರುಸಿದ್ದಪ್ಪ, ಗ್ರಾಪಂ ಸದಸ್ಯರಾದ ಗೌರಮ್ಮ, ಬಸಮ್ಮ, ಶಿವಪ್ಪ, ಕುಮಾರಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts