More

    ಆಡ್ವಾಣಿಯಿಂದ ಉದ್ಘಾಟನೆ ಆಗಲಿದ್ಯಾ ರಾಮಮಂದಿರ?; ಮಾಜಿ ಉಪ ಪ್ರಧಾನಿ ಮನೆಯಲ್ಲಿ ಬಿಜೆಪಿ ವರಿಷ್ಠರ ದಂಡು

    ನವದೆಹಲಿ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ ಅವರ ಮನೆಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂತಾದವರ ದಂಡೇ ನೆರೆದಿತ್ತು.

    ಮಾತ್ರವಲ್ಲ, ಶೀಘ್ರದಲ್ಲೇ ಅನಾವರಣಗೊಳ್ಳಲಿರುವ ರಾಮಮಂದಿರವನ್ನು ಎಲ್.ಕೆ. ಆಡ್ವಾಣಿ ಅವರೇ ಉದ್ಘಾಟಿಸಲಿದ್ದಾರಾ ಎಂಬ ಕುತೂಹಲವೂ ಈ ಭೇಟಿಯಿಂದಾಗಿ ಬಿಜೆಪಿಯ ಕಟ್ಟರ್​ ಅಭಿಮಾನಿಗಳಲ್ಲಿ ಮೂಡಿದೆ.

    ಇದನ್ನೂ ಓದಿ: ಅಗಲಿದ ಮಗನ ನೆನಪಲ್ಲೇ 600ಕ್ಕೂ ಅಧಿಕ ರಸ್ತೆಗುಂಡಿಗಳನ್ನು ಮುಚ್ಚಿದ ತಂದೆ!

    ಅಷ್ಟಕ್ಕೂ ಮೋದಿ, ಷಾ, ಸಿಂಗ್ ಮುಂತಾದವರು ಇಂದು ಆಡ್ವಾಣಿ ಅವರ ಮನೆಗೆ ಹೋಗಿದ್ದ ವಿಚಾರವೇ ಬೇರೆ. ಆಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರುವ ಸಲುವಾಗಿ ಇವರೆಲ್ಲ ಅಲ್ಲಿಗೆ ಹೋಗಿದ್ದರು. ಆದರೆ ಮೋದಿ-ಆಡ್ವಾಣಿ ಅವರ ಭೇಟಿ ಖುಷಿ-ಅಚ್ಚರಿ ಜತೆಗೆ ಕೆಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.

    ಇದನ್ನೂ ಓದಿ: ಮುಂದಿನ ಜನವರಿಯಲ್ಲೇ ಅಯೋಧ್ಯೆ ರಾಮಮಂದಿರ ಉದ್ಘಾಟನೆ; ದಿನಾಂಕವೂ ನಿಗದಿ, ಇಲ್ಲಿದೆ ವಿವರ..

    2024ರ ಜನವರಿ 22ರಂದು ಶ್ರೀರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಮೋದಿ ಜತೆಗೆ ಇತರ ಪ್ರಮುಖ ಖಾತೆಗಳ ಸಚಿವರು, ಗಣ್ಯರು, ನಾಯಕರು ಮುಂತಾದವರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂಬುದು ಈಗಾಗಲೇ ಬಹಿರಂಗಗೊಂಡಿದೆ.

    ಇಂದು ಆಡ್ವಾಣಿ ಮನೆಗೆ ಮೋದಿ ಮತ್ತಿತರರು ಹೋಗಿ ಶುಭಾಶಯ ಕೋರಿದ್ದ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಕೆಲವರು ರಾಮಮಂದಿರವನ್ನು ಆಡ್ವಾಣಿ ಅವರಿಂದಲೇ ಉದ್ಘಾಟಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇದೀಗ ಈ ಭೇಟಿ ಆ ನಿಟ್ಟಿನಲ್ಲಿಯೂ ಪಾತ್ರ ವಹಿಸಿರಬಹುದಾ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.

    ಫೇಸ್​ಬುಕ್​ನಲ್ಲಿ ‘ಬ್ಯಾಕ್ ಪೇನ್​’; ಬಳಕೆದಾರರಿಂದ ವಿಶೇಷ ಬೇಡಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts